
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ವಡಗೇರಾ ತಾಲೂಕಿನ ವಡಗೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ,ಕೃಷ್ಣಾ ನದಿ ಅಡ್ಡಲಾಗಿ ನರ‍್ಮಿಸಲಾಗಿರುವ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಮೀನುಗಾರರ 60 ಕುಟುಂಬಗಳು ಹೊಂದಿರುವ ಜೋಪಡಿಗಳಿಗೆ ಮತ್ತು ಬೆಂಡೆಬೆಂಬಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ಪರಿಶೀಲನೆ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ವಡಗೇರಾ ತಾಲೂಕಿನ ಹಲಗೇರಾ ಗ್ರಾಮಕ್ಕೆ ಭೇಟಿ ನೀಡಿ ನಂತರ ಅಲೆಮಾರಿ ಕಾಲೋನಿಯಲ್ಲಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ರ‍್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಣೆ ಬಗ್ಗೆ ಪರಿಶೀಲಿಸಿ ಇಲ್ಲಿ ಯಾವದೇ ಅಭಿವೃದ್ಧಿ ಕರ‍್ಯಗಳೇ ಆಗಿಲ್ಲ ಎಂದು ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಜನರ ಜೀವನ ಕಷ್ಟಕರವಾಗಿದೆ. ಯಾವುದೇ ಅಭಿವೃದ್ಧಿ ಇಲ್ಲದ್ದರಿಂದ ಜನರು ತುಂಬಾ ಕಷ್ಟದಲ್ಲಿದ್ದಾರೆ. ಚರಂಡಿಯ ನೀರಿನ ಮೇಲೆ ಹೇಗೆ ನಡೆದಾಡಿಕೊಂಡು ಹೋಗಬೇಕು. ಶುದ್ಧ ಕುಡಿಯುವ ನೀರು ಇಲ್ಲ. ರಸ್ತೆ- ಚರಂಡಿ ವ್ಯವಸ್ಥೆ ಇಲ್ಲ. ಅಂಗನವಾಡಿ ಮಕ್ಕಳಿಗೆ ರ‍್ಭಿಣಿಯರಿಗೆ ಪೌಷ್ಟಿಕ ಆಹಾರ ಒದಗಿಸಬೇಕು ಎಂದು
ಅಲ್ಲಿನ ಜನರ ಅಭಿಪ್ರಾಯ ಕೇಳಿ ಅಧಿಕಾರಿಗಳಿಗೆ ಸೂಚಿಸಿ, ಯಾವುದೇ ಸಮಸ್ಯೆ ಆಗದಂತೆ ನೋಡಿ ಕೊಳ್ಳಿ ಎಂದು ಸೂಚಿಸಿದರು.
ವಡೆಗೇರ ತಾಲೂಕು ಸರ‍್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ,ವಿಶೇಷವಾಗಿ ರ‍್ಭಿಣಿಯರಿಗೆ, ಮಕ್ಕಳಿಗೆ ವಯಸ್ಸಾದ ಹಿರಿಯರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿ ರ‍್ಭಿಣಿಯರ ಆರೋಗ್ಯ ವಿಚಾರಿಸಿದರು.
ಕೃಷ್ಣಾ ನದಿ ಗೂಗಲ್ ಬ್ರಿಡ್ಜ್ ವೀಕ್ಷಣೆ ಮಾಡಿ ನದಿಯ ಹತ್ತಿರ ವಾಸವಾಗಿರುವ ಮೀನುಗಾರರ 60 ಕುಟುಂಬಗಳಿಗೆ ಭೇಟಿ ನೀಡಿ ನದಿಯ ಪಕ್ಕದಲ್ಲಿ ವಾಸ ಇರುವ ಜನರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಇವರ ಕುಲಕಸುಬು ಮೀನುಗಾರಿಕೆ ಮಾಡಿ ಜೀವನ ನಡೆಸಿಕೊಳ್ಳುವುದು ಇರುವದರಿಂದ ರ‍್ಕಾರದ ಸೌಲಭ್ಯ ವಂಚಿತರಾಗದಂತೆ ನೋಡಿಕೊಳ್ಳಬೇಕು. ಹಾಗೂ ಇವರ ಮಕ್ಕಳು ಶಿಕ್ಷಣದಿಂದ ಬಹಳ ದೂರ ಇದ್ದು ಪ್ರತಿಯೊಂದು ಸೌಲಭ್ಯವನ್ನು ಇವರಿಗೆ ತಲುಪಬೇಕು ಹಾಗೂ ಉತ್ತಮ ಶಿಕ್ಷಣ ದೊರಕಿಸಬೇಕು. ನೀವು ನಿಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಿ ಎಂದೂ ಸರ‍್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ಹಾಗೂ ಸಲಹೆ ನೀಡಿದರು.
ಬೆಂಡೆಬೆಂಬಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿರುವ ಸರ‍್ವಜನಿಕರ ಮತ್ತು ರೋಗಿಗಳ ಆರೋಗ್ಯವನ್ನು ವಿಚಾರಿಸಿ, ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ವೈದ್ಯ ಅಧಿಕಾರಿಗಳಿಗೆ ಆಸ್ಪತ್ರೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ, ಸರಿಯಾದ ಚಿಕಿತ್ಸೆ ನೀಡಿ ಎಂದು ತಿಳಿಸಿದರು.
