ರಕ್ತದಾನದಿಂದ ಆರೋಗ್ಯದಲ್ಲಿ ಹೊಸ ಚೇತರಿಕೆ, ಮತ್ತು ಚೈತನ್ಯ ಮೂಡುತ್ತದೆ

By admin
                                 

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಅಜೀಂ ಪ್ರೇಮ್‌ಜೀ ಸ್ಕೂಲ್ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಿಬಿರದಲ್ಲಿ ರಕ್ತದಾನದಿಂದ ಆರೋಗ್ಯದಲ್ಲಿ ಹೊಸ ಚೇತರಿಕೆ, ಮತ್ತು ಚೈತನ್ಯ ಮೂಡುತ್ತದೆ’ ಎಂದು ರಕ್ತದಾನ ಶಿಬಿರದಲ್ಲಿ ಶಿಕ್ಷಕರಿಗೆ ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ಜಿಲ್ಲಾಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಶ್ರೀಯುತ ಡಾ.ಸಂಜೀವಕುಮಾರ ಸಿಂಗ್ ರಾಯಚೂರ್‌ಕರ್ ಅವರು ಹೇಳಿದರು.

ಯಾದಗಿರಿ ನಗರದ ವಡಗೇರಾ ರಸ್ತೆಯಲ್ಲಿ ಬರುವ ಅಜೀಂ ಪ್ರೇಮ್‌ಜೀ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ಇಂದು ಜನವರಿ 17ರ ಶುಕ್ರವಾರ ರಂದು ಮಕ್ಕಳ ಕಲಿಕಾ ಮೇಳ ಹಾಗೂ ರಕ್ತದಾನ ಶಿಬಿರವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಮಹತ್ವದ ಕುರಿತು ಹೇಳುತ್ತಾ ‘ರಕ್ತದಾನದಿಂದ ಆರೋಗ್ಯದಲ್ಲಿ ಹೊಸ ಚೇತರಿಕೆ, ಮತ್ತು ಚೈತನ್ಯ ಮೂಡುತ್ತದೆ’ ಎಂದು ಶಿಕ್ಷಕರು ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಅನಿಲ್ ಎಸ್ ಅಂಗಡಿಕಿ ಅವರು ರಕ್ತದಾನದ ಮಹತ್ವದ ಕುರಿತು ಮನವರಿಕೆ ಮಾಡಿಕೊಟ್ಟರು. ಈ ಶಿಬಿರದಲ್ಲಿ 50 ಜನ ದಾನಿಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು.

ಜೊತೆಗೆ ಶಾಲೆಯ ಆವರಣದಲ್ಲಿ ಮಕ್ಕಳ ಕಲಿಕಾ ಮೇಳವನ್ನು ಆಯೋಜಿಸಲಾಗಿದ್ದು 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ಮಕ್ಕಳು ವಿವಿಧ ವಿಷಯಗಳಲ್ಲಿ ತಾವು ಕಲಿತ ವಿಷಯಾಂಶಗಳನ್ನು ಹಂಚಿಕೊAಡರು. ಪೋಷಕರು ಮತ್ತು ಗಣ್ಯರು ಕಲಿಕಾ ಮೇಳದಲ್ಲಿ ಭಾಗವಹಿಸುವ ಮೂಲಕ ಮಕ್ಕಳ ಚಟುವಟಿಕೆಗಳನ್ನು ಕಣ್ತುಂಬಿಕೊAಡರು ಎಂದು ತಿಳಿಸಿದರು. ಶಾಲಾ ವಾರ್ಷಿಕೋತ್ಸವದ ಮುಂದುವರೆದ ಭಾಗವಾಗಿ ನಾಳೆ 18-01-2025ರ ಶನಿವಾರ ಸಂಜೆ 5 ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಪಾಲಕರು ಮತ್ತು ಇನ್ನಿತರರು ಉಪಸ್ಥಿತರಿದ್ದರು.