ಅಂದೋಲಾ ಶ್ರೀಗಳ ಕೊಲೆಗೆ ಸಂಚು ಮಾಡಿದ ರೌಡಿ ಕಪನೂರ; ಬೆಂಬಲಕ್ಕೆ ನಿಂತ ಸಚಿವ ಖರ್ಗೆ ವಜಾಗೆ ಶ್ರೀರಾಮ ಸೇನೆ ಆಗ್ರಹ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಕಲ್ಯಾಣ ಕರ್ನಾಟಕದ ಹಿಂದು ಧರ್ಮದ ಗುರುಗಳೂ ಧರ್ಮ ಮಾರ್ಗದರ್ಶಕರಾದ ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕೊಲೆಗೆ ಸಂಚು ರೂಪಿಸಿ ಮಹಾರಾಷ್ಟç ರೌಡಿಗಳಿಗೆ ಸೂಪಾರಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಹತ್ತಾರು ಕೊಲೆ ಬೆದರಿಕೆಗಳು ಮಾಡಿರುವ, ಮೈತುಂಬಾ ಕೊಲೆ ಪ್ರಕರಣಗಳ ಕೇಸ್ ಗಳು ಇರುವ ಗೂಂಡಾಗಿರಿ ಮಾಡುವ ರಾಜು ಕಪನೂರನನ್ನು ಪೋಷಿಸುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಶಶಾಂಕ ನಾಯಕ, ಧರ್ಮ, ರಕ್ಷಣೆ ಹಾಗೂ ಸಂಸ್ಕೃತಿ ಪರಂಪರೆ ಮೇಲೆ ದಾಳಿಗಳಾದಾಗ ಅವುಗಳ ವಿರುದ್ಧ ಸಿಡಿದೆದ್ದು ನಿಲ್ಲುವ ಸ್ವಾಮೀಜಿ ಅವರ ಕೊಲೆಗೆ ಸಂಚು ಮಾಡಿರುವ ಸಂಗತಿ ಗುತ್ತಿಗೆದಾರ ಸಚಿನ್ ಪಾಂಚಾಳ ಅವರ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್ ನಿಂದ ಬಯಲಾಗಿದೆ ಎಂದರೆ ರಾಜ್ಯದಲ್ಲಿ ಎಂತಹ ಆಡಳಿತ ನೀಡುತ್ತಿದೆ ಈ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ.

ಆನಸಾಮಾನ್ಯರಿಗೆ ಗುತ್ತೇದಾರರಿಗೆ ಬೆದರಿಕೆ ಒಡ್ಡುವ ಕೊಲೆ ಬೆದರಿಕೆ ಹಾಕುವ ಒಬ್ಬ ರೌಡಿಯನ್ನು ಇಟ್ಟುಕೊಂಡು ಕಲ್ಬುರ್ಗಿಯಲ್ಲಿ ಭಯದ ವಾತಾವರಣ ನಿರ್ಮಿಸಿ ಇನ್ನಿಲ್ಲದ ಕಿರುಕುಳ ನೀಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಯುಪಿ ಬಿಹಾರ ಮಾದರಿಯ ಕಡೆಗೆ ಕಲ್ಯಾಣ ಕರ್ನಾಟಕದ ಕಲುಬುರ್ಗಿಯನ್ನು ಒಯ್ಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಬುರ್ಗಿಯಲ್ಲಿ ರೌಡಿ ದರ್ಬಾರ್ ನಡೆಯುತ್ತಿದೆ ಎನ್ನಲು ಸಚಿನ್ ಪಾಂಚಾಳ್ ಬರೆದಿಟ್ಟ ಡೆತ್ ನೋಟ್ ಜಗಜ್ಜಾಹೀರು ಮಾಡಿದೆ. ಇನ್ನಾದರೂ ರಾಜ್ಯಪಾಲರು, ಮುಖ್ಯಮಂತ್ರಿಗಳು ತಕ್ಷಣ ಕಠಿಣ ಕ್ರಮ ಕೈಗೊಂಡು ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಮತ್ತು ಧರ್ಮ ಸಂಸ್ಕೃತಿ ರಕ್ಷಣೆಗೆ ತಮ್ಮ ಜೀವನವನ್ನು ಸಮರ್ಪಿಸಿರುವ ಶ್ರೀಗಳಿಗೆ ರಕ್ಷಣೆ ಕೊಡಬೇಕೆಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಅದ್ಯಕ್ಷ ವಿಜಯ ಪಾಟೀಲ್ ಮಾತನಾಡಿ, ರೌಡಿರಾಜ್ಯ ಮಾಡಲು ಹೊರಟಿರುವ ಸಚಿವ ಪ್ರಿಯಾಂಕ್ ಖರ್ಗೆಯನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು, ಪ್ರಕರಣ ಸಿಐಡಿ ತನಿಖೆ ಮಾಡಿದರೆ ಅದು ಸಚಿವನಿಗೆ ಕ್ಲಿನ್ ಚೀಟ್ ಕೊಡುವ ಏಜೆನ್ಸಿಯಂತಾಗುತ್ತದೆ ಆ ಮೂಲಕ ಕಲ್ಬುರ್ಗಿಯಲ್ಲಿ ಗೂಂಡಾರಾಜ್ ಗೆ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಡೆತ್ ನೋಟ್ ನಲ್ಲಿ ಕೇವಲ ಶ್ರೀಗಳಷ್ಟೇ ಅಲ್ಲದೇ ಬಿಜೆಪಿ ಶಾಸಕರು ಮಾಜಿ ಶಾಸಕರು, ಚಿತ್ತಾಪೂರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಸೇರಿದಂತೆ ನ್ಯಾಯ, ನೀತಿ ಧರ್ಮ ಅದರಲ್ಲೂ ವಿಶೇಷವಾಗಿ ಕಲ್ಬುರ್ಗಿ ಹಾಗೂ ಚಿತ್ತಾಪೂರದಲ್ಲಿ ತನ್ನ ರಾಜಕೀಯಕ್ಕೆ ಅಡ್ಡಿಯಾಗಿರುವವರನ್ನು ಮುಗಿಸಲು ಸಚಿವ ಪ್ರಿಯಾಂಕ್ ಖರ್ಗೆ ಸಂಚು ನಡೆಸಿದ್ದು ಸ್ಪಷ್ಟವಾಗಿದೆ. ಇದರಿಂದ ಗೊತ್ತಾಗುತ್ತದೆ ತನಗೆ ಅಡ್ಡವಾಗಿದ್ದಾರೆ ಎಂದೆನಿಸಿದ ಎಲ್ಲರನ್ನು ಮುಗಿಸಲು ತನ್ನ ಬಲಗೈ ಭಂಟನಿAದ ಸೂಪಾರಿ ಕೊಡಿಸಿರುವುದು ಸ್ಪಷ್ಟವಾಗಿದೆ.

ಒಂದುವೇಳೆ ಯಾರಿಗೆ ಜೀವ ಹಾನಿಯಾಗಲಿ ಇಲ್ಲವೇ ಅಪಾಯವಾದಲ್ಲಿ ಅದಕ್ಕೆ ರೌಡಿಗಳ ಸಾಕುತ್ತಿರುವ ಪ್ರಿಯಾಂಕ್ ಖರ್ಗೆಯೇ ನೇರ ಹೊಣೆಯಾಗುತ್ತಾರೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಏಕದಂಡಗಿ ಮಠದ ಶ್ರೀ ಕುಮಾರ ಮಹಾಸ್ವಾಮೀಜಿ, ಶ್ರೀರಾಮ ಸೇನೆ ಜಿಲ್ಲಾ ಉಪಾದ್ಯಕ್ಷ ಅಂಬ್ರೇಷ್ ತಡಿಬಿಡಿ, ಪ್ರಧಾನ ಕಾರ್ಯದರ್ಶಿ ಸಂದೀಪ ಮಹೇಂದ್ರಕರ್, ಯುವ ಘಟಕದ ಅಧ್ಯಕ್ಷ ರಘುರಾಮ್, ನಗರಾಧ್ಯಕ್ಷ ಹಣಮಂತ್ರಾಯ ಪಾಟೀಲ್, ತಾಲ್ಲೂಕು ಅಧ್ಯಕ್ಷ ಬಸವರಾಜ ಮನಗನಾಳ, ಉಪಾದ್ಯಕ್ಷ ಮಲ್ಲಿಕಾರ್ಜುನ ವರ್ಕನಳ್ಳಿ, ಸುಭಾಸ ದೇವದುರ್ಗ, ಪಿಲ್ಲಿಂಗ ಅಂಬಿಗೇರ, ಮಹಾಂತೇಶ ವರ್ಕನಳ್ಳಿ, ಶಿವಾನಂದ ಮುಂಡರಗಿ, ಸುರೇಶ ರಾಯಚೂರು ಸೇರಿದಂತೆ ಸೇನೆ ಕಾರ್ಯಕರ್ತರು ಭಾಗಿಯಾದರು. ತಹಸೀಲ್ದಾರರ ಮುಖಾಂತರ ಗೃಹಸಚಿವರಿಗೆ ಮನವಿ ಸಲ್ಲಿಸಲಾಯಿತು.