ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಇಲ್ಲಿನ ವಾರ್ಡ್ 25ರ ಲಕ್ಷ್ಮೀ ಬಡಾವಣೆಯ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ಗುರುವಾರ ನಗರಸಭೆ ನಡೆ ವಾರ್ಡ್ ಕಡೆ ಅಭಿಯಾನ ಉದ್ಘಾಟಿಸಿ ಮಾತನಾಡಿ, ಆಸ್ತಿ ತೆರಿಗೆ, ನೀರಿನ ತೆರಿಗೆ ಹಾಗೂ ವಾಣಿಜ್ಯ ಮಳಿಗೆಗಳ ತೆರಿಗೆ ಇನ್ನು ಮುಂದೆ ತಾವು ಕಚೇರಿಗೆ ಬಂದು ಪಾವತಿಸುವ ಅವಶ್ಯಕತೆ ಇಲ್ಲ. ಎಲ್ಲ ದಾಖಲೆಗಳು ಇದ್ದರೆ, ಸ್ಥಳದಲ್ಲೇ ಪಾವತಿಸಬಹುದು ಎಂದರು.
ಅಲ್ಲದೆ, ಕಟ್ಟಡ ಪರವಾನಗಿಗೆ ಸಂಬಂಧಿಸಿದ ದಾಖಲಾತಿ ಒದಗಿಸಿದ್ದಲ್ಲಿ ಅತೀ ಶೀಘ್ರದಲ್ಲೇ ನಗರಸಭೆಯಿಂದ ಆನ್ ಲೈನ್ ಮೂಲಕ ಪರವಾನಗಿ ವ್ಯವಸ್ಥೆ ಮಾಡಲಾಗುವುದು. ಒಟ್ಟರೆಯಾಗಿ ಸಾರ್ವಜನಿಕರು ಅನಗತ್ಯವಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ಹಣಮಂತ ಇಟಗಿ ಮಾತನಾಡಿ, ರಾಜ್ಯದಲ್ಲಿ ವಿನೂತನ ಕಾರ್ಯಕ್ರಮ ನಮ್ಮಲ್ಲಿ ಹಮ್ಮಿಕೊಳ್ಳಲಾಗಿದೆ. ಖಾತಾ, ನಕಲ್ ಗಾಗಿ ಅಲೆದಾಡಿಸುತ್ತಿದ್ದಾರೆ. ಇದು ಇಂದೆ ಕೊನೆಯ ಆಗಬೇಕು. ಸಾರ್ವಜನಿಕ ಕೆಲಸ ಬೇಕ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪೌರಾಯುಕ್ತ ರಜನಿಕಾಂತ್ ಶೃಂಗೇರಿ, ರಾಮು ರಾಠೋಡ್ ಇದ್ದರು.

