ಸಾಹಿತ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನ ಬದಲಿಸುವ ಶಕ್ತಿ ಇದೆ; ಖಾಸಾಮಠ ಶ್ರೀಗಳು

By admin

ಸಾಹಿತ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನ ಬದಲಿಸುವ ಶಕ್ತಿ ಇದೆ; ಖಾಸಾಮಠ ಶ್ರೀಗಳು

ಸೆಕ್ಯುಲರ್ ವಾಯ್ಸ್ ನ್ಯೂಸ್ ಗುರುಮಠಕಲ್

ಶರಣರ ವಚನ ಸಾಹಿತ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನ ಬದಲಿಸುವ ಶಕ್ತಿ ಅಡಗಿದೆ, ಮನಸ್ಸನ್ನು ವಚನ ಸ್ಮರಣೆಯಲ್ಲಿ ತಲ್ಲೀನಗೊಳಿಸಿದರೆ ಸಾರ್ಥಕ ಬದುಕನ್ನು ಕಾಣಬಹುದು ಎಂದು ಪೂಜ್ಯ ಖಾಸಮಠದ ಪೂಜ್ಯ ಶ್ರೀ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮಿಗಳು ಹೇಳಿದರು.

ಪಟ್ಟಣದ ಖಾಸಮಠದ ಆವರಣದಲ್ಲಿ ಹಮ್ಮಿಕೊಂಡ ಮಾಸಿಕ ಶರಣ ಸಂಗಮ ಕೃತಿ ಲೋಕಾರ್ಪಣೆ ಗೌರವ ಸಮರ್ಪಣೆ ಹಾಗೂ ಸಂಗೀತೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿ ವಚನ ಸಾಹಿತ್ಯವನ್ನು ವಿಶಾಲ ದಷ್ಠಿಕೋನದಲ್ಲಿ ಅಧ್ಯಯನ ಮಾಡಬೇಕಿದೆ. ಬಸವಾದಿ ಶಿವಶರಣರು ಪ್ರತಿಯೊಂದು ವಚನಗಳಲ್ಲಿ ಸಾಮಾಜಿಕ ಕಳಕಳಿಗೆ ಸಂಬAಧಿಸಿದ ಮಾಹಿತಿಯನ್ನು 12ನೇ ಶತಮಾನದಲ್ಲಿ ಕೊಡುಗೆ ನೀಡಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲಿ ಬೆಳೆವಣಿಗೆಯಲ್ಲಿ ಸಾಹಿತ್ಯ ಪ್ರಮುಕ ಪಾತ್ರ ವಹಿಸುತ್ತದೆ. ಹೀಗಾಗಿ ಸಾಹಿತ್ಯದಲ್ಲಿ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ನಾಗಭೂಷಣ ಆವಂಟಿ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೆಂಗಳೂರ, ಮಲ್ಲಿಕಾರ್ಜುನ್ ಸತ್ಯಂಪೇಟೆ, ಹಿರಿಯ ಸಾಹಿತಿಗಳು ಹಾಗೂ ತಾಲ್ಲೂಕ ಕನ್ನಡ ಸಾಹಿತ್ಯ ಸಮೇಳನ ಅಧ್ಯಕ್ಷ ಲಿಂಗಾರೆಡ್ಡಿ ಶೇರಿ, ವೀರಶೈವ ಲಿಂಗಾಯತ ಸಾಮಜದ ಉಪಾಧ್ಯಕ್ಷ ನರಸರೆಡ್ಡಿ ಪೋಲಿಸ್ ಪಾಟೀಲ್ ಗಸೂಡ್ಡೆಸೂಗೂರು, ಉಪನ್ಯಾಸಕರು ವಿಶ್ವನಾಥ ಪತಂಗೆ, ಕೃಷಿ ಕೊಲಿಕಾರರ ಸಂಘದ ಜಿಲ್ಲಾ ಅದ್ಯಕ್ಷ ದಾವಲ್ ಸಾಬ್, ಪ್ರಾಂತ ರೈತ ಸಂಘ ಜಿಲ್ಲಾ ಅಧ್ಯಕ್ಷ ಚನ್ನಪ್ಪ, ಆನೆಗುಂದಿ, ಕೃತಿ ಲೇಖಕರು ಹಾಗೂ ಮುಖ್ಯಗುರುಗಳು ಸಾಯಪ್ಪ ಬಿ. ಮುನಿ ಪ್ರಾಂಶುಪಲರು ಮುರರ್ಜಿ ದೇಸಾಯಿ ವಸತಿ ಶಾಲೆ ಲಿಂಗೇರಿ ಸ್ಟೇಷನ್ ಸುರೇಶ್ ತಡಿಬಿಡಿ, ಮಲ್ಲಿಕಾರ್ಜುನ್ ಸ್ವಾಮಿ ಹಿರೇಮಠ, ವೀರಣ್ಣ ಬೇಲಿ, ಬಸವರಾಜ್ ಪಸಾರ್, ಕರಿಬಸಪ್ಪ ಸಜ್ಜನ್ ಸೇರಿದಂತೆ ಇತರರು ಇದ್ದರು.