ಶಿಕ್ಷಕರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿ; ಖಾಸಾಮಠ ಶ್ರೀಗಳು

By admin

ಚಂಡ್ರಿಕಿಯಲ್ಲಿ ಜಿ.ರಾಮಕೃಷ್ಣ ಯಾದವ ಸೇವಾ ವಯೋ ನಿವೃತ್ತಿ ಸಮಾರಂಭ

ಸೆಕ್ಯುಲರ್ ವಾಯ್ಸ್ ನ್ಯೂಸ್ ಗುರುಮಠಕಲ್

ನಿವೃತ್ತಿಯಾಗುವ ಶಿಕ್ಷಕರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಖಾಸಾಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಸಮೀಪದಲ್ಲಿ ಚಂಡ್ರಿಕಿ ಗ್ರಾಮದಲ್ಲಿ ಶತಮಾನಕಂಡ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ನಿವೃತ್ತಿ ಸಮಾರಂಭದಲ್ಲಿ
ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಅತ್ಯಂತ ಮಹತ್ವವಾದುದು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ ಎಂದು ಆರ್ಶೀವದಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲರೆಡ್ಡಿ ಮುದಿರಾಜ್ ಮಾತನಾಡಿ ಎಲ್ಲರಿಗೂ ಶಿಕ್ಷಕನಾಗುವ ಅವಕಾಶ ಸಿಗಲ್ಲ. ಶಿಕ್ಷಕನಾಗಿ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಅವಕಾಶ ದೇವರ ವರ ಎಂದರು. ಶಿಕ್ಷಕ ಎಂದರೆ ಕಣ್ಣಿಗೆ ಕಾಣುವ ದೇವರು, ಶಿಕ್ಷಣ, ಸುಶಿಕ್ಷಿತ ಸಮಾಜದಿಂದ ದೇಶದ ಭವಿಷ್ಯ ನಿರ್ಧಾರವಾಗುತ್ತದೆ ಎಂದರು. ಇದು ನಿವೃತ್ತಿಯಲ್ಲ, ಮುಂದೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಲು ಸಲಹೆ ನೀಡಿದರು. ಶಿಕ್ಷಕರು ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಶಿಕ್ಷಕ ಜಿ.ರಾಮಕೃಷ್ಣ ಅವರು ಹಲವಾರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಶತಮಾನಕಂಡ ಶಾಲೆಯಲ್ಲಿಯೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ್ದಾರೆ ಎಂದರು.
ನರಸಿಹರೆಡ್ಡಿ ಚಂಡರಕಿ ಮಾತನಾಡಿ, ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಿಕ್ಷಕ ರಾಮಕೃಷ್ಣ ಅವರು ಈ ಶಾಲೆಗೆ ಮಾರ್ಗದರ್ಶನ ನೀಡಲು ಮನವಿ ಮಾಡಿದರು.

ಲೈಯನ್ಸ್ ಕ್ಲಬ್‌ನ ಶ್ರೀನಿವಾಸ ರೆಡ್ಡಿ ಪಾಟೀಲ್ ಸೇಡಂ ಮಾತನಾಡಿ, ಅವರ ಸೇವೆ ಸಾರ್ಥಕ. ಎರಡನೇ ಇನಿಂಗ್ಸ್ ಸೇವೆ ಲಾಯನ್ಸ್ ಕ್ಲಬ್‌ನಲ್ಲಿ ಮುಂದುವರೆಯಲಿದೆ. ರಾಮಕೃಷ್ಣ ಅವರು ನಕ್ಷತ್ರ ವಿದ್ದಂತೆ. ಮಕ್ಕಳ ಮನಸ್ಸಿನ ಸರಳ ಸಜ್ಜನಿಕೆಯ ವ್ಯಕ್ತಿ ಎಂದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಸಂತೋಷ ನೀರೆಟಿ, ಬಸವರಾಜ ದಳಪತಿ, ಕೆ.ಮೊಗುಲಪ್ಪ, ನಾರಾಯಣರೆಡ್ಡಿ, ರವೀಂದ್ರ ಚವಾಣ, ವೆಂಕಟರಾಮುಲು, ಲಕ್ಷ್ಮಾರೆಡ್ಡಿ, ರಘುನಾಥರೆಡ್ಡಿ ಗವಿನೋಳ, ಸಿಆರ್‌ಪಿ ಬಾಲಪ್ಪ ಸಿರಿಗೆಂ, ಲಕ್ಷ್ಮೀಕಾಂತ ರೆಡ್ಡಿ, ಕೃಷ್ಣರೆಡ್ಡಿ, ಮಾಣಿಕಪ್ಪ, ವೀರಪ್ಪ ಪ್ಯಾಟಿ, ದಾಸಪ್ಪ, ಶ್ರೀನಿವಾಸ ರೆಡ್ಡಿ, ವೆಂಕಟಪ್ಪ ಅವಂಗಾಪುರ, ವಿಜಯಕುಮಾರ ನಿರೇಟಿ, ಚಂದ್ರಕಾAತ ಹೊಟ್ಟಿ, ಆಶಪ್ಪ, ವಿಜಯಲಕ್ಷ್ಮಿ ನೆಲ್ಲೋಗಿ, ಕುಮದ್ವತಿ, ಭಾರತಿ, ಸಾವಿತ್ರಿ, ಮಮತಾ ಹಾಗೂ ಮುಖ್ಯಗುರು ಭೀಮಪ್ಪ ಗೌಡರ, ಶಿವರಾಜ ಸಾಕಾ ಸೇರಿದಂತೆ ಇತರರು ಇದ್ದರು.