
ಯಾದಗಿರಿ : ಜನತೆಗೆ ಶುದ್ಧ ನೀರು ಕೊಡುವ ನಿಟ್ಟಿನಲ್ಲಿ ನಗರದ ವಿವಿಧಡೆ ಶುದ್ಧ ನೀರಿನ ಘಟಕಗಳನ್ನು ಹಂತ,ಹಂತವಾಗಿ ಕೂಡಿಸಲಾಗುತ್ತಿದೆ ಎಂದು
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ನಗರದ ಮಾಣೀಕೇಶ್ವರಿ ಹಾಗೂ ಅಜೀಜ್ ಕಾಲೋನಿಯಲ್ಲಿ (ಹನುಮಾನ್ ದೇವಸ್ಥಾನ ಹತ್ತಿರ) ಕೆಕೆಆರ್ ಡಿಬಿಯ 2023-24ನೇ ಸಾಲಿನಲ್ಲಿ ಯೋಜನೆಯಡಿ ಅಂದಾಜು ಮೊತ್ತ (ತಲಾ ಒಂದಕ್ಕೆ) 13.95 ಲಕ್ಷಗಳಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟಿಸಿ ಮಾತನಾಡಿದರು.
ಬೇಸಿಗೆಯಲ್ಲಿ ಜನರಿಗೆ ತೊಂದರೆ
ಆಬಾರದೆಂಬ ಉದ್ದೇಶ ರಾಜ್ಯ ಸರ್ಕಾರವು ವಿವಿಧ ಯೋಜನೆಯಡಿ ಎಲ್ಲಡೆ ಆರ್ ಒ ಪ್ಲಾಂಟ್ ಗಳನ್ನು ಕೂಡಿಸಿಲು ಉದ್ದೇಶಿಸಿದೆ ಎಂದರು.
ಇವುಗಳ ನಿರ್ವಹಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಶುದ್ಧ ನೀರು ಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಹೇಳಿದರು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ್, ಉಪಾಧ್ಯಕ್ಷರಾದ ರುಕಿಯಾ ಬೇಗಂ, ವಾರ್ಡ್ ನ ಸದಸ್ಯರಾದ ಸ್ವಾಮೀದೇದ ದಾಸನ, ಗಣೇಶ ದುಪ್ಪಲ್ಲಿ, ಕೆ.ಕೆ.ಆರ್.ಡಿ.ಬಿ ಸಹಾಯಕ ಕಾರ್ಯಪಾಲಕ ಆಭಿಯಂತರಾದ ಶಿವರಾಜ ಹುಡೆದ್ ಸೇರಿದಂತೆ ಮತ್ತಿತರರು ಇದ್ದರು.
