
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಶನಿವಾರ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ 10 ಕೋಟಿಗೂ ಅಧಿಕ ಸದಸ್ಯತ್ವ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಗೌಡ ಮುದ್ನಾಳ್ ಹೇಳಿದರು.
ನಗರದ ಮಾತಾಮಾಣಿಕೇಶ್ವರಿ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಷ್ಟ್ರದಾದ್ಯಂತ 10 ಕೋಟಿಗೂ ಅಧಿಕ ಸದಸ್ಯತ್ವವನ್ನು ಮಾಡುವ ಉದ್ದೇಶ ವಿದ್ದು ಹಿಂದುಳಿದ ವರ್ಗಗಳಿಗೆ ವಿಶೇಷವಾದ ಯೋಜನೆಗಳನ್ನ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಹಾಗೂ ರಾಜ್ಯಾಧ್ಯಕ್ಷ, ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ 6 ಲಕ್ಷ ಸದಸ್ಯತ್ವ ಮಾಡುವುದರ ಜೊತೆಗೆ ಪ್ರತಿ ಬೂತ್ ಮಟ್ಟದಲ್ಲಿ ಸುಮಾರು 300 ಸದಸ್ಯತ್ವ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಸದಸ್ಯ ಸ್ವಾಮಿದೇವ ದಾಸನಕೆರಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನೀತಾ ಚೌವ್ಹಾಣ್, ರಾಜ್ಯ ಶಿಕ್ಷಣ ಪ್ರಕೋಷ್ಠ ಸದಸ್ಯ ಕೃಷ್ಣ ಮೂರ್ತಿ ಕುಲಕರ್ಣಿ,ಶಾಂತಗೌಡ ಪಗಲಾಪುರ, ಗೋಪಾಲ್ ದಾಸನ್, ಬಸ್ಸು ಹೆಡಿಗಿಮದ್ರಾ, ವೆಂಕಟೇಶ್ ಹಿಂದುಪುರ್, ವಿರುಪಾಕ್ಷಪ್ಪಗೌಡ ಜೋಳದಡಿಗಿ, ಕಾಳಿಂಗಪ್ಪ ಹೊಸಮನಿ, ಮಲ್ಲುಗೌಡ ತಳಕ್, ಶರಣಪ್ಪ ಹೊನಿಗೇರಾ, ಬನಶಂಕರಯ್ಯಸ್ವಾಮಿ ಎಲ್ಹೇರಿ, ಬವರಾಜ್ ಟೈಲ್ಸ್, ತಿರುಪತಿ ವಕೀಲ, ಚಿರಂಜೀವಿ, ಸೋಮಣ್ಣ ಗೌಡ, ಮಹೇಶ್ ರೆಡ್ಡಿ ಹತ್ತಿಕುಣಿ, ಸೇರಿದಂತೆ ಬಿಜೆಪಿಯ ಅನೇಕರು ಉಪಸ್ಥಿತರಿದ್ದರು.
