“ನಾಗರಿಕರ ಜೀವ,ಆಸ್ತಿ- ಪಾಸ್ತಿ ರಕ್ಷಣೆಯಲ್ಲಿ ಪೋಲಿಸ್‌ರ ಸೇವೆ ಅಮೂಲ್ಯ”

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಸೈನಿಕರು ದೇಶದ ಗಡಿ ಕಾಯಿದರೆ, ಪೊಲೀಸರು ದೇಶದೊಳಗಿನ ಜೀವ, ಆಸ್ತಿ-ಪಾಸ್ತಿ ಕಾಯುವ ಮೂಲಕ ಅಮ್ಯೂಲ ಕಾಯಕ ಮಾಡುತ್ತಿದ್ದಾರೆಂದು ಜಿಲ್ಲಾ ನ್ಯಾಯಾಧೀಶರಾದ  ಬಿ.ಎಸ್.ರೇಖಾ ಬಣ್ಣಿಸಿದರು.

ಯಾದಗಿರಿ ನಗರದ ಪೊಲೀಸ್ ಅಧಿಕ್ಷಕರ ಕಚೇರಿ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಪೊಲೀಸ್ ಹುತ್ಮಾತರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಜಗತ್ತಿನ ಬೇರೆ, ಬೇರೆ ದೇಶಗಳ ಪೊಲೀಸರ ಕರ್ತವ್ಯಕ್ಕಿಂತ, ನಮ್ಮ ದೇಶದ ಪೊಲೀಸರ ಕೆಲಸ ಗಮರ್ನಾಹವಾಗಿದೆ ಎಂದರು.

ನಮ್ಮ ರಾಜ್ಯದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ಸಂಬAಧ ಹೊಂದುವ ಮೂಲಕ ಜನಸ್ನೇಹಿಯಾಗಿದ್ದಾರೆ. ಜೀವದ ಹಂಗು ತೊರೆದು ರಕ್ಷಣೆ ನೀಡುವ ಸಮಯದಲ್ಲಿ ಅನೇಕರು ಜೀವ ಕಳೆದುಕೊಳ್ಳುತ್ತಾರೆ. ಪೊಲೀಸರಿಗೆ ಹಬ್ಬ ಹರಿದಿನಗಳು ಅಂತ ಕುಟುಂಬದವರೊAದಿಗೆ ಆಚರಿಸಲು ಅವಕಾಶವೇ ಇಲ್ಲ. ಜನರಿಗೆ ಸಂಭ್ರಮಿಸಲು ಅವಕಾಶ ನೀಡಿ, ಅವರು ರಕ್ಷಣೆಯಲ್ಲಿ ಇರುತ್ತಾರೆ. ಇದಕ್ಕಾಗಿ ಅವರೊಂದಿಗೊAದು ಗೌರವದ ನಮಸ್ಕಾರ ಎಂದು ರೇಖಾ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು, ಪ್ರಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಹುತ್ಮಾತರ ದಿನದ ಮಹತ್ವ ವಿವರಿಸಿ, ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ 216 ಪೊಲೀಸರು ಕರ್ತವ್ಯದ ವೇಳೆ ಜೀವ ಕಳೆದುಕೊಂಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಲವೀಶ್ ಒರ್ಡಿಯಾ, ಹೆಚ್ಚುವರಿ ಎಸ್.ಪಿ ಧರಣೇಶ ಅತಿಥಿಗಳಾಗಿ ಭಾಗವಹಿಸಿದ್ದರು.

ಡಿಎಸ್ಪಿಗಳಾದ ಜಾವೇದ್ ಇನಾಂದಾರ, ಅರುಣಕುಮಾರ, ಭರತ, ಸಿಪಿಐ ಸುನೀಲ ಮೂಲಿಮನಿ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಇದ್ದರು. ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಪೊಲೀಸ್ ಹುತ್ಮಾತರ ವೇದಿಕೆಗೆ ಹೂಗುಚ್ಛ ಮತ್ತು ಹೂ ಹಾಕಿ ನಮನ ಸಲ್ಲಿಸಿದರು. ಮೂರು ಸುತ್ತು ಗುಂಡು ಹಾರಿಸಿ, ಪೊಲೀಸ್ ವಂದನೆ ಸಲ್ಲಿಸಲಾಯಿತು.