
ಕಠಿಣ ಶ್ರಮ ಹಾಗೂ ನಿರಂತರ ಕಲಿಕೆ ಮುಂದಿನ ಜೀವನಕ್ಕೆ ದಾರಿ : ಲಲಿತಾ ಅನಪುರ
ಯಾದಗಿರಿ : ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಎಸ್ಎಲ್ ಸಿ ಒಂದು ಮಹತ್ವದ ಘಟ್ಟ. ಇಲ್ಲಿ ನೀವು ಸರಿಯಾಗಿ ಅಭ್ಯಾಸ ಮಾಡಿದರೇ ಮುಂದಿನ ವ್ಯಾಸಂಗ ಮತ್ತು ಜೀವನ ಸರಿದಾರಿಯಲ್ಲಿ ಸಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.
ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನಗರಸಭೆಯಿಂದ ಮಂಗಳವಾರ ಇಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ನಗದು ಐದು ಸಾವಿರ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಮಾತನಾಡಿದರು.
ಇದು ಒಂದು ಸಣ್ಣ ಕಾಣಿಕೆ, ನಿಮ್ಮ ಪ್ರಯತ್ನಕ್ಕೆ ನಾವು ಕೊಡುವ ಗೌರವದ ಸಂಕೇತವೆಂದ ಅವರು,
ಗಿರಿಜಿಲ್ಲೆ ಕೊನೆ ಸ್ಥಾನವೆಂಬ ಹಣೆಪಟ್ಟಿ ಕಳಚಿಕೊಂಡಿದ್ದು ಸಂತಸ ತಂದಿದೆ, ಇದಕ್ಕೆ ಕಾರಣರಾದ ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಸ್ತ ಶಿಕ್ಷಕ ವೃಂದಕ್ಕೆ ಅಭಿನಂದಿನೆಗಳು. ಹೀಗೆ ಇನ್ನೂ ಹೆಚ್ಚಿನ ಪ್ರಯತ್ನ ಸಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಪಂ ಸಿಇಒ ಲವೀಶ್ ಓರ್ಡಿಯಾ, ವಿದ್ಯಾರ್ಥಿಗಳ ಉನ್ನತ ಭವಿಷ್ಯದ ಮೊದಲ ಹೆಜ್ಜೆ ಇದು. ಮುಂದೆ ಅನೇಕ ಸವಾಲುಗಳು ಮತ್ತು ಕಠಿಣತೆಯಿಂದ ಶಿಕ್ಷಣ ಪೂರೈಸಿ ಉನ್ನತ ಸ್ಥಾನ ಪಡೆಯರಿ ಎಂದು ಹೇಳಿದರು.
ನಗರಸಭೆಯಿಂದ ಪ್ರತಿಭಾವಂತರಿಗೆ ಐದು ಸಾವಿರ ಪ್ರೋತ್ಸಾಹ ಧನ ನೀಡಿದು ಉತ್ತಮ ಕೆಲಸವೆಂದರು.
ಈ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಮುಂದಾಗಿರುವ ಅಧ್ಯಕ್ಷರು ಸೇರಿದಂತೆಯೇ ನಗರಸಭೆ ಎಲ್ಲರಿಗೂ ಕೃತಜ್ಞತೆಗಳು ಸಲ್ಲಿಸಿದರು.
ಡಿಡಿಪಿಐ ಸಿ.ಎಸ್.ಮುದೋಳ್ ಮಾತನಾಡಿ, ಜಿಲ್ಲಾಡಳಿತ, ನಗರಸಭೆ ಮತ್ತು ವಿವಿಧ ಇಲಾಖೆಗಳ ಸಹಕಾರದಿಂದ ಫಲಿತಾಂಶ ಹೆಚ್ಚಳಕ್ಕೆ ಮಾಡಿದ ವಿವಿಧ ಕಾರ್ಯತಂತ್ರಗಳು ಸ್ವಲ್ಪ ಮಟ್ಟಿಗೆ ಫಲ ನೀಡಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ರೂಕಿಯಾಬೇಗಂ, ಪೌರಾಯುಕ್ತ ಉಮೇಶ ಚವ್ಹಾಣ, ಇಂಜಿನಿಯರ್ ರಜನಿಕಾಂತ ಶೃಂಗೇರಿ, ನಗರಸಭೆ ಸದಸ್ಯರು ಸಿಬ್ಬಂದಿ ಸೇರಿದಂತೆಯೇ ಇತರಿದ್ದರು.
