
ಯಾದಗಿರಿ : ಜೀವನದಲ್ಲಿ ಯಶಸ್ಸು ಕಾಣಲು ಛಲ, ಗುರಿ, ಸಾಧಿಸುವ ಹಂಬಲ ಇರಬೇಕು ಎಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿವೈಎಸ್ಪಿ ಭರತಕುಮಾರ್ ತಳವಾರ್ ಅಭಿಪ್ರಾಯಪಟ್ಟರು.
ನಗರದ ಕಸಾಪ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿರುವ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಈ ಗುಣಗಳನ್ನು ಬೆಳೆಸಿಕೊಂಡವರು ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿ ಒಬ್ಬ ಜೋತಿಷಿಗೆ ಭವಿಷ್ಯ ಕೇಳಿದ. ನಿನ್ನ ಭವಿಷ್ಯದಲ್ಲಿ ವಿಶ್ವಗೆಲ್ಲುವ ರೇಖೆ ಇಲ್ಲ ಎಂದು ಹೇಳಿದಾಗ ತನ್ನ ಕೈಯಲ್ಲಿ ಚಾಕುವಿನಿಂದ ದೊಡ್ಡ ಗೆರೆ ಎಳೆದುಕೊಂಡು ತೋರಿಸಿ ನೋಡಿ ಈಗ ನನ್ನ ಕೈಯಲ್ಲಿ ರೇಖೆ ಬಂದಿದೆ ನಾನು ವಿಶ್ವವನ್ನೇ ಗೆಲ್ಲುತ್ತೇನೆ ಎಂದ.
ಹಾಗೆಯೇ ಮುಂದೆ 40ವರ್ಷದಲ್ಲಿಯೇಜಗತ್ತನ್ನು ಗೆದ್ದ ಆ ಬಾಲಕನೇ ಅಲೆಕ್ಷಾಂಡರ್ ಎಂದು ವಿವರಿಸಿ ವಿದ್ಯಾರ್ಥಿಗಳು ಇದೇ ಮಾದರಿಯಲ್ಲಿ ಶಿಕ್ಷಣ ಪಡೆದು ಸಾಧನೆ ಮಾಡಬೇಕುಎಂದು ಸಲಹೆ ನೀಡಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ನೇರಡಗಂ ಮ.ನಿ.ಪ್ರ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯೇ ತಪಸ್ಸಾಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಕೇವಲ ನಾಡು ನುಡಿ ನೆಲ ಜಲ ಕ್ಕಾಗಿ ಹೋರಾಟ ಮಾಡುವುದಷ್ಟೇ ಅಲ್ಲ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಸಾಮಾಜಿಕವಾಗಿ ಕಾರ್ಯಕ್ರಮಗಳು ಆಯೋಜಿಸುತ್ತಾ ಬರುತ್ತಿದ್ದು, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವ ಪ್ರತಿಭಾ ಪುರಸ್ಕಾರ ಆಯೋಜಿಸುವ ಮೂಲಕ ಕನ್ನಡ ತಾಯಿ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಅತಿಥಿಗಳು ಸೂಚಿಸಿದ ಕೆಲ ಅಗತ್ಯ ಕ್ರಮಗಳನ್ನು ಆರಂಭಿಕ ಹಂತದಲ್ಲಿ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ಕನ್ನಡಾಂಬೆ ಭಾವಚಿತ್ರ ಪೂಜೆಯನ್ನು ನೆರವೇರಿಸಿದ ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ನಾಗರತ್ನ ಅನಪೂರ ಮಾತನಾಡಿ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ ಕರವೇ ಕಾರ್ಯ ಶ್ಲಾಘನೀಯ ಎಂದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಕುಳಗೇರಿ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಕಾರ್ಯನಿರ್ವಹಣೆ ಇದೆ ಆದರೆ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಗುಣಮಟ್ಟ ಉಳಿದಿಲ್ಲ ಇದಕ್ಕೆ ಕಾರಣ ಸಿಬ್ಬಂದಿ ಕೊರತೆ, ಪಾಲಕರ ನಿರ್ಲಕ್ಷö್ಯ, ವಿದ್ಯಾರ್ಥಿಗಳಲ್ಲಿ ಗಂಭೀರವಾಗಿ ಓದಬೇಕೆಂಬ ಆಕಾಂಕ್ಷೆ ಇಲ್ಲದಿರುವುದು ಕಾರಣವಾಗಿವೆ ಎಂದು ವಿವರಿಸಿ ಇವುಗಳನ್ನು ತೊಡೆಯಲು ಸರ್ಕಾರ ಜೊತೆಗೆ ಜನತೆ ಶ್ರಮಿಸಬೆಕೆಂದು ಸಲಹೆನೀಡಿದರು.
ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಸಿ.ಎಸ್. ಮಾಲಿಪಾಟೀಲ್, ಭಾರೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ| ಚಂದ್ರಕಾAತ ಪೂಜಾರಿ ಮಾತನಾಡಿದರು. ಲೀಡ್ ಬ್ಯಾಂಕ್‌ನ ರಾಜ್ ಕುಮಾರ ವೇದಿಕೆ ಮೇಲಿದ್ದರು.
ಇದೇವೇಳೆ 30ಜನ ಜಿಲ್ಲೆಯ ಪಿಯುಸಿಯಲ್ಲಿ ಗರಿಷ್ಟ ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಸ್ವಾಗತಿಸಿ, ನಿರೂಪಿಸಿದರು.
ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಯಮುನಯ್ಯ ಗುತ್ತೇದಾರ, ಕರವೇ ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ ವಿಶ್ವರಾಜ ಪಾಟೀಲ್,ಪ್ರಕಾಶ ಪಾಟೀಲ್ ಜೈಗ್ರಾಮ್, ಸಾಹೇಬಗೌಡ ನಾಯಕ, ಶರಣಪ್ಪ ದಳಪತಿ, ಶರಣು ಸಾಹುಕಾರ, ಶರಣಬಸಪ್ಪ ಯಲ್ಹೇರಿ, ಅಬ್ದುಲ್ ಚಿಗಾನೂರ, ಬಸವರಾಜ ಚೆನ್ನೂರ, ಸಿದ್ದಪ್ಪ ಕೊಯಿಲೂರ, ಭೀಮರಾಯ ಕೋಳಿ, ಸಿದ್ದಪ್ಪ ಕ್ಯಾಸಪನಳ್ಳಿ, ಸುರೇಶ ಬೆಲಗುಂದಿ, ಮಲ್ಲಿಕಾರ್ಜುನ ಕನ್ನಡಿ, ಕಾಶಿನಾಥ ನಾನೇಕ, ಲಿಂಗಾರಡ್ಡಿ, ನಾಗು ತಾಂಡೂರಕರ್, ವಿಜಯ ರಾಠೋಡ,ಸೈದಪ್ಪ ಗೌಡಗೇರಾ, ಸುಭಾಸ ಯರಗೋಳ, ಮಂಜು ನಾಯ್ಕೋಡಿ, ಶರಣು ಬಂದಳ್ಳಿ, ಯಲ್ಲು ಚಾಮನಳ್ಳಿ, ನಾಗು ಕುಂಬಾರ ಇನ್ನಿತರರು ಇದ್ದರು.
