ಹಿಂದೂಗಳ ನರಮೇಧದಲ್ಲಿ ರಾಜಕೀಯ ಸಲ್ಲ, ಕಾಗ್ರೆಸ್ ನಾಯಕರ ದ್ವಂದ್ವ ಹೇಳಿಕೆ ಕಿಡಿ; ಡಾ. ಶರಣಭೂಪಾಲರೆಡ್ಡಿ 

By admin

ಯಾದಗಿರಿ : ಕಾಶ್ಮೀರದ ಪಹಲ್ಯಾಮ್‌ಲ್ಲಿ ಉಗ್ರರು ಹಿಂದೂಗಳೆಂದು ಕೇಳಿ ಕೇಳಿ ಹೆಂಡತಿ ಮಕ್ಕಳ ಎದುರೇ ಪೈಶಾಚಿಕ ಕೃತ್ಯ ನಡೆಸಿ ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದಾರೆ. ಕಾಂಗ್ರೆಸ್‌ನ ಬುದ್ದಿಹೀನರು ರಾಜಕಾರಣ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದು ನಾಚಿಗೇಡಿನ ಸಂಗತಿಯಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲ ರೆಡ್ಡಿ ಹೇಳಿದರು.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಎಲ್ಲರೂ ಪಕ್ಷ ಭೇದ ಮರೆತು ದೇಶದ ಹಿತ ಕಾಯುವ ದೃಷ್ಟಿಕೋನವಿರಬೇಕು. ಕಾಶ್ಮೀರದಲ್ಲಿ ಪ್ರವಾಸಕ್ಕೆಂದು ಜನರು ಹೋದ ಸಂದರ್ಭದಲ್ಲಿ ಉಗ್ರರು ದಾಳಿ ಮಾಡಿ ಸುಮಾರು 27 ಜನರನ್ನು ಬಲಿ ಪಡೆದಿದ್ದಾರೆ. ಮೃತರ ಅಂತ್ಯಸಂಸ್ಕಾರಕ್ಕೂ ಮುಂಚೆಯೇ ಕಾಂಗ್ರೆಸ್ ಕೆಲ ಹಿರಿಯ ನಾಯಕರು ದ್ವಂದ್ವ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ ಎಂದರು.
ಕಳೆದ ಎರಡೂರು ದಿನಗಳಿಂದ ಹೇಳಿಕೆಗಳನ್ನು ಗಮನಿಸುತ್ತ ಹೋದರೆ ಅವರ ಮನಸ್ಥಿತಿ ಎಂತಹದ್ದು ಎಂಬುದು ತಿಳಿಯುತ್ತದೆ. ಕಾಂಗ್ರೆಸ್‌ನ ನಾಯಕ, ಸೋನಿಯಾ ಗಾಂಧಿ ಅಳಿಯ ರಾಬರ್ಟ ವಾದ್ರಾ ಅವರು ಕಾಶ್ಮೀರದಲ್ಲಿನ 370ಆರ್ಟಿಕಲ್ ರದ್ದು ಮಾಡಿದಕ್ಕೆ ಈ ಘಟನಾವಳಿ ಸಂಭವಿಸಿದೆ ಎಂಬ ಉಡಾಫೆ ಮಾತುಗಳನ್ನು ಆಡಿದ್ದಾರೆ. ಇನ್ನೊಬ್ಬ ಕಾಂಗ್ರೆಸ್ ಶಾಸಕರು ಕೂಡಾ ಇದನ್ನೇ ಹೇಳಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ನಾಯಕ ಸಚಿವ ಪ್ರೀಯಾಂಕ್ ಖರ್ಗೆ ಅವರು ಹಿಂದೂಗಳೆಂದು ಉಗ್ರರು ಕೇಳೇ ಇಲ್ಲ ಎಂಬ ಬೇಜವಾಬ್ದಾರಿ ಮಾತುಗಳು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದಿಯಾಗಿ ಅನೇಕ ಕಾಂಗ್ರೆಸ್ ನಾಯಕರುಗಳು ಕಾಶ್ಮೀರದಲ್ಲಿ ಭದ್ರತಾ ವೈಫಲ್ಯದಿಂದ ಈ ಘಟನೆ ನಡೆದಿದೆ. ದೇಶದ ಇಂಟಲಿಜೆನ್ಸ್ ಏನು ಮಾಡುತ್ತಿತ್ತು ಎಂಬ ಪ್ರಶ್ನೆ ಮಾಡಿದ್ದಾರೆ. ಇವರೆಲ್ಲರ ಹೇಳಿಕೆಗಳನ್ನು ನೋಡುತ್ತ ಹೋದರೆ ಒಂದೆಡೆ ಉಗ್ರರ ಹೆಡೆಮುರಿ ಕಟ್ಟಲು ಸಜ್ಜಾದ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸುವಂತೆ ಕಂಡರೂ ಇನ್ನೊಂದೆಡೆ ಇವರ ಹೇಳಿಕೆಗಳು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಂತೆ ಕಾಣುತ್ತಿವೆ ಎಂದಿದ್ದಾರೆ.
ಕಾಶ್ಮೀರದಲ್ಲಿ 370 ಆರ್ಟಿಕಲ್ ರದ್ದಾಗಿದ್ದಕ್ಕೆ ಈ ಘಟನೆ ನಡೆದಿದ್ದೇ ಆದರೆ ಈ ಹಿಂದೆ ತಮ್ಮದೇ ಕಾಂಗ್ರೆಸ್ ಸರ್ಕಾರದ ಸಂದರ್ಬದಲ್ಲಿ 370 ಆರ್ಟಿಕಲ್ ಇದ್ದಾಗಲೇ ಲಕ್ಷಾಂತರ ಕಾಶ್ಮೀರ ಪಂಡಿತರ ಹತ್ಯೆ ನಡೆದಿದ್ದು ಎಲ್ಲರೂ ನೋಡಿದ್ದಾಗಿದೆ. ಕೇಳಿದ್ದಾಗಿದೆ. ಇಂದಿರಾ ಗಾಂ ಧಿಯವರು ಪ್ರಧಾನ ಮಂತ್ರಿಗಳಿದ್ದಾಗಲೇ ಅವರ ಹತ್ಯೆ ಆಯಿತು. ಆ ಸಮಯದಲ್ಲಿ ಭದ್ರತಾ ವೈಫಲ್ಯ ಇರಲಿಲ್ಲವೇ? ಆ ಸಮಯದಲ್ಲಿ ಇಂಟಲ್ ಚೆನ್ಸ್ ಎಲ್ಲಿ ಹೋಗಿತ್ತು ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದಿದ್ದಾರೆ.
ಅಲ್ಲದೇ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರರು ಮುಂಬೈ ದಾಳಿ, ಪುಣೆ, ಲಖನೌ, ಬೆಂಗಳೂರು ಸೇರಿ ದೇಶದ ಮೂಲೆ ಮೂಲೆಯಲ್ಲಿ ಬಾಂಬ್ ಬ್ಲಾಸ್ ಗಳಾದವು. ಆ ಸಮಯದಲ್ಲಿ ಯುಪಿಎ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಎಲ್ಲರೂ ಬೆಂಬಲವಾಗಿ ನಿಂತರೆ ಹೊರತು ಸರ್ಕಾರದ ಮೇಲೆ ಭದ್ರತಾ ವೈಫಲ್ಯ, ಇಂಟಲಿಜೆನ್ಸ್ ನಿರ್ಲಕ್ಷ್ಯಎಂಬ ಆರೋಪಗಳನ್ನು ಯಾರೂ ಮಾಡಲಿಲ್ಲ ದೇಶದ ವಿಷಯ ಬಂದಾಗ ಯಾವುದೇ ಪಕ್ಷ ಭೇದ ಮಾಡದೇ ಜಾತಿ, ಧರ್ಮಗಳನ್ನು ಎಣಿಸದೇ ನಾವೇಲ್ಲರೂ ಭಾರತೀಯರು ಎಂಬ ಒಗ್ಗಟ್ಟಿನ ಕೂಗು ಬೇಕಾಗುತ್ತದೆ. ಆದರೆ ಕಾಂಗ್ರೆಸ್ ನಾಯಕರುಗಳ ಮನಸ್ಥಿತಿ ದೇಶದಲ್ಲಿಯೇ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ರಾಜಕಾರಣ ಬೆರೆಸಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಾಯಕರುಗಳ ಇಂಥಮಾನಸಿಕತೆಯಿಂದ ಅವರ ಪಕ್ಷ ಹೀನಾಯ ಸ್ಥಿತಿಗೆ ಬಂದಿದೆ. ಇಷ್ಟಾದರೂ ಇನ್ನೂ ಎಚ್ಚೆತ್ತುಕೊಳ್ಳದಿರುವ ಇವರ ನಡೆಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆಂದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..