
ಖ್ಯಾತ ಕವಿ-ಲೇಖಕ:-ಶ್ರೀಶೈಲ್ ಬಿರಾದಾರ
ಕರ್ನಾಟಕದ ಚರಿತ್ರೆಯಲ್ಲಿ ಜನಪ್ರಿಯಗೊಂಡ ಹರಿದಾಸ ಚಳುವಳಿಯ ಪರಂಪರೆಯಲ್ಲಿ ಬರುವ ಸು. 250ಕ್ಕೂ ಹೆಚ್ಚು ಹರಿದಾಸರಲ್ಲಿಯೇ ಅಗ್ರಗಣ್ಯರಾಗಿರುವ ಕನಕದಾಸರೊಬ್ಬರೆ ಶೂದ್ರದಾಸರಾಗಿದ್ದಾರೆ ,ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಜಡ್ಡುಗಟ್ಟಿದ ಜಾತಿ, ಧರ್ಮಗಳ , ತಾರತಮ್ಯ, ಸಾಮಾಜಿಕ ಅಸಮಾನತೆ , ಮೌಡ್ಯ ಹಾಗೂ ಕಂದಾಚಾರಗಳನ್ನು ವಿರೋಧಿಸಿ ಕೀರ್ತನೆಗಳನ್ನು ರಚಿಸಿ ಹಾಡುವ ಮೂಲಕ ಸಮಾಜದಲ್ಲಿ ಮಾನವಿಯ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡಿದ ಮಹಾನ್ ದಾರ್ಶನಿಕರಾಗಿದ್ದಾರೆ.
ಬಾಡ ಬಂಕಾಪುರ ಪ್ರಾಂತ್ಯದ 78 ಹಳ್ಳಿಗಳ ಡಣ್ಣನಾಯಕನಾಗಿದ್ದ ಶ್ರೀ ಬೀರಪ್ಪನಾಯಕನಿಗೆ ವಂಶೋದ್ಧಾರಕನಿಲ್ಲದ ಚಿಂತೆ ಕಾಡಗಿಚ್ಚಿನಂತೆ ಕಾಡುತಿತ್ತು, ಮನೆದೇವರಾದ ತಿರುಪತಿಯ ಶ್ರೀ ತಿಮ್ಮಪ್ಪನ ಅನುಗ್ರಹದಿಂದ ಜನಿಸಿದ ಮಗುವಿಗೆ ತಿಮ್ಮಪ್ಪ ನೆಂದು ನಾಮಕರಣ ಮಾಡುವರು,ಬಿದಿಗೆಯ ಚಂದ್ರನಂತೆ ಬೆಳಿಯುವ ಕಂದನಿಗೆ ಓದು ಬರಹ ಬಿಲ್ ವಿದ್ಯ, ಕುದುರೆ ಸವಾರಿ,ಕತ್ತಿ ವರಸೆ, ಮಲ ಯುದ್ಧ ಸೇರಿದಂತೆ ಒಬ್ಬ ರಾಜ ಕುಮಾರನಿಗೆ ಕೊಡ ಬಹುದಾದ ಆ ಕಾಲದ ಎಲ್ಲಾ ವಿದ್ಯ ಮತ್ತು ಯುದ್ಧ ಕಲೆಗಳನ್ನು ಕಲಿಸುತ್ತಾನೆ ಆದರೆ ತಿಮ್ಮಪ್ಪ ಪ್ರಾಯಕ್ಕೆ ಬರುವ ಮುನ್ನವೇ ದೈವಾದಿನರಾಗುತ್ತಾರೆ ಇಂಥ ಸಂದಿಗ್ಧ ಸಂದರ್ಭದಲ್ಲಿ ಅವರ ಸಂಬಂಧಿಕರು ಧನ ಕನಕವೆಲ್ಲವನ್ನು ಸುರೆ ಗೊಂಡು ಇವರನ್ನು ಅತ್ಯಂತ ಕಷ್ಟ ಕಾರ್ಪಣ್ಯಗಳಿಗೆ ಗುರಿ ಮಾಡುವರು ಈ ದುಸ್ಥಿತಿಯಲ್ಲಿಯೂ ತಾಯಿ ಬಚ್ಚಮ್ಮ ಮಗನಿಗೆ ಚಂದ್ರಗುಪ್ತ ಮೌರ್ಯ, ಸಾಮ್ರಾಟ ಅಶೋಕ, ಚಾಣುಕ್ಯ, ವಿದ್ಯಾರಣ್ಯ , ವಿಕ್ರಮಾದಿತ್ಯರಂತ ಮಹಾನ್ ಸಾಧಕರ ಜೀವನ ಚರಿತ್ರೆಗಳನ್ನು ಹೇಳಿಕೊಡುತ್ತಾ ಬೆಳೆಸುವಳು ಮಹಾತಾಯಿ ದೈವ ಭಕ್ತೆ ಬಚ್ಚಮ್ಮ, ಜೀಜಾಬಾಯಿ ಶಿವಾಜಿಯನ್ನು ಬೆಳೆಸಿದಂತೆ,ಬೆಳೆಯುವ ಸಿರಿಯನ್ನು ಕಂಡ ವಿಜಯನಗರದರಸರು ತಂದೆಯ ಬಾಡ ಬಂಕಾಪುರದ ಡಣ್ಣಾಯಕನಾಗಿ ಪಟ್ಟಾಭಿಷೇಕ ಮಾಡುವುರು ಅಲ್ಲಿಂದ ತಿಮ್ಮಪ್ಪ ,ತಿಮ್ಮಪ್ಪ ನಾಯಕನಾಗಿ ಜನಪರ ಕೆಲಸ ಮಾಡುತ್ತಿರುವಾಗ ಒಮ್ಮೆ ಅರಮನೆಯ ಕಟ್ಟಲು ಭೂಮಿ ಹಗೆಯುವಾಗ ಅಪಾರ ಪ್ರಮಾಣದ ಭಂಡಾರ ದೊರೆಯುತ್ತದೆ ಇದು ನನ್ನದಲ್ಲ ನನ್ನ ರಾಜ್ಯಕ್ಕೆ ಸೇರಿದ್ದು, ನನ್ನ ಜನರಿಗೆ ಸೇರಿದ್ದೆಂದು ನಿಶ್ಚಯಿಸಿ ವಿಜಯನಗರದ ಅರಸರನ್ನು ಕರೆಸಿ “ಕೆರೆಯ ನೀರು ಕೆರೆಗೆ ಚೆಲ್ಲಿ “ಎಂಬಂತೆ ಸಿಕ್ಕ ಧನ ಕನಕವೆಲ್ಲವನ್ನು ಬಡವರ ಕಲ್ಯಾಣಕಾರ್ಯಕ್ಕೆ, ದೇವಾಲಯಗಳ ನಿರ್ಮಾಣಕ್ಕಾಗಿ,ಕೆರೆ ಬಾವಿ ತೋಡಲು ಬಳಸಿದ್ದು ವಿಜಯನಗರ ಸಾಮ್ರಾಜ್ಯದ ತುಂಬೆಲ್ಲ ಅರಡಿ ಅತ್ಯಂತ ಜನಪ್ರಿಯಗೊಂಡು ಜನರು ಸತೃಪ್ತಭಾವದಿಂದ ಕನಕನಾಯಕನೆಂದು ಕರೆಯತೊಡಗಿದರು,
ಹೀಗೆ ಕನಕನಾಯಕನಾದ ತಿಮ್ಮಪ್ಪನ ಕೀರ್ತಿ ದೇವಲೋಕಕ್ಕು ಮುಟ್ಟಿ ಭಂಗವಂತ ಒಬ್ಬ ಸರ್ವಾಧಿಕಾರಿ ನಾಯಕರಲ್ಲಿ ಇಂತ ಮನಸ್ಸಿರುವದು ಕಂಡು ಬಹಳ ಖುಷಿಪಟ್ಟು ಆತನನ್ನು ತನ್ನ ದಾಸನಾಗಿಸಿಕೊಳ್ಳ ಬೇಕೆಂದು ಕೊಂಡನೆನೋ ! ಅದಕ್ಕಾಗಿ ಕನಕನಾಯಕನ ಕನಸಲ್ಲಿ ಬಂದು ಕನಕ ನೀ ನನ್ನ ದಾಸನಾಗೆಂದು ಕರೆಯವುನು ಆದರೆ ಕನಕನಾಯಕರು ಇಲ್ಲಾ ನಾನು ರಾಜ ನಾನು ದಾಸನಾಗಲಾರೆನ್ನುವರು,ಮುಂದೆ ಸ್ವಲ್ಪ ದಿನಗಳಲ್ಲಿಯೆ ಮಡದಿ ಮತ್ತು ತಾಯಿ ತಿರಿಕೊಳ್ಳುವರು, ಮಡದಿ ಮತ್ತು ತಾಯಿ ತೀರಿಕೊಂಡಾಗಲು ಭಂಗವಂತ ಕನಸ್ಸಲ್ಲಿ ಬಂದು ಕನಕ ನೀ ನನ್ನದಾಸನಾಗೆಂದು ಕೆರಯುತ್ತಿದ್ದನು ತಂದೆ ತಾಯಿ ಮಡದಿ ಎಲ್ಲರನ್ನು ಕಳೆದು ಕೊಂಡಿರುವೆ ಹೀಗಲಾದರು ನೀ ನನ್ನ ದಾಸನಾಗೆಂದು ಕೆರೆಯುವನು ಆಗಲು ಕನಕ ಆಗದು ನಾನು ಅರಸನಾಗಿರುವೆ ನಾನು ದಾಸನಾಗಲಾರೆನೆಂದು ಅರಚುವರು, ನಂತರ ಒಂದು ದಿನ ವಿಜಯನಗರ ಸಾಮ್ರಾಜ್ಯದ ಶಿಗ್ಗಾವಿ ಮೇಲೆ ಸೆತ್ರುಗಳು ಆಕ್ರಮಣಮಾಡಿದ ಘನಗೋರ ಯುದ್ಧದಲ್ಲಿ ತನ್ನ ಪರಾಕ್ರಮದಿಂದ ಗೆದ್ದು ಬಿಗಬೇಕೆಂದಿದ್ದ ವಿಜಯನಗರದ ಮುಂದೆ ಆದರೆ ವಿದಿಯ ಚಿತ್ತವೆ ಬೆರೆಯಾಗಿತ್ತು “ನಾವೊಂದು ಬಯಸಿದರೆ ದೇವನೊಂದು ಬಗಿವನಂತೆ ” ಕನಕನಾಯಕನನ್ನು ದಾಸನಾಗಿಸಿಕೊಳ್ಳಲು ಇದೆ ಸೂಕ್ತ ಸಮಯವೆಂದು ಹರಿತ ಭಗವಂತ ಕನಕನಾಯಕನಿಗೆ ಕೈ ಕಾಲುಗಳು ಹೇಳದಂತೆ ಮಾಡುವನಂತೆ ಆಗ ಶತ್ರುಪಾಳೆಯದ ಸೈನಿಕರ ಹೊಡೆತ್ತಕ್ಕೆ ತತ್ತರಿಸಿ ಯುದ್ದಭೂಮಿಯಲ್ಲೆ ಗಾಯವಾಗಿ ಬಿಳುವನು,ಕನಕನಾಯಕ ಸತ್ತನೆಂದು ಸೈನ್ಯ ಚದುರಿ ಹೊಡಿ ಹೊಗುವದು ಆಗ ಭಂಗವಂತ ಪ್ರತ್ಯಕ್ಷನಾಗಿ ಕನಕ ಹೀಗಲಾದರು ನೀ ನನ್ನದಾಸನಾಗೆಂದು ಹೇಳುವನು, ಅರೆ ಕ್ಷಣದಲ್ಲಿ ಪ್ರಾಣ ಹೋಗುವ ನನ್ನನ್ನು ದಾಸನಾಗಿಸಿಕೊಂಡು ಏನುಮಾಡುವೆ?ಎಂದು ಜರಿಯುವರು ಆಗ ಭಗವಂತ ಕನಕನಾಯಕರ ಮೈಸ್ಪರ್ಶ್ಯಮಾಡಿ ಮಾಯವಾಗುವನಂತೆ ಗಾಯಗಳೆಲ್ಲವು ಮಾಯವಾಗಿ ನವ ಚೈತನ್ಯದಿಂದೆದ್ದು ಕುಳಿತು ಕೊಳ್ಳುವರಂತೆ, ಅಯ್ಯೋ ಇದೇನು ಆಚಾರ್ಯ ಮೈಮೇಲೆ ಒಂದು ಗಾಯಗಳಿಲ್ಲಾ ಸಾವಿನ್ಯಾತನೆಯಲ್ಲಿ ನರಳುವಾಗ ನನ್ನನ್ನು ಮೊದಲಿನಂತೆಮಾಡಿದ್ದು ಹರಿ ಶ್ರೀ ಕಾಗಿನೇಲೆಯಾದಿ ಕೇಶವನೆ ಹೊರತು ಬೆರ್ಯಾರಲ್ಲವೆಂದರಿತು, ವೈರಾಗ್ಯತಾಳಿ ಕಂಬಳಿ ಹೊದ್ದು ತಾಳ ತಂಬುರಿ ಹಿಡಿದು ದಾಸರಾಗಿ ಹಾಡುತ್ತ ಗುರುವಿನ ಹುಡಕ್ಕುತ್ತ ನಡೆದು ವ್ಯಾಸರಾಯರಲ್ಲಿಗೆ ಬಂದು ನಾನು ಬಾಡಾ ಬಂಕಾಪುರದ ಡಣ್ಣಾಯಕನಾಗಿದ್ದ ಕನಕನಾಯಕ ನನಗೆ ಮಂತ್ರೋಪೊದೇಶ ಮಾಡಬೇಕೇಂದು ಕೇಳಲು ವ್ಯಾಸರಾಯರು ಹೋ ಕುರುಬರ ಕನಕನೆಂದು ಹಿಯ್ಯಾಳಿಸಿ, ಕುರುಬನಿಗ್ಯಾವ ಮಂತ್ರ,ಕೋಣನ ಮಂತ್ರವೆಂದು ಜರಿಯುವರು, ಆದರೆ ಕನಕದಾಸರು ಕೋಣಮಂತ್ರವನ್ನೆ ಜಪಿಸಿ ದೇವಲೋಕದ ಯಮಧರ್ಮರಾಯನ ಕೋಣವನ್ನು ಕರೆತಂದು ವ್ಯಾಸರಾಯರಲ್ಲಿಗೆ ಕರೆದೊಯ್ದು ಗುರುಗಳೆ ಕೋಣಮಂತ್ರದಿಂದ ಯಮಧರ್ಮರಾಯನ ಕೋಣವನ್ನೆ ಕರೆತಂದಿರುವೆನ್ನೆನ್ನಲು ಆಗ ವ್ಯಾಸಮುದ್ರಕ್ಕೆ ಆಣೆಕಟ್ಟು ಕಟ್ಟಲು ಅಡ್ಡವಾಗಿದ್ದ ಬಂಡೆಗಲ್ಲು ಹೊಡೆಯುವದೆಗೆಂದು ಚಿಂತಿಸುತ್ತಿದ್ದ ವ್ಯಾಸರಾಯರು ಕನಕದಾಸರೆ ಅದು ನಿಜವಾಗಿಯೂ ಯಮಧರ್ಮನ ಕೋಣವೆ ಆಗಿದ್ದರೆ ಆ ಬಂಡೆಗಲ್ಲನ್ನು ಹೊಡೆಯಲು ಹೇಳಿ ಎನ್ನುವರು ಆಗ ಕನಕದಾಸರು ಕೋಣನಿಗೆ ಆದೇಶವಿತ್ತೊಡೆನೆಯೆ ಕೋಣವು ತನ್ನ ತಲೆಯಿಂದ ಬಂಡೆಗಲ್ಲಿಗೆ ಗುದ್ದಿ ಪುಡಿಮಾಡುವದು,ಅದನ್ನ ಕಂಡು ಕನಕದಾಸರು ಸಾಮಾನ್ಯವಾದವರಲ್ಲವೆಂದು ಹರಿತ ವ್ಯಾಸರಾಯರು ಕನಕನನ್ನು ಶಿಷ್ಯನಾಗಿಸಿಕೊಂಡು ವ್ಯಾಸ ಕೂಟಕ್ಕೆ ಕರೆಯುವರು ಅಲ್ಲಿ ಮತಿಯವಾದಿಗಳಿಂದ ಅಪಮಾನಿತನಾದ ಕನಕದಾಸರು ತನ್ನ ಪಾಂಡಿತ್ಯವನ್ನು ಪ್ರದರ್ಶಿಸುವ ಮೂಲಕ ವ್ಯಾಸಕೂಟವನ್ನು ಸೇರಿದನು,ಹಾಗೆಯೇ ಪುರಂದರ ದಾಸರ ಜೊತೆಗೆ ಸೇರಿ ದಾಸಕೂಟವು ಕಟ್ಟವರು,ಕರ್ನಾಟಕ ಸಂಗೀತಕ್ಕೆ ಅಪರವಾದ ಕೊಡುಗೆಯನ್ನು ಸಲ್ಲಿಸಿದ್ದಾರೆ ನಾಡೋಜ ದೆ. ಜೇವರೆಗೌಡರು ಇವರನ್ನು ಕರ್ನಾಟಕ ಸಂಗೀತದ ಅಶ್ವೀನಿ ದೇವತೆಗಳೆಂದು ಕರೆದಿದ್ದಾರೆ,
ಕೃಷ್ಣಭಕ್ತನಾದ ಕನಕದಾಸರು ಕೃಷ್ಣ ದರ್ಶನಕೆಂದು ಉಡುಪಿಗೆ ಬರುವರು ಅಲ್ಲಿ ಕೃಷ್ಣನ ದರ್ಶನಕ್ಕೆ ಕನಕನ್ನು ಬೀಡದೆ ಹೋರಗಡೆ ನಿಲ್ಲಿಸುವರು ಆಗ ಕನಕದಾಸರು ಗುಡಿಯ ಹಿಂದುಗಡೆ ನಿಂತು ಭಕ್ತಿ ಪರವಶನಾಗಿ “ಭಾಗಿಲನ್ನು ತೆರೆದು ದರ್ಶನವ ನೀಡು ಶ್ರೀ ಹರಿಯೆ ” ಎಂದು ಭಜಿಸಲು ಕೃಷ್ಣ ಪರಮಾತ್ಮ ಪಶ್ಚಿಮದ ಗೋಡೆ ಹೊಡೆದು ದರ್ಶನವ ನೀಡಿದ್ದು ಇಗಲು ಉಡಪಿಯ ಕೃಷ್ಣಮಂದಿರದಲ್ಲಿ ಕನಕನ ಕಿಂಡಿಯಂದು ಗುರುತಿಸಿರುವದು ಅಲ್ಲಿಯೆ ಕನಕ ಗೋಪುರವಿರುವದನ್ನು ಕಾಣ ಬಹುದಾದರು ಅನೇಕರು ಇದು ಸುಳ್ಳೆನ್ನುವರು ಕೃಷ್ಟನ ದರ್ಶನಕ್ಕೆ ಪ್ರವೇಶ ನೀಡುವಂತೆ ಪ್ರತಿಭಟನೆಗೆ ಇಳಿದಾಗ ತಾವೆ ಗೊಡೆಯ ಸಿಳಿ ಕೃಷ್ಣನನ್ನು ತೋರಿಸುವ ಮೂಲಕ ಸುಳ್ಳು ಪ್ರಚಾರವೆಬ್ಬಿಸಿ ಭಕ್ತರನ್ನು ಸೇಳೆದು ಆರ್ಥಿಕ ಲಾಭವನ್ನು ಮಾಡಿಕೊಳ್ಳಲು ಸೃಷ್ಟಿಸಿದ ಕಥೆ ಆದ್ದರಿಂದ ಕನಕ ಗೋಪುರವು ಕೆಡವಿದ್ದರು ಮತ್ತು ನವಗ್ರಹ ಕಿಂಡಿಯಂದು ಹೆಸರಿಸಿದ್ದರು ಆದರೆ ಕನಕ ಭಕ್ತರ ಹೋರಾಡಕ್ಕೆದರಿ ಮತ್ತೆ ಹೊಸ ಘೋಪುರವ ಕಟ್ಟಿದರು,ಈ ಕುರಿತು ಹೆಚ್ಚಿನ ಅದ್ಯಯನವಾಗಬೇಕಿದೆ,
ಅದೇನೆಯಿರಲಿ ವಿದ್ಯ ಮತ್ತು ದೇವರು ಹಾರವರಸ್ವತ್ತೆಂದು ಮೇರೆಯುತ್ತಿರುವರಿಗೆ ವಿದ್ಯೆಯನ್ನು ಯಾರು ಬೇಕಾದರೂ ಶ್ರದ್ಧೆಯಿಂದ ಕಲೆಯ ಬಹುದು, ಭಕ್ತಿಯಿಂದ ಯಾರು ಬೇಕಾದರೂ ದೇವನೊಲಿಸಿಕೊಳ್ಳ ಬಹುದೆಂದು ಕನಕದಾಸರು ತೋರಿಸಿಕೊಟ್ಟರು
ಕೃಷ್ಣಾಮೃತ,ಹರಿಭಕ್ತಸಾರ, ರಾಮದಾನ್ಯ ಚರಿತ್ರೆ, ನಳಚರಿತ್ರೆ ,ಮೊದಲಾದ ಅಮುಲ್ಯ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೋಳಿಸಿದ್ದಾರೆ, ರಾಮದಾನ್ಯ ಚರಿತ್ರೆಯಲ್ಲಿ ರಾಗಿ ಮತ್ತು ಅಕ್ಕಿಯೊಂದಿಗಿನ ಸಂಭಾಷಣೆಯು ಬಡವರ ಆಹಾರವಾದ ರಾಗಿಯು ಅಕ್ಕಿಗಿಂತ ಶ್ರೇಷ್ಠ, ಶ್ರೀಮಂತರಿಗಿಂತ ಬಡವರೆ ಶ್ರೇಷ್ಠವೆಂದು ಸಾರಿದರು, ರಾಮದಾನ್ಯ ಚರಿತ್ರೆಯು ಬಂಡಾಯ ಸಾಹಿತ್ಯದ ಮೂಲ ಕೃತಿ , ಕನಕದಾಸರು ಬಂಡಾಯ ಸಾಹಿತ್ಯದ ಮೂಲ ಪುರಷ್ಯನೆಂದರೆ ತಪ್ಪಾಗಲಿಕಗಕ್ಕಿಲ್ಲಾ,
“ಕುಲಕುಲವೆಂದೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರು ಬಲ್ಲಿರಾ”
ಸಕಲ ಜೀವಿಗಳ ಜೀವಾಮೃತವಾದ ಜಲಯಾವಕುಲ ಪೇಳಿರಯ್ಯಾ ಎಂದು ಜಾತಿವ್ಯವಸ್ಥೆಯ ವಿರುದ್ಧ ಸಮರಸಾರಿದ ಮಹಾನ್ ಸಮಾಜ ಸುಧಾರಕರಾಗಿದ್ದರು,
” ಬೆಟ್ಟದ ಮೇಲೆ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯಾ ಕಟ್ಟಿ ನೀರೆರೇದವರ್ಯಾರಯ್ಯಾ,
ಕಲ್ಲು ಪೊಟರೆಯೊಳಗುಟ್ಟಿದ ಹುಳಹುಪ್ಪಟಿಗಳಿಗೆ ಅಡಿಗಡಿಗೆ
ಆಹಾರವಿತ್ತವರು ಯಾರಯ್ಯಾ?
ತಲ್ಲಣಿಸದಿರು ಕಂಡೆ ತಾಳುಮನವೇ
ಎಲ್ಲರನ್ನೂ ಸಲಹುವವನು ಶ್ರೀ ಕಾಗಿನೇಲೆಯಾದಿ ಕೇಶವನು
ಇದಕ್ಕೆ ಸಂವಶೆಯವೇ ಬೇಡ.”
ಜೀವನದಲ್ಲಿ ಏನೆ ವೈರುದ್ಯಗಳು ಬರಲಿ ಅವುಯಾವು ಶಾಸ್ವತವಲ್ಲಾ ತಾಳ್ಮೆಯಿರಲಿ ಎಲ್ಲವು ಬಗೆಹರಿಯುತ್ತವೆ ಎಂಬ ಸತ್ಯವನ್ನು ಜನಸಾಮಾನ್ಯರಿಗೆ ಸಾರಿದ ಸಂತರು,
ಸಾಮ್ರಾಟ್ ಅಶೋಕ ಖಡ್ಗವನ್ನು ತೇಜಿಸಿ ಧರ್ಮದಿಂದ ರಾಜ್ಯಬಾರ ಮಾಡದರೆ,ಕನಕ ದೇವರ ದಾಸನಾಗಿ ಭಕ್ತಿಯಿಂದ ಕೀರ್ತನೆಗಳನ್ನುಹಾಡಿ ದೇವನೊಲಿಸಿಕೊಂಡ ಭಕ್ತ ಶ್ರೇಷ್ಠನಾದ ಕನಕದಾಸರು ಕಾವ್ಯ ಕಿರ್ತನೆಗಳ ಮೂಲಕ ಜಾತಿವ್ಯವಸ್ಥೆಯ ವಿರುದ್ಧ ಖಡ್ಗ ಜಳಪಿಸಿದ ಮಹಾನ್ ಚೇತನ,
ಗೋ ಪಾಲಕನಾದ
ಶ್ರೀ ಕೃಷ್ಣನ ಗುಡಿಯೊಳಗೆ,
ಕುರಿಗಾಹಿ ಕನಕನಿಗೆ
ಬಿಡದೆ ಕಾಡಿದ ಕುಲಜರಿಗೆ,
ಕುಲದ ನೆಲೆ ಕೇಳಿ ಕುಗ್ಗಿಸಿದ
ಕವಿಚಿನ್ನ ಬಾ ನಮ್ಮ ಮನಕ್ಕೆಂದನು
ನಮ್ಮ ರಸ್ತಾಪೂರದ ಭೀಮಕವಿಗಳು.
– ಶ್ರೀಶೈಲ ಬಿರಾದಾರ ನಾಗನಟಗಿ ನ್ಯಾಯಾಂಗ ಇಲಾಖೆ ಸುರುಪುರ, 9008659817
