
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಜಿಲ್ಲಾ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಬಸವರಾಜಪ್ಪ ವಿಭೂತಿಹಳ್ಳಿ ಹಾಗೂ ರಾಜ್ಯ ಸಮಿತಿಗೆ ಜಿಲ್ಲಾ ಪ್ರತಿನಿಧಿಯಾಗಿ ಅಮೀನ್ ರಡ್ಡಿ ಯಾಳಗಿ ಅವರು ಆಯ್ಕೆಯಾಗಿದ್ದಾರೆ.
ಬುಧವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ಸಮ್ಮುಖದಲ್ಲಿ ಸೇರಿದ್ದ ಅಪಾರ ಮುಖಂಡರು, ಕಾರ್ಯಕರ್ತರು ಇವರ ಆಯ್ಕೆಗೆ ಸಮ್ಮತಿಸಿದಾಗ ಪಾಟೀಲ್ ಹೆಸರುಗಳನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕು.ಲಲಿತಾ ಅನಂತಪುರ,ನಿಕಟ ಪೂರ್ವ ಜಿಲ್ಲಾಧ್ಯಕ್ಷ ಅಮೀನ್ ರಡ್ಡಿ,
ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮತ್ತು ಚಂದ್ರಶೇಖರ ಮಗನೂರ,ನಾಗರತ್ನ ಕುಪ್ಪಿ,ಡಾ.ಚಂದ್ರಶೇಖರ ಸುಬೇದಾರ,ದೇವೇಂದ್ರನಾಥ ನಾದ್, ಖಂಡಪ್ಪ ದಾಸನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಮತ್ತು ಮೆಲಪ್ಪ ಮುಳುಗಿ, ಪರುಶುರಾಮ ಕುರಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ವೆಂಕಟರಡ್ಡಿ ಅಬ್ಬೆತುಮಕೂರು, ಎಚ್.ಸಿ.ಪಾಟೀಲ್, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಕುಣಿ, ಚನ್ನುಗೌಡ ಬಿಳ್ವಾರ, ಬಸವರಾಜಗೌಡ ಬಿಳ್ವಾರ ಇತರರಿದ್ದರು.
