“ನಮ್ಮವ್ವ ಅಂಗಡಿ ಸಾಹುಕಾರತಿ”

By admin

“ನಮ್ಮವ್ವ ಅಂಗಡಿ ಸಾಹುಕಾರತಿ”

ಅವ್ವ ನೀ ಅಂಗಡಿ ಸಾಹುಕಾರತಿ
ನೀನು ತವರು ಮನೆಯಲ್ಲಿಯೂ ಸಾಹುಕಾರತಿ!
ಗಂಡನ ಮನೆಯಲ್ಲಿಯೂ ಸಾಹುಕಾರತಿ
ನೀ ಜಗಕೆ ಬೆಳಗಿದಿ ಅಂಗಡಿ ಮನೆತನದ ಕೀರ್ತಿ!!

ನಿಮ್ಮವ್ವ ಬಿಟ್ಟೊದಾಗ ಪಡೆದೆ ಅಣ್ಣ-ತಮ್ಮನ ಪ್ರೀತಿ
ಗಂಡನ ಮನೆಗೆ ಬಂದಾಗ ಪಡೆದೆ ಪತಿಯ ಪ್ರೀತಿ!
ಸತಿ ಪತಿಗಳೊಂದಾದಾಗ ಬೆಳಗಿದಿ ಆರತಿ
ಅವ್ವ ನೀ ಅಂಗಡಿ ಸಾಹುಕಾರತಿ!!

ಮಕ್ಕಳನ್ನು ಹೆತ್ತು ಹೊತ್ತು ಬೆಳಿಸಿದಿ
ನೀ ಕೊಟ್ಟಿ ಸಾಕಷ್ಟು ಪ್ರೀತಿ,ಮಮತೆಯನ್ನಾಲಿಸಿ!
ಬಂಧು ಬಳಗ ಭಾಂದವರೆಲ್ಲ ನಮ್ಮವರಂದಿ
ಅವ್ವ ನೀನು ಸಾಮಾನ್ಯಳಲ್ಲ ನೀನು ಅಂಗಡಿ ಸಾಹುಕಾರತಿ!!

ನಿನ್ನ ಮನೆಯಲ್ಲಿ ಯಾವಾಗಲೂ ಜನಜಂಗಳು
ಯಾಕೆಂದರೆ ನಿನ್ನಲ್ಲಿ ಇರಲಿಲ್ಲ ಬೇದ-ಭಾವಗಳು!
ಮನದಲ್ಲಿ ಇಟ್ಟುಕೊಂಡಿದ್ದಿ ಎಲ್ಲರೂ ನಮ್ಮವರೆಂದು
ಅವ್ವ ನೀ ಅಂಗಡಿ ಸಾಹುಕಾರತಿ!!

ಮಗನಿಗೆ ಸರ್ಕಾರಿ ನೌಕರಿ ಬಂತೆಂದು ಊರಿಗೆ ಸಿಹಿ ತಿನಿಸಿದಿ
ಸೊಸೆಗೆ ನೌಕರಿ ಬಂತೆಂದು ಸಾವಿರ ಜನಕೆ ಹೇಳಿದಿ!
ಆದರೆ ಅದರ ಖುಷಿ ಅನುಭವವನ್ನೆ ಪಡೆಯಲಿಚ್ಚಿಸಿದಿ
ಅವ್ವ ನೀ ಅಂಗಡಿ ಸಾಹುಕಾರತಿ!!

ಹಿರಿ ಮಗನನ್ನು ಕಳೆದುಕೊಂಡಾಗ ಒಳಗೆ ಮಾಡಿಕೊಂಡಿ ಚಿಂತಿ
ಪ್ರೀತಿಯಿಂದ ನೀ ಸಾಕಿದ ಮಗಳು ಬಿಟ್ಟೊದಾಗ ನೀನಾದೆ ಭ್ರಾಂತಿ!
ಕೊನೆಗೆ ನಿನ್ನ ಮನಸಲ್ಲೇ ಅನ್ಕೊಂಡೆ ಏನೈತಿ ಈ ಜಗದಲ್ಲಿ
ಅವ್ವ ನೀನಗೆ ಯಾರು ಸರಿಸಾಟಿಯಿಲ್ಲ, ನೀ ಅಂಗಡಿ ಸಾಹುಕಾರತಿ!!

-ಶ್ರೀ ರೇವಣಸಿದ್ದೇಶ್ವರ ಅಂಗಡಿ ಆಲ್ದಾಳ ಸಹಶಿಕ್ಷಕರು, ಮೊ.9880457535