
ಸಂವಿಧಾನಕ್ಕೆ ಬದ್ಧರಾಗಿ ನಮ್ಮ ಕರ್ತವ್ಯವನ್ನು ದೇಶ, ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಲು ಮುಡುಪಾಗಿಟ್ಟು, ಶ್ರಮಿಸೋಣ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿAದು 76ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟçಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಂವಿಧಾನದಿAದಾಗಿ ಈ ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾನ ಅವಕಾಶ ದೊರೆತಿದೆ. ಮೂಲಭೂತ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಸಹ ದೊರಕಿದ್ದು, ಜನ ಸಾಮಾನ್ಯರಿಗೂ ಎಲ್ಲವನ್ನು ಸಿಗುವ ರೀತಿಯಲ್ಲಿ ನೆರವಾಗಿದೆ. ಇಂತಹ ಹೆಮ್ಮೆಯ ಸಂವಿಧಾನಕ್ಕೆ ಬದ್ಧರಾಗಿ ನಾವೆಲ್ಲರೂ ನಮ್ಮ ಕರ್ತವ್ಯವನ್ನು ಸಹ ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗಿದೆ. ಈ ದೇಶದ, ರಾಜ್ಯದ ಮತ್ತು ಜಿಲ್ಲೆಯ ಕೀರ್ತಿಗಾಗಿ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಭಾರತದ ಸಂವಿಧಾನವು 1949ರ ನವೆಂಬರ್ 26ರಂದು ಅಂಗೀಕಾರವಾಗಿ, ಜನವರಿ 26ರಂದು ಜಾರಿಗೆ ಬಂದಿದ್ದು,ಇದರ ಹಿನ್ನೆಲೆಯಲ್ಲಿ ಈ ದಿನವನ್ನು ಅತ್ಯಂತ ಗೌರವದಿಂದ ನಾವು ಆಚರಿಸುತ್ತಿದ್ದು ಇದಕ್ಕಾಗಿ ಶ್ರಮಿಸಿದ ಸಂವಿಧಾನದ ಪಿತಾಮಹ, ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಸದಾ ಸ್ಮರಿಸುವುದಾಗಿ ಅವರು ಹೇಳಿದರು.
ನಮ್ಮ ದೇಶದ ಅತ್ಯುನ್ನತ ಕಾನೂನು ಸಂವಿಧಾನವಾಗಿದೆ. ಸರ್ಕಾರವಾಗಲಿ,ಯಾರೇ ಪ್ರಭಾವಿ ಶ್ರೀಮಂತರಾಗಿರಲಿ, ಸಾಮಾನ್ಯ ಪ್ರಜೆಆಗಿರಲಿ ಸಂವಿಧಾನವನ್ನು ಮೀರಿ ನಡೆಯುವಂತಿಲ್ಲ. ನಮ್ಮ ಸಂವಿಧಾನದ ನೀತಿ, ನಿಯಮಗಳೆಲ್ಲವೂ ಸಮಾನವಾಗಿವೆ. ಸರ್ವಶ್ರೇಷ್ಠ, ಗೌರವಪೂರ್ಣವಾದ ನಮ್ಮ ಸಂವಿಧಾನ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರು.
ಭಾರತದ ಮೂಲ ಸಂವಿಧಾನವನ್ನು ಕೈಬರಹದಲ್ಲಿ ಬರೆಯಲಾಗಿದೆ. ಈವರೆಗೆ ಒಟ್ಟು 105 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. ಈಗ ಸಂವಿಧಾನದಲ್ಲಿ 12 ಅನುಚ್ಛೇದಗಳು, 25 ಭಾಗಗಳು ಹಾಗೂ 470 ವಿಧಿಗಳಿವೆ ಎಂದು ಹೇಳಿದ ಅವರು ನಮ್ಮ ಸಂವಿಧಾನಕ್ಕೆ ಹಾಗೂ ಈ ದೇಶಕ್ಕೆ ನಾವು ಸದಾ ಗೌರವಿಸೋಣ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಯುವನಿಧಿ ಯೋಜನೆಗಳಂತಹ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ವಿಶೇಷವಾಗಿ ಬಡ ಜನರಿಗೆ ಹಲವು ರೀತಿಯಲ್ಲಿ ನೆರವಾಗಿರುವ ಸರ್ಕಾರ ಈ ಯೋಜನೆಗಳಿಗಾಗಿ 65,000 ಕೋ.ರೂಗಳನ್ನು ಈವರೆಗೆ ವ್ಯಯ ಮಾಡಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5000 ಕೋ. ರೂಗಳನ್ನು ಮಂಜೂರು ಮಾಡುವ ಮೂಲಕ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಗಮನ ನೀಡಿದೆ. ಅದರಂತೆ ಕೇಂದ್ರ ಮಾಜಿ ಸಚಿವರು ಆಗಿದ್ದ ಡಾ.ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್ ಅವರ ನಿರಂತರ ಪ್ರಯತ್ನದ ಫಲವಾಗಿ 371 (ಜೆ) ಜಾರಿಗೊಂಡು ಈ ಭಾಗದ ಉದ್ಯೋಗ ಮತ್ತು ಶಿಕ್ಷಣದ ಸಮಸ್ಯೆ ನಿವಾರಣೆಯಾಗಿ, ಪ್ರಗತಿ ಸಾಧಿಸಲು ನೆರವಾಗಿದೆ. ವಿಶೇಷವಾಗಿ ನಿರುದ್ಯೋಗಿ ಯುವ ಜನಾಂಗಕ್ಕೆ ಹಲವು ರೀತಿಯಲ್ಲಿ ಇದು ನೆರವಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ದೊರಕಿಸಲು ಜಲಧಾರೆ, ಜಲಜೀವನ್ ಮಿಷನ್ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಆರು ಇಂದಿರಾ ಕ್ಯಾಂಟೀನಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು ಮಹತ್ವಕಾಂಕ್ಷಿ ಜಿಲ್ಲೆ ಆಗಿರುವ ಯಾದಗಿರಿ ಭಾಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಲವು ಅಭಿವೃದ್ಧಿಪರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ಅಸಾಧಾರಣ ಸಾಹಸ ತೋರಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕೆಳದಿ- ಹೊಯ್ಸಳ ಪ್ರಶಸ್ತಿ ನೀಡಲಾಯಿತು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು,ಇತರೆ ಸಾಧಕರಿಗೆ ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ, ವಿಜೇತರಿಗೆ ಸನ್ಮಾನ,
76ನೇ ಗಣರಾಜ್ಯೋತ್ಸವ ಆಚರಣೆಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಯಾದಗಿರಿ ನ್ಯೂ ಕನ್ನಡ ಪ್ರೌಢ ಶಾಲೆ ಮತ್ತು ಸಾರ್ವಜನಿಕ ಪಾಠ ಶಾಲೆ ಹಾಗೂ ಯಾದಗಿರಿ ಸಭಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ನೀಡಲಾಯಿತು. ಯಾದಗಿರಿ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) ಹಾಗೂ ಯಾದಗಿರಿ ಇಕ್ರಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ದ್ವಿತೀಯ ಬಹುಮಾನ ನೀಡಲಾಯಿತು. ಯಾದಗಿರಿ ರತ್ನಂ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಯಾದಗಿರಿ ಆದರ್ಶ ಪ್ರೌಢ ಶಾಲೆ ತೃತೀಯ ಬಹುಮಾನ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮತ್ತು ಪೆರೇಡನಲ್ಲಿ ಭಾಗವಹಿಸಿದ ಶಾಲಾ ಮಕ್ಕಳ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.
ಯಾದಗಿರಿ ಡಿಎಆರ್ ಘಟಕ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ ಪರೇಡ್ ಕಮಾಂಡರ್ ಶ್ರೀ ಲಚ್ಚಪ್ಪ ಚವ್ಹಾಣ ಗೌಡಗೇರಿ ಅವರ ನೇತೃತವದಲ್ಲಿ ವಿವಿಧ ತಂಡಗಳು ಪೆರೇಡ್‌ನಲ್ಲಿ ಭಾಗವಹಿಸಿದ ತಂಡಗಳ ವಿಜೇತರಾದ ತಂಡಗಳು ಯಾದಗಿರಿ ಆದರ್ಶ ವಿದ್ಯಾಲಯ ಶಾಲಾ ತಂಡ ಕುಮಾರ ವಿಶ್ವರಾಜ ಪ್ರಥಮ ಬಹುಮಾನ ನೀಡಲಾಯಿತು. ಯಾದಗಿರಿ ಸಭಾ ಆಂಗ್ಲ ಮಾಧ್ಯಮ ಶಾಲೆ (ಬಾಲಕರು) ಕುಮಾರ ಪ್ರಶಾಂತ ದ್ವಿತೀಯ ಬಹುಮಾನ ನೀಡಲಾಯಿತು. ಯಾದಗಿರಿ ಸ್ಕೌಟ್ಸ್ ವಿಭಾಗ ಮಹಾತ್ಮ ಗಾಂಧಿ ಶಾಲೆ ಕುಮಾರ ಮಣಿಕಂಠ ತೃತೀಯ ಬಹುಮಾನ ನೀಡಲಾಯಿತು.
ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಪರಿಕರಗಳನ್ನು ವಿತರಣೆ ಕಾರ್ಮಿಕ ಫಲಾನುಭವಿಗಳು ಶ್ರೀ ವಿರಪಣ್ಣ ತಂದೆ ಭೀಮಣ್ಣ ಶ್ರೀ ವಿಶ್ವನಾಥ ತಂದೆ ಭೀಮರಾಯ, ಶ್ರೀ ಗಾಯಪ್ಪ ತಂದೆ ಮರೆಪ್ಪ, ಶ್ರೀ ಭೀಮರಾಯ ತಂದೆ ಬಾಂಡೆಪ್ಪ, ಶ್ರೀ ಬಸವರಾಜ ತಂದೆ ಪೋಮು ರಾಠೋಡ, ವಿತ್ತರಿಸಿದ ಟೂಲ್ ಕಿಟ್ ಮೆಸನ್, ಶ್ರೀ ಡೇವಿಡ್ ತಂದೆ ಬಸವರಾಜ, ಶ್ರೀ ಭೀಮರಾಯ ತಂದೆ ಸಿದ್ದರಾಮಪ್ಪ, ಶ್ರೀ ಪರಶುರಾಮ ತಂದೆ ಮರೆಪ್ಪ ಎಲೆಕ್ಟಿçÃಶನ್ ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಕಿಟ್ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2024-25ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪ್ರಶಸ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಅಸಾಧಾರಣ ಸಾಧನೆ ಮಾಡಿದ ವಿವಿಧ ಕ್ಷೇತ್ರಗಳಲ್ಲಿ ಪ್ರತಿಬೆಯುಳ್ಳ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಲಾಯಿತು.
ಸಂಗೀತ, ಕಲೆ ಕ್ಷೇತ್ರದಲ್ಲಿ ಕುಮಾರಿ ಆಕಾಶ ಬಂಟನೂರ ತಂದೆ ಬಸವರಾಜ, ಕುಮಾರಿ ಮೈತ್ರಿ ತಂದೆ ಮಲ್ಲಪ್ಪ ಬಡಿಗೇರ ಸಂಗೀತ, ಕಲೆ ಕ್ಷೇತ್ರದಲ್ಲಿ ಪ್ರತಿಬೆಯುಳ್ಳವರಿಗೆ ತಲಾ ಹತ್ತು ಸಾವಿರ ರೂಪಾಯಿಗಳು ನೀಡಲಾಯಿತು. ಕುಮಾರ ಶ್ರೀನಿವಾಸ ತಂದೆ ದೊಡ್ಡಪ್ಪ, ಕುಮಾರ ಭುವನ್ ಚವ್ಹಾಣ ತಂದೆ ಸಂಜಯ ಚವ್ಹಾಣ ನಾವೀನ್ಯತೆ ಕ್ಷೇತ್ರದಲ್ಲಿ ತಲಾ ಹತ್ತು ಸಾವಿರ ರೂಪಾಯಿಗಳು ನೀಡಲಾಯಿತು. ಕುಮಾರ ಚಂದನ್ ಅವಂಟಿ ತಂದೆ ಶಂಕರಲಿAಗಪ್ಪ, ಕುಮಾರಿ ನಿವೇದಿತಾ ತಂದೆ ಮಾಣಿಕ್ಯರಾಜು ತಾರ್ಕಿಕ ಕ್ಷೇತ್ರದಲ್ಲಿ ತಲಾ ಹತ್ತು ಸಾವಿರ ರೂಪಾಯಿಗಳು ನೀಡಲಾಯಿತು. ಕುಮಾರ ರೋಹಿತ್ ತಂದೆ ಸುರೇಶ, ಕುಮಾರಿ ಭಾಗ್ಯಶ್ರೀ ತಂದೆ ಭೀಮರಾಯ ಕ್ರೀಡಾ ಕ್ಷೇತ್ರದ ವಿಭಾಗದಲ್ಲಿ ಹತ್ತು ಸಾವಿರ ರೂಪಾಯಿಗಳು ನೀಡಲಾಯಿತು.
ಮಾಧ್ಯಮ ಕ್ಷೇತ್ರಗಳಲ್ಲಿ ಬಲಶೇಟಿಹಾಳ ಶ್ರೀ ಬಸಣ್ಣ ತಂದೆ ಸಂಗಪ್ಪ ಗೊಡ್ರಿ ಸಾಹಿತ್ಯ ಕ್ಷೇತ್ರದಲ್ಲಿ, ಮಲ್ಲಿಕಾರ್ಜುನ ತಂದೆ ನಿಂಗಪ್ಪ ರಾಯಪ್ಪನೋರ ಸಮಾಜ ಸೇವೆಯಲ್ಲಿ, ಅಲ್ಲಿಪೂರ ತಿರುಪತಿ ತಂದೆ ಆಂಜನೇಯ ವೈದ್ಯ ಸಂಗೀತ ಕಲೆಕ್ಷೇತ್ರದಲ್ಲಿ, ದೇವಾಪುರ ಕುಮಾರಿ ಅನ್ನಪೂರ್ಣ ತಂದೆ ಸಂಗಣ್ಣ, ಕುಮಾರಿ ಭಾಗ್ಯಶ್ರೀ ತಂದೆ ಭೀಮರಾಯ ಕ್ರೀಡೆ ಕ್ಷೇತ್ರದಲ್ಲಿ, ಸುರಪುರ ತಾಲೂಕಿನ ಹಸನಾಪೂರ ನಗರದ ಶ್ರೀ ಸಿದ್ದಯ್ಯ ಪಾಟೀಲ್ ತಂದೆ ಮಲ್ಲಣಗೌಡ ಪಾಟೀಲ್ ಪತ್ರಕರ್ತರು, ಜೈನಾಪೂರ ಶ್ರೀ ಪ್ರಭು ತಂದೆ ಸಣ್ಣ ಭೀಮರಾಯ ವಿಶೇಷ (ದಿವ್ಯಾಂಗನ ಫ್ಯಾಶನ್ ಮತ್ತು ಟ್ಯಾಲೆಂಟ್) ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು.
ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜನೆಯಾದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಸುರೇಖಾ ಪ್ರಥಮ ಸ್ಥಾನ, ವಡಗೇರಾ ತಹಸೀಲ್ ಕಛೇರಿ ಗೀತಾ ದ್ವಿತೀಯ ಸ್ಥಾನ, ಅಂಗನವಾಡಿ ಕಾರ್ಯಕರ್ತೆಯರು ಮಂಜುಳಾ ತೃತೀಯ ಸ್ಥಾನ ನೀಡಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಮಂಜುಳಾ ಸೂಗಮ್ಮ ಅವರಿಗೆ ಬಹುಮಾನ ನೀಡಲಾಯಿತು.
ನಗರ ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ಪ್ರಭಾರಿ ಜಿಲ್ಲಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಮಕ್ಕಳ ದೇಶಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.
