
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
2024-25ನೇ ಸಾಲಿನ ಯಾದಗಿರಿ ತಾಲ್ಲೂಕಿನ ಮೈಲಾಪೂರ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ವಶಪಡಿಸಿಕೊಳ್ಳಲು ಕುರಿ/ಆಡು ಮರಿಗಳ ವಿಲೇವಾರಿ ಅವಧಿ ವಿಸ್ತರಿಸಿದೆ ಎಂದು ಯಾದಗಿರಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕರು (ಆಡಳಿತ) ರಾಜು ದೇಶಮುಖ ಅವರು ತಿಳಿಸಿದ್ದಾರೆ.
ದಿನಾಂಕ 13-12-2024 ರಂದು ಟೆಂಡರ್ ಪ್ರಕಟಣೆ ಹೊರಡಿಸಿ ಅರ್ಜಿ ಸ್ವೀಕರಿಸುವ ದಿನಾಂಕ 31-12-2024ರ ವರೆಗೆ ನಿಗದಿಯಾಗಿದ್ದು, ರಜೆಗಳ ಹಿನ್ನೆಲೆ ಇಲ್ಲಿಯ ವರೆಗೆ ಕಡಿಮೆ ಸಂಖ್ಯೆಯ ಅರ್ಜಿಗಳು ಸ್ವೀಕೃತವಾಗಿರುವ ಪ್ರಯುಕ್ತ ಸಮಿತಿಯ ತೀರ್ಮಾನದಂತೆ ಅರ್ಜಿಸ್ವೀಕರಿಸುವ ದಿನಾಂಕವನ್ನು 2025ರ ಜನವರಿ 4 ರಂದು ಸಂಜೆ 5 ಗಂಟೆಯ ವರೆಗೆ ಅವಧಿ ವಿಸ್ತರಿಸಲಾಗಿದೆ. ಟೆಂಡರ್ ಷರತ್ತುಗಳಿಗೊಳಪಟ್ಟಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
