
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಭಾರತೀಯ ಸ್ಟೇಟ್ ಬ್ಯಾಂಕ್ ಲೀಡ್ ಬ್ಯಾಂಕ್ ಮತ್ತು ಗ್ರಾಮೀಣಾಭಿವೃದ್ದಿ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಯಾದಗಿರಿ ವತಿಯಿಂದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವನ್ನು ಹಮ್ಮಿಕೈಗೊಳ್ಳಲಾಯಿತು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಭೀಮರಾವು ಪಂಚಳ ಅವರು ಮಾತಾನಾಡಿ, ಪರಿಸರ ಶುಚಿತ್ವ, ವೈಯಕ್ತಿಕ ಶುಚಿತ್ವ, ಪರಿಸರದ ಮಾಲಿನ್ಯ, ಪ್ಲಾಸ್ಟಿಕ್ ಬಳಕೆ ನಿಷೇಧ ಇವುಗಳ ಘನ ತ್ಯಾಜ್ಯದಿಂದ ಆರೋಗ್ಯ ಮೇಲೆ ಬೀರುವ ಪರಿಣಾಮ ವಿವರಿಸಿದರು,
ಈ ಸಂದರ್ಭದಲ್ಲಿ ಯಾದಗಿರಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಭೀಮರಾವ್ ಪಂಚಾಳ, ಗ್ರಾಮೀಣಾಭಿವೃದ್ದಿ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ನಿರ್ದೇಶಕರು ನರೇಂದ್ರ ಕುಮಾರ್ ದಿವಾಂಗನ್, ಕೆಜಿಬಿ ಸಲಹೆಗಾರರು ಶ್ರೀಧರ ಹಣಕಾಸು, ಲೀಡ್ ಪಟೇಲ್ ಸಹಾಯಕರು ಅಮೀರ್ ಪಟೇಲ್, RSETI ಸಿಬ್ಬಂದಿ ಶಫೀಕ್, ರಾಚಪ್ಪ ಉಪಸ್ಥಿತರಿದ್ದರು.
