ವಿಶ್ವ ರೇಬಿಸ್ ದಿನ ಆಚರಣೆ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

2024 ಘೋಷವಾಕ್ಯಾ “ರೇಬಿಸ್ ಗಡಿಗಳನ್ನು ಮೀರಿ ಮುಂದುವರಿಯೋಣ” ಎಂದು ಇರುತ್ತದೆ, ಯಾವುದೆ ಪ್ರಾಣಿ ಕಡಿತಕ್ಕೆ ಒಳಗಾದರೆ ನಿರ್ಲಕ್ಷಿಸಬೇಡಿ. ಸಾಬೂನನ್ನು ಬಳಸಿ 15 ನಿಮಿಷಗಳ ಕಾಲ ಗಾಯವನ್ನು ನಿರಂತರವಾಗಿ ನೀರಿನಿಂದ ತೊಳೆಯಿರಿ. ರೇಬಿಸ್ ನಿರೋಧಕ ಚುಚ್ಚುಮದ್ದು ಮತ್ತು ಇಮ್ಯೂನೋಗ್ಲೋಬಲಿನ್ ವೈದ್ಯರ ಸಲಹೆಯಂತೆ ಪೂರ್ಣಗೊಳಸಬೇಕು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಮ್.ಎಸ್ ಪಾಟೀಲ್ ಅವರು ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಾರ್ಯಾಲಯ ಇವರುಗಳ ಸಹಯೋಗದಲ್ಲಿ ಯಾದಗಿರಿ ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ 2024ರ ಸೆಪ್ಟೆಂಬರ್ 26 ರಂದು ಇತ್ತೀಚಿನ ವಿಶ್ವ ರೇಬಿಸ್ ದಿನ ಆಚರಣೆ ಹಿನ್ನೆಲೆ ಆರೋಗ್ಯದ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೇಬಿಸ್ ಒಂದು ಭೀಕರ ಮಾರಣಾಂತಿಕ ಕಾಯಿಲೆಯಾಗಿದ್ದು ವಿಶ್ವಾದ್ಯಂತ ರೇಬಿಸ್‌ಗೆ ಪ್ರತಿ 15 ನಿಮಿಶಕ್ಕ 1 ಸಾವು ಸಂಭವಿಸುತ್ತಿದೆ. 99% ಜನರಿಗೆ ನಾಯಿ ಕಡಿತದಿಂದ ರೇಬಿಸ್ ಬರುತ್ತದೆ. ಎಚ್ಚರ ರೇಬಿಸ್‌ನಿಂದ ಸಾಯುತ್ತಿರುª 10 ಮಂದಿ ಪೈಕಿ 4À ಜನ ಮಕ್ಕಳೆ ಆಗಿರುತ್ತಾರೆ. ಪ್ರಾಣಿಗಳು ಕಚ್ಚಿದಾಗ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಲಸಿಕಾ ವೇಳಾಪಟ್ಟಿಯಂತೆ ಪಡೆಯಿರಿ. ನಾಯಿ, ಪ್ರಾಣಿಗಳು ಕಚ್ಚಿದ ತಕ್ಷಣ ನಿಮ್ಮ ಹತ್ತಿರದ ಆಸ್ಪತ್ರೆ, ಆಂಟಿ ರೇಬಿಸ್ ಕ್ಲಿನಿಕ್‌ಗೆ ಭೇಟಿ ನೀಡಿರಿ. ಗಾಯಕ್ಕೆ ತಕ್ಷಣ ಯಾವುದಾದರು (ಲಭ್ಯವಿದ್ದಲ್ಲಿ)ಸೋಂಕು ನಿವಾರಕ ಮುಲಾಮು ಹಚ್ಚಿರಿ. ಪ್ರಾಣಿ ಕಚ್ಚಿದ ಗಾಯಕ್ಕೆ ಮಣ್ಣು, ಸಗಣಿ, ಕಾಫಿ ,ಪೌಡರ್ ,ಸಾಸಿವೆ ಎಣ್ಣೆ, ಮುಂತಾದ ವಸ್ತುಗಳನ್ನು ಹಚ್ಚಬೇಡಿ ಎಂದು ಹೇಳಿದರು.

ಪ್ರಾಣಿ ಕಚ್ಚಿದಾಗ ರೇಬಿಸ್ ಚುಚ್ಚುಮದ್ದು ಬೇಡ ಎಂದು ಹೇಳಬೇಡಿ. ಸಾಕು ಪ್ರಾಣಿಗಳು ಅಥವಾ ನಾಯಿ ಮರಿ ಕಚ್ಚಿದರು ನಿರ್ಲಕ್ಷಿಸಬೇಡಿ. ರೇಬಿಸ್ ಚಿಕಿತ್ಸೆಯನ್ನು ಮದ್ಯದಲ್ಲಿ ನಿಲ್ಲಿಸಬೇಡಿ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಳು ಉಚಿತವಾಗಿ ದೊರೆಯುತ್ತವೆ. 2030ಕ್ಕೆ ರೇಬಿಸ್ ನಿಂದ ಮುಕ್ತರಾಗೊಣ ಎಂದು ತಿಳಿಸಿದರು.

ಪ್ರಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಜಿಲ್ಲಾ ಎಪಿಡೊಮೊಲೊಜಿಸ್ಟ ಡಾ.ಸುನಿತಾ ನಿನ್ನೆಕರ್ ಅವರು ನೆರವೇರಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿ ತುಳಸಿರಾಮ ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಮೆಲ್ವಿಚಾರಣಾ ಅಧಿಕಾರಿಗಳು ಶಾಂತಿಲಾಲ್ ಜಿಲ್ಲಾ ವಂದನಾರ್ಪಣೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಆಸ್ಪತ್ರೆ ಉಪನ್ಯಾಸಕರಾಗಿ ಡಾ.ಪ್ರಶಾಂತ ನಾಡೇಕರ್, ಯಾದಗಿರಿ ವೆರ್ಟನರಿ ಅಧಿಕಾರಿಗಳು ಡಾ.ಸಂಗೀತಾ ಮೈಪಾಲ್ ರೆಡ್ಡಿ, ಶ್ರೀ ಆಂಜನೇಯಾ, ಶ್ರೀ ಬಾಪುಗೌಡ, ಶ್ರೀ ಅಂಬರೇಶ, ಯಾದಗಿರಿ ಜಿಲಾ ್ಲಆರೋಗ್ಯ ಶಿಕ್ಷಣಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.