ಕಾಂಗ್ರೆಸ್ ಸರ್ಕಾರದಲ್ಲಿ ಸರಣಿ ಹಗರಣಗಳು; ಸಚಿವರುಗಳ ಬೆದರಿಕೆಯಿಂದಾಗಿ ಆತ್ಮಹತ್ಯೆಗಳು ನಡೆಯುತ್ತಿವೆ: ಹಣಮಂತ ಇಟಗಿ

By admin

ಕೈ ಸರ್ಕಾರದಿಂದ ಆತ್ಮಹತ್ಯೆ, ಕೊಲೆಗಳ ಭಾಗ್ಯ : ಜಿಲ್ಲಾ ಬಿಜೆಪಿ ಆರೋಪ

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ರಾಜ್ಯದಲ್ಲಿ ಹಾಲಿ ಸರ್ಕಾರದ ಆಡಳಿತ ಬಂದಾಗಿನಿದ ಸರಕಾರದಲ್ಲಿರುವವರ ಬೆದರಿಕೆಯ ಕಾರಣಕ್ಕೆ ಸರಣಿ ಆತ್ಮಹತ್ಯೆ ಪ್ರಕರಣಗಳು, ಸರಣಿ ಹಗರಣಗಳು ನಡೆಯುತ್ತಿದ್ದು, ಕಾಂಗ್ರೆಸ್ ರಾಜ್ಯದ ಜನತೆಗೆ ಆತ್ಮಹತ್ಯೆಗಳ ಭಾಗ್ಯ ನೀಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಣಮಂತ ಇಟಗಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಅವರು ಆತ್ಮಹತ್ಯೆ ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯ ಆಪ್ತ, ರಾಜು ಕಪನೂರನಿಂದ ಕಿರುಕುಳದ ಉಲ್ಲೇಖವಿದೆ.
ಹೀಗಾಗಿ ಸಚಿನ್ ಪಾಂಚಾಳ್ ಆತ್ಮಹತ್ಯೆ ಸಚಿವ ಪ್ರಿಯಾಂಕ್ ಖರ್ಗೆ ಕೃಪಾಪೋಷಿತ ರೌಡಿ, ಅನೇಕರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಗಳನ್ನು ಎದುರಿಸುತ್ತಿರುವ ರಾಜು ಕಪನೂರನ ನೆರೆ ಬೆದರಿಕೆಯಿಂದ ಆಗಿದೆ ಎಂಬುದು ಡೆತ್ ನೋಟ್ ನಿಂದ ದೃಢವಾಗಿದೆ ಎಂದು ಅವರು ಹೇಳಿದರು.
ಮುಡಾ, ವಾಲ್ಮೀಕಿ, ಭೋವಿ ಸೇರಿದಂತೆ ಸಾಲು ಸಾಲು ಹಗರಣಗಳು ಈ ಹಗರಣಗಳಿಗೆ ಅಮಾಯಕರ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿ ಆವರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಒಂದರ ಮೇಲೆ ಒಂದರAತೆ ಆಗುತ್ತಿವೆ.
ವಾಲ್ಮೀಕಿ ನಿಗಮದ ವ್ಯವಸ್ಥಾಪಕ ಚಂದ್ರಶೇಖರ ಆತ್ಮಹತ್ಯೆ, ಲಕ್ಷಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ, ದಾವಣಗೆರೆಯಲ್ಲಿ ಗುತ್ತಿಗೆದಾರೊಬ್ಬರ ಆತ್ಮಹತ್ಯೆ, ಮಾಗಡಿಯಲ್ಲಿ ಲಾರಿ ಮಾಲಿಕರೊಬ್ಬರು ಲಂಚ ಕೊಡಲಾಗದೆ ಆತ್ಮಹತ್ಯೆ, ಯಾದಗಿರಿ ಶಾಸಕ ಪರಶುರಾಮ್ ಆತ್ಮಹತ್ಯೆ ಆಗಿವೆ ಈದೀಗ ಸಚಿನ್ ಪಾಂಚಾಳ ಆತ್ಮಹತ್ಯೆಯಾಗಿದೆ ಎಂದು ಅವರು ದೂರಿದರು.
ಈದೀಗ ಈ ಆತ್ಮಹತ್ಯೆ ಡೆತ್ ನೋಟ್ ನಲ್ಲಿ ಕಲ್ಬುರ್ಗಿ ಜಿಲ್ಲೆಯ ಹಿಂದು ಸಮಾಜದ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಬಿಜೆಪಿ ನಾಯಕರಾದ ಶಾಸಕ ಬಸವರಾಜ ಮತ್ತಿಮೂಡ, ಚಂದುಪಾಟೀಲ್ ಚಿತ್ತಾಪೂರದ ಮಣಿಕಂಠ ರಾಠೋಡ ಅವರ ಕೊಲೆಗೆ ಮಹಾರಾಷ್ಟçದ ರೌಡಿಗಳಿಗೆ ಸೂಪಾರಿ ಕೊಟ್ಟಿರುವ ಸಂಗತಿ ಬಯಲಾಗಿದೆ. ಈ ಮೂಲಕ ಸರ್ಕಾರ ಆತ್ಮಹತ್ಯೆಗಳನ್ನು ಮಾಡಿಸಲು ಕಾರಣವಾಗಿದ್ದಲ್ಲದೇ ಈದೀಗ ರಾಜಕೀಯ ಪ್ರೇರಿತ ಕೊಲೆಗಳು ಮಾಡಿಸಲು ಮುಂದಾಗಿರುವುದು ಅತ್ಯಂತ ನೀಚ ಸ್ಥರಕ್ಕೆ ಇಳಿಯುತ್ತಿದೆ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
ಒಟ್ಟಾರೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಈ ಸರ್ಕಾರ ಆತ್ಮಹತ್ಯೆಗಳನ್ನು, ಕೊಲೆಗಳನ್ನು ಮಾಡಿಸಲೆಂದೇ ಕುಳಿತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ ಅವರು, ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಕಲ್ಬುರ್ಗಿ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಆತ್ಮಹತ್ಯೆ, ಕೊಲೆ ಪ್ರಕರಣಗಳು ನಡೆದಿವೆ. ಅವನ್ನು ಮುಚ್ಚಿ ಹಾಕಿದ ಷಡ್ಯಂತ್ರ ಹಿಂದೆ ನಡೆದಿವೆ. ನಡೆಯುತ್ತಲೇ ಇವೆ. ಈದೀಗ ಕಾಂಗ್ರೆಸ್ಸಿನವರು ಸಚಿನ್ ಪಾಂಚಾಳರ ಕುಟುಂಬದವರನ್ನು ಬೆಳಗಿನ ಜಾವ 3 ಗಂಟೆಗೆ ಭೇಟಿ ಕೊಟ್ಟುದ್ದು ಅವರನ್ನು ಓಲೈಕೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದು, ಅದು ಸಾಧ್ಯವಾಗದಿದ್ದಾಗ ಮತ್ತೆ ಅವರ ಕುಟುಂಬದಲ್ಲಿರುವ ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕುತ್ತಾರೆ. ಗುಲ್ಬರ್ಗದ ಪೊಲೀಸ್ ಇಲಾಖೆ ಖರ್ಗೆ ಮತ್ತು ಕುಟುಂಬದ ಕಪಿಮುಷ್ಟಿಯೊಳಗಿದೆ ಎಂದು ಆರೋಪಿಸಿದರು.
ಹಿಂದೆ, ಇದೇ ಸರಕಾರದ ಸಚಿವ ನಾಗೇಂದ್ರ ಅವರೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಕ್ಷಣವೂ ತಡ ಮಾಡದೆ. ಪ್ರಿಯಾಂಕ ಖರ್ಗೆಯವರ ರಾಜೀನಾಮೆ ಪಡೆದುಕೊಳ್ಳಲಿ. ಯಾವುದೋ ನೆಪ ಮಾಡಿ, ರಕ್ಷಿಸುವ ದುಸ್ಸಾಹಸ ಬೇಡ ಎಂದು ಅವರು ಹೇಳಿದರು.
ರಾಜ್ಯಾದ್ಯಕ್ಷರಿಂದ ಸಂತ್ರಸ್ತರ ಮನೆಗೆ ಭೇಟಿ, ಕಾಂಗ್ರೆಸ್ ನಿಂದ ಮದ್ಯರಾತ್ರಿ ಭೇಟಿ ಧಮಕಿ:
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ವಿಪಕ್ಷ ನಾಯಕ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರು, ಸ್ಥಳೀಯ ಶಾಸಕರು, ಪಕ್ಷದ ಜಿಲ್ಲಾ ಅಧ್ಯಕ್ಷರು, ಭಾಲ್ಕಿ ತಾಲ್ಲೂಕಿನ ಮೃತರ ಗ್ರಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಸಚಿನ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಆ ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಸಚಿನ್‌ಗೆ 5 ಜನರು ಸಹೋದರಿಯರಿದ್ದಾರೆ. ಬಡ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡಬೇಕು ಮತ್ತು ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಏಕೆಂದರೆ ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾಗ ಅವರ ಇಬ್ಬರು ಸಹೋದರಿಯರಾದ ಸವಿತಾ, ಸುನೀತಾ ಮಧ್ಯಾಹ್ನವೇ 2.15ಕ್ಕೆ ಪೊಲೀಸ್ ಠಾಣೆಗೆ ಧಾವಿಸಿದ್ದರು. ಗೋಗರೆದು ಪ್ರಾಣ ಉಳಿಸಲು ಕೋರಿದರೆ, ಅವರ ಮನವಿಯನ್ನು ಕಿಂಚಿತ್ತೂ ಲೆಕ್ಕಿಸದೆ, ಪಿಎಸ್‌ಐ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ದೂರಿನ ಸಂಬಧ ಅವರನ್ನು ಪೊಲೀಸ್ ಸ್ಟೇಷನ್ ಗಳಿಗೆ ತಿರುಗಾಡಿಸಿದ್ದರು.
ಕೊಟ್ಟ ದೂರು ಸ್ವೀಕರಿಸಿಲ್ಲ: ಸಚಿನ್ ಹುಡುಕುವ ಕೆಲಸವನ್ನೂ ಮಾಡಿಲ್ಲ:
ಸಚಿನ್ ಆತ್ಮಹತ್ಯೆ ಪೋಸ್ಟ್ ಮಾಡಿದ ನಂತರ ಕುಟುಂಬದವರು ದೂರು ನೀಡಲು ಹೋದರೂ ಅಮಾನವೀಯವಾಗಿ ವರ್ತಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ತನೆಯು ಮೃಗೀಯವಾಗಿದೆ ಎಂದು ದೂರಿದರು.
ಬಿಜೆಪಿ ಮುಖಂಡರ ಕೊಲೆಗೆ ಸಂಚು:
ಹಿAದೂ ಸಮಾಜದ ಸಿದ್ದಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮೂಡ, ಕಲಬುರ್ಗಿಯ ಬಿಜೆಪಿ ನಾಯಕರಾದ ಚಂದುಪಾಟೀಲ, ಮಣಿಕಂಠ ರಾಠೋಡ್ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಡೆತ್ ನೋಟ್ ತಿಳಿಸಿದೆ. ಸಿದ್ದಲಿಂಗ ಸ್ವಾಮೀಜಿ ಅವರ ಧ್ವನಿ ಅಡಗಿಸಲು ಮಹಾರಾಷ್ಟ್ರದ ಸುಪಾರಿ ಕಿಲ್ಲರ್‌ಗಳನ್ನು ಬಳಸುವ ವಿಚಾರವೂ ಡೆತ್ ನೋಟಿನಲ್ಲಿದೆ. ಎಲ್ಲ ರೀತಿಯಿಂದಲೂ ರಾಜ್ಯದ ಅತ್ಯಂತ ಶಕ್ತಿಶಾಲಿ ಖರ್ಗೆ ಕುಟುಂಬದ ವಿರುದ್ಧ ತನಿಖೆ ಮಾಡಲು ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಹಾಗಾಗಿ ಇದೊಂದು ಗಂಭೀರ ವಿಚಾರ. ಆದ್ದರಿಂದ ಇದರ ಸಿಬಿಐ ತನಿಖೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೇಸೂರ ಇದ್ದರು.