
ಯಾದಗಿರಿ : ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪೆಹೆಲ್ಗಾಂ ಭೀಕರ ದುರ್ಘಟನೆಯ ದೇಶದ ಅಮಾಯಕ26 ಜನರ ಸಾವಿಗೆ ಕಾರಣರಾದ ಪಾಕಿಸ್ತಾನದ ಉಗ್ರಗಾಮಿಗಳ ಸದೆಬಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೇನೆ ಕಾರ್ಯ ಜಗತ್ತಿಗೆ ಮಾದರಿಯಾಗಿದೆ. ಇಂತಹ ಉಗ್ರ ನಿಗ್ರಹ
ತಕ್ಕ ಉತ್ತರ ನೀಡುವ ಪರಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಸೇನೆ ಮೋದಿಜಿ ಅವರಿಗೆ ದೇಶ ಹೆಮ್ಮೆ ಪಡುತ್ತಿದ್ದ ಎಂದು
ಜಿಲ್ಲಾ ಬಿಜೆಪಿ ವಕ್ತಾರರಾದ ಹಣಮಂತ್ ಇಟಗಿ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಗತ್ತಿಗೆ ಕಂಟಕ ಪ್ರಾಯವಾಗಿರುವ ಉಗ್ರರಿಗೆ ಇಸ್ರೇಲ್ ಮಾದರಿಯ ಹೊಡೆತ ನೀಡುವ
ಮೂಲಕ ಅವರ ಬುಡ ಸಮೇತ ಕಿತ್ತು ಹಾಕಲು ಶ್ರಮಿಸುತ್ತಿದ್ದಾರೆ
ಮೋದಿಜಿ ಭಾರತದ ಯೋಧರ ಜೊತೆ ನಿಲ್ಲುವ ಸಂಕಲ್ಪವನ್ನು ಭಾರತದ ಪ್ರತಿಯೊಬ್ಬ ನಾಗರಿಕರು ಮಾಡಬೇಕು ಧೈರ್ಯವನ್ನು ಸ್ಥೈರ್ಯವನ್ನು ನೀಡಬೇಕು ಎಂದು ಮನವಿ ಮಾಡಿದರು.
ಮೋದಿಜಿ ಜೊತೆ ಪ್ರಪಂಚದ ಎಲ್ಲಾ ದೇಶಗಳು ಶಕ್ತಿ ತುಂಬಲಿ ಒಬ್ಬರ ವಿರುದ್ಧ ಸಾರಿರುವ ಹೋರಾಟಕ್ಕೆ ಮೋದಿಜಿ ಅವರಿಗೆ ದೇವರು ಆಶೀರ್ವಾದ ಜನರ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ ಪಾಕಿಸ್ತಾನದ ಉಗ್ರರು ಬೇರೆ ದೇಶದ ಉಗ್ರರು ಭಾರತ ದೇಶದ ಕಡೆಗೆ ತಿರುಗಿ ನೋಡದಂತೆ ಉಗ್ರರ ನಿರ್ನಾಮ ಮಾಡಲು ಪ್ರಧಾನಿ ಮೋದಿಯವರು ಸಂಕಲ್ಪ ಮಾಡಿದ್ದಾರೆ ಉಗ್ರರ ಕಡಿವಾಣ ಹಾಕಬೇಕು ಅವುಗಳಿಗೆ ಆರ್ಥಿಕ ಸಹಾಯ ಮಾಡುವ ದೇಶಗಳಿಗೆ ದಿಗ್ಬಂದನ ಹಾಕಬೇಕು ಎಂದು ಆಗ್ರಹಿಸಿದ ಅವರು, ಪಾಕಿಸ್ತಾನದ ನೆಲದಲ್ಲಿ ಉಗ್ರರ ವಿರುದ್ಧ ಇಂದು ನಡೆದ ಯುದ್ಧದಲ್ಲಿ ಭಾರತದ ಯೋಧರಿಂದ ಉಗ್ರರಿಗೆ ತಕ್ಕ ಶಿಕ್ಷೆ ಆಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
