
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಗುರುಮಠಕಲ್ ಮತಕ್ಷೇತ್ರದ ಕಾಳಬೆಳಗುಂದಿಯಲ್ಲಿ ನಡೆಯುತ್ತಿರುವ ಹೈಟೆಕ್ ಶೌಚಾಲಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
೧೦೦ ಕೋಟಿ ಟೆಂಡರ್ ೨೦೨೩-೨೪ನೇ ಸಾಲಿನ ಕರ್ನಾಟಕ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ನೀಡಿದ ಅನುದಾನದಲ್ಲಿ ಸಮುದಾಯ ನೈರ್ಮಲ್ಯ ಘಟಕ ಶೌಚಾಲಯ ಒಟ್ಟು ೪೦೦ ಕಾಮಗಾರಿಗಳಿಗೆ ಅನುಮೋದನೆಗೊಂಡಿದೆ.
ಬಳ್ಳಾರಿ ೫೦, ಬೀದರ್ ೬೦, ಕಲಬುರಗಿ ೮೦, ಕೊಪ್ಪಳ ೫೦, ರಾಯಚೂರು ೬೦, ವಿಜಯನಗರ ೫೦, ಯಾದಗಿರಿ ಜಿಲ್ಲೆಯಲ್ಲಿ ೫೦ ಕಾಮಗಾರಿ ಪ್ರಾರಂಭಗೊಂಡಿದ್ದು, ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ೧೪ ಕಾಮಗಾರಿಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅಬ್ಬೆತುಮಕೂರು ಮತ್ತು ಕಾಳಬೆಳಗುಂದಿಯಲ್ಲಿ ಕಾಮಗಾರಿ ಆರಂಭ ಮಾಡಲಾಗಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಹೈಟೆಕ್ ಶೌಚಾಲಯ ನಿರ್ಮಾಣಕ್ಕಾಗಿ ಬುನಾದಿ ಹಂತದವರೆಗೆ ಕೆಆರ್‌ಡಿಎಲ್ ಸರ್ಕಾರಿ ಸಂಸ್ಥೆ ನೀಡಲಾಗಿದ್ದು, ಸರ್ಕಾರದ ನಿಯಮ ಮೀರಿ ಕೆಟಿಪಿ ಆಕ್ಟ್ ಮೀರಿ ಎಹೆಚ್‌ಐಆರ್‌ಐ ಕೊಲೆಬ್ರೇಟಿವ್ ಎಲ್‌ಎಲ್‌ಪಿ ಎಂಬ ಖಾಸಗಿ ಕಂಪನಿಗೆ ನೀಡಲಾಗಿದೆ. ಸಂಪೂರ್ಣ ಕಾಮಗಾರಿ ಕಳೆಪೆಮಟ್ಟದಿಂದ ಕೂಡಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದರು.
ಯಾರೋದೋ ಪ್ರಭಾವಿಗಳ ಒತ್ತಡಕ್ಕಾಗಿ ಅಥವಾ ಭ್ರಷ್ಟಾಚಾರಕ್ಕೊಳಗಾಗಿ ಹೈಟೆಕ್ ಶೌಚಾಲಯ ಕಾಮಗಾರಿ ನಿರ್ಮಾಣ ಈ ಕಂಪನಿಗೆ ಸರ್ಕಾರದ ನಿಯಮ ಮೀರಿ ನೀಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಶೌಚಾಲಯ ಕಟ್ಟಿ ಬಿಟ್ಟೋದ್ರೆ ಕರೆಂಟ್, ಕೌಂಪೌಂಡ್, ನೀರು ಒದಗಿಸುವವರು ಯಾರು ಎಂದು ಅಧಿಕಾರಿಗಳಿಗೆ ಕೇಳಿದಾಗ ಅಧಿಕಾರಿಗಳಿಂದ ಹಾರಿಕೆ ಉತ್ತರ ಸಿಗುತ್ತಿದೆ. ಕಂಪನಿಯವರಿಗೆ ಕೇಳಿದರೆ ಗ್ರಾಪಂ ವತಿಯಿಂದ ನರ‍್ವಹಣೆ ಮಾಡಲಾಗುತ್ತಿದೆ ಎನ್ನುವ ಉತ್ತರ ಸಿಗುತ್ತಿದೆ. ಹೈಟೆಕ್ ಶೌಚಾಲಯ ನಿರ್ವಹಣೆಗೆ ಗ್ರಾಪಂನಲ್ಲಿ ವಿಶೇಷ ಅನುದಾನ ಇರುವುದಿಲ್ಲ ಇರುವ ಅನುದಾನದಲ್ಲಿ ಮೂಲಸೌಕರ್ಯ ಸಾಕಾಗುತ್ತಿಲ್ಲವಾದ್ದರಿಂದ ಗ್ರಾಪಂ ಆಡಳಿತದ ತಲೆಗೆ ಕಟ್ಟುವ ಯತ್ನ ನಡೆಯುತ್ತಿದ್ದು, ಇದು ಕೇವಲ ತೋರಿಕೆಗೆ ನಡೆದ ಹೈಟೆಕ್ ಶೌಚಾಲಯ ಕಾಮಗಾರಿಯಾಗಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ರ‍್ಕಾರದ ಮುಖ್ಯ ಕರ‍್ಯರ‍್ಶಿಯವರಿಗೆ ಹೈಟೆಕ್ ಶೌಚಾಲಯ ಕಾಮಗಾರಿಯಲ್ಲಿ ಭ್ರಷ್ಟಾಚಾರವಾಗಿರುವ ಕುರಿತು ಪತ್ರ ಬರೆಯುತ್ತೇನೆ, ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಖಾಸಗಿ ಕಂಪನಿ ನೌಕರರು ಇದ್ದರು.
ಕಪ್ಪುಪಟ್ಟಿ ಧರಿಸಿ ಪಂಚಾಯತ್ ನೌಕರರ ಪ್ರತಿಭಟನೆಗೆ ಬೆಂಬಲಿಸಿದ ಶಾಸಕ ಕಂದಕೂರ
ಯಾದಗಿರಿ ಜಿಲ್ಲಾಡಳಿತ ಭವನದ ಎದುರು ಕಳೆದ ೪ ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಚಾಯತ್ ನೌಕರರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ನಾನು ಬೆಂಬಲವ್ಯಕ್ತಪಡಿಸುತ್ತಿದ್ದು, ನಿಮಗೋಸ್ಕರ ನಾನು ಕೂಡ ಒಂದು ದಿನ ಕಪ್ಪು ಬಟ್ಟೆ ಧರಿಸಿ ನಿಮ್ಮ ಹೋರಾಟಕ್ಕೆ ಬೆಂಬಲಿಸುವೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಬುಧುವಾರ ಪ್ರತಿಭಟನಾ ನಿರತರೊಂದಿಗೆ ಮಾತನಾಡುವ ಸಮಯದಲ್ಲಿ ತಿಳಿಸಿದಂತೆ ಗುರುವಾರದಂದು ತಾವು ಸ್ವತಃ ಕೈಗೆ ಕಪ್ಪು ಪಟ್ಟಿ ಧರಿಸಿ ಪಂಚಾಯತ್ ನೌಕರರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಗುರುವಾರದಂದು ಇಡೀ ದಿನ ತಮ್ಮ ದಿನಚರಿಯಂತೆ ನಡೆವ ಎಲ್ಲಾ ಕಾರ್ಯಕ್ರಮಗಳಲ್ಲೂ ಶಾಸಕರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿತು.
