ಇಂದು ಕೀಲು,ಎಲುಬು,ಮೂಳೆಗಳ ಉಚಿತ ತಪಾಸಣಾ ಶಿಬಿರ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಅಕ್ಟೋಬರ್ 21 ರಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ, ನುರಿತ ವೈದ್ಯರಿಂದ ಎಲುಬು, ಕೀಲು, ಮೂಳೆಗಳ ಉಚಿತ (ಬೋನ್, ಮಿನರಲ್, ಡೆನ್ಸಿಟಿ ) ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕೊರೊನಾ ರೆಮಿಡೀಸ್ ಕಂಪನಿಯ ಪ್ರತಿನಿಧಿ ವೀರಭದ್ರಯ್ಯ ಹಯ್ಯಾಳ ಪ್ರಕಟಣೆಗೆ ತಿಳಿಸಿದ್ದಾರೆ.

ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಎಸ್,ಬ್ಯಾಂಕ್ ಕೆಳಗಡೆ ಶ್ರೀ ಸಾಯಿ ಆಸ್ಪತ್ರೆಯ ಸಹಯೋಗದೊಂದಿಗೆ, ಡಾ: ಶರಣಗೌಡ ಹೊಂಗಲ್ ಅವರ ನೇತೃತ್ವದಲ್ಲಿ ಈ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ, ಆದ್ದರಿಂದ ಶಹಪುರ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಬಡ ರೋಗಿಗಳು ಎಲುಬು,ಕೀಲು ಮತ್ತು ಮೂಳೆಗಳ ತೊಂದರೆಯಿಂದ ಬಳಲುತ್ತಿದ್ದರೆ, ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಮೊಣಕಾಲು ನೋವು, ಬೆನ್ನು ನೋವು, ಸಮಸ್ಯೆಗಳು ಈ ಮೊದಲು 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಕಂಡು ಬರುತ್ತಿದ್ದವು, ಆದರೆ ಈಗ 30 – 40 ವಯಸ್ಸಿನವರೆಗೂ ಸಾಮಾನ್ಯವಾಗಿದೆ. ಇದಕ್ಕೆ ನಮ್ಮ ಬದಲಾದ ಆಹಾರ ಕ್ರಮ ದೈಹಿಕ ಚಟುವಟಿಕೆ ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ 9945835410, 7420010096, 6364300186. ನಂಬರಿಗೆ ಸಂಪರ್ಕಿಸಬಹುದು.