ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ.

By admin

ಯಾದಗಿರಿ : ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಅವರು ಭಗೀರಥ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಭಗೀರಥ ಮಹಾನ್‌ ತಪಸ್ನಿಯಾಗಿದ್ದರು. ಅವರಂತೆ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ.
ಭಗೀರಥರ ಆದರ್ಶ, ತತ್ವಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿದ ಅವರು ಮಹರ್ಷಿ ಭಗೀರಥ ಕಠಿಣವಾದ ಹಾಗೂ ಸುದೀರ್ಥವಾದ ತಪಸ್ಸಿನಿಂದ ದೇವನದಿ ಗಂಗೆಯನ್ನು ಭೂಲೋಕ ಹಾಗೂ ಪಾತಾಳ ಲೋಕಕ್ಕೆ ಕರೆ ತರಲು ಶ್ರಮಿಸಿದ ಭಗೀರಥ ಮಹರ್ಷಿಗಳು, ಎಂಥ ವಿಘ್ನಗಳು ಬಂದರೂ ಎದೆಗುಂದದೆ ಸತತ ಪ್ರಯತ್ನದಿಂದ ತಮ್ಮ ಕಾರ್ಯ ಸಾಧನೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಕೊನೇರ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ ದೊಡಮನಿ ಮತ್ತು ಮಲ್ಲಿಕಾರ್ಜುನ ಕಟ್ಟಿಮನಿ, ಶರಣ್ಣಪ್ಪ ಟೊಕಾಪುರು, ಗೋಪಾಲ ದಾಸನಕೆರಿ,ಚನ್ನವಿರಯ್ಯ ಸ್ವಾಮಿ, ಭೀಮಬಾಯಿ ಶೆಂಡಿಗಿ, ಭೀಮರಾಯ ಕೋಳ್ಳಕುರ, ಶಿವಣ್ಣ ಪಾಚಂಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.