
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಸಮಯ ಪರಿಪಾಲನೆ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಕಾರ್ಯಕ್ರಮಕ್ಕೆ ಅತ್ಯಂತ ಮಹತ್ವವಾದ ಅಂಶವಾಗಿದೆ. ಮಕ್ಕಳನ್ನ ಒಳ್ಳೆ ನಾಗರಿಕನನ್ನಾಗಿ ಮಾಡಿ ಮಕ್ಕಳನ್ನು ಕರೆದುಕೊಂಡು ಬಂದದ್ದಕ್ಕೆ ತುಂಬಾ ಸಂತೋಷ. ಮಕ್ಕಳಿಗೆ ಹೆಚ್ಚಿನ ವಿಶೇಷ ಕಾಳಜಿ ವಹಿಸುತ್ತೇವೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಅಧ್ಯಕ್ಷ ಸುರೇಶ್ ಸಜ್ಜನ್ ಇಂದಿಲ್ಲಿ ಹೇಳಿದರು.
ನಗರದ ಡಾನ್ ಬಾಸ್ಕೋ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಉಸ್ತುವಾರಿಗಳು ಆದ ಮಲ್ಲೇಶ್ವರಿ ಜುಜಾರೆ ಅವರು ನಡೆಯುವ ಎರಡನೇ ಕಲ್ಯಾಣ ಕರ್ನಾಟಕದ ಜಾಂಬೂರಿ ಕಾರ್ಯಕ್ರಮವನ್ನು ತುಂಬಾ ಸುಸಜ್ಜಿತ ವ್ಯವಸ್ಥೆಯಲ್ಲಿ ನಡೆಸಿಕೊಂಡು ಹೋಗಬೇಕೆಂದು ಸ್ಕೌಟ್ ಮತ್ತು ಗೈಡ್ ಕ್ಯಾಪ್ಟನ್ ಗಳಿಗೆ ಹಾಗೂ ಎಲ್ಲಾ ಶಿಕ್ಷಕರಿಗೆ ಸಲಹೆಯನ್ನು ನೀಡಿದರು.
ವಸತಿ ನಿಲಯದ ಪ್ರತಿಯೊಂದು ರೂಂ ಹಾಗೂ ಶೌಚಾಲಯಗಳು ತುಂಬಾ ಸ್ವಚ್ಛತೆ ಹಾಗೂ ಶಿಸ್ತು ಬದ್ಧ ರೀತಿಯಲ್ಲಿ ಮಕ್ಕಳನ್ನು ನೋಡಿಕೊಳ್ಳಬೇಕೆಂದು ಎಲ್ಲಾ ಶಿಕ್ಷಕರಿಗೆ ಹೇಳಿದರು.
ನಾಳೆಯಿಂದ ಯಾವುದೇ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಉಪಹಾರ ಮಧ್ಯಾಹ್ನದ ಊಟ ಸಾಯಂಕಾಲದ ಉಪಹಾರ ಹಾಗೂ ರಾತ್ರಿಯ ಊಟವನ್ನು ಅಚ್ಚುಕಟ್ಟಾಗಿ ನಡೆಸಿಕೊಡಬೇಕೆಂದು ಸರ್ವರಲ್ಲಿ ಮನವಿ ಮಾಡಿಕೊಂಡರು.
ಮಕ್ಕಳಿಗಾಗಿ ಸುರಕ್ಷತೆಯನ್ನು ಕಲ್ಪಿಸಿಕೊಡಲು ಜಿಲ್ಲಾಧಿಕಾರಿ ಅವರು ತುಂಬಾ ಕಾಳಜಿ ವಹಿಸಿ ಪೋಲಿಸ್ ಬಂದೋಬಸ್ತು ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ. ಅದಲ್ಲದೆ ಮಕ್ಕಳ ಸುರಕ್ಷತೆಗಾಗಿ ಆರೋಗ್ಯ ಸಿಬ್ಬಂದಿಯನ್ನು ಸಹ ಕಲ್ಪಿಸಲಾಗುವುದು ದಯವಿಟ್ಟು ಎಲ್ಲರೂ ಮಕ್ಕಳೊಂದಿಗೆ ಸಹಕರಿಸಿ ಎಂದು ಹೇಳಿದರು.
ಹೆದ್ದಾರಿ ದಾಟುವಾಗ ಸಮಯದಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಪಾಡಿಕೊಳ್ಳಿ ಇದ್ದಕ್ಕೆ ಎಲ್ಲರೂ ಸಹಕರಿಸಿ ಎಂದು ಸಲಹೆಯನ್ನು ನೀಡಿದರು.
ಕಾರ್ಯಕ್ರಮವನ್ನು ಬಸವರಾಜ್ ಗೋಗಿ ಅವರು ನಿರೂಪಿಸಿ ವಂದಿಸಿದರು
