ಯಾದಗಿರಿ! ಕಾಂಗ್ರೆಸ್ ನಿಂದ ಮಾದಿಗ ಸಮುದಾಯ ಕುಂಠಿತಗೊಳಿಸುವ ಷಡ್ಯಂತ್ರ; ಬಿ.ಆರ್ ಬಾಸ್ಕರ್ ಪ್ರಸಾದ್

By admin

ಯಾದಗಿರಿ : ನಮ್ಮ ಸಮುದಾಯದಿಂದ ಸತತವಾಗಿ 40 ವರ್ಷಗಳ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವ ಭರವಸೆ ನೀಡಿ ಇದೀಗ ರಾಜ್ಯದಲ್ಲಿ ಜಾತಿ ಜನಗಣತಿಗೆ ಅದೇಶಿಸಿದೆ. ಆದರೆ, ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳು, ಬಡ್ತಿ ಮೀಸಲಾತಿ ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಲು ಮುಂದಾಗಿದ್ದು ಇದು ಮಾದಿಗ ಸಮುದಾಯವನ್ನು ಈ ಕಾಂಗ್ರೆಸ್ ಸರಕಾರ ಕುಂಠಿತಗೊಳಿಸುವ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಒಳ ಮೀಸಲಾತಿ ಕ್ರಾಂತಿಕಾರಿ ರಥ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾದಿಗರ ಒಳ ಮೀಸಲಾತಿ ಜಾರಿ ಆಗುವವರೆಗೂ ಹೊಸ ನೇಮಕಾತಿ, ಬ್ಯಾಕ್ ಲಾಗ್ ಮತ್ತು ಬಡ್ತಿ ಮೀಸಲಾತಿ ಜಾರಿ ಮಾಡುವಂತ್ತಿಲ್ಲ ಒಂದು ವೇಳೆ ಮಾಡಿದಲ್ಲಿ ರಾಜ್ಯದ ಮಾದಿಗ ಸಮುದಾಯ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.

ನಾಳೆ ಸಿಎಂ ಸಿದ್ದರಾಮಯ್ಯ ನವರು ರಾಯಚೂರಿಗೆ ಜಿಲ್ಲೆಗೆ ಆಗಮಿಸಿಲಿದ್ದಾರೆ ನಮ್ಮ ಒಳ ಮೀಸಲಾತಿ ಹೋರಾಟ ಸಮಿತಿ ಯಿಂದ ಮುತ್ತಿಗೆ ಹಾಕುತ್ತೇವೆ ಜೊತೆಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಆ ಒಂದು ಮುತ್ತಿಗೆಯಲ್ಲಿ ಮುತ್ತಿಗೆ ಸಂದರ್ಭದಲ್ಲಿ ಅನಾಹುತವಾದರೆ ಇದಕ್ಕೆ ಪೊಲೀಸ್ ಇಲಾಖೆಗೆ ಕಾರಣ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಿಜಯಕುಮಾರ್ ಶಿರಗೋಳ, ಪರಶುರಾಮ ಖಾಮನಳ್ಳಿ, ಪುಟ್ಟಣ್ಣ ಮೈಸೂರ, ನಾಗರಾಜ ಜೆಸಿ, ಜಗದೇಶ ದಾಸನಕೇರಿ, ಸೇರಿದಂತೆ ಅನೇಕರು ಇದ್ದರು.