ಉಗ್ರರರನ್ನು ಸಾಕುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ : ಮುದ್ನಾಳ್ ಸಂತಸ

By admin

 

ಯಾದಗಿರಿ : ಕಳೆದ ಏ.22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ 26 ಜನರು ಸಾವನ್ನಪ್ಪಿದ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹಾಗೂ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲು ಮುಂದಾಗಿ ಕೈಗೊಳ್ಳುತ್ತಿರುವ ಕ್ರಮವನ್ನು ಬಿಜೆಪಿ ಯುವ‌ ಮುಖಂಡ ಮಹೇಶ ರಡ್ಡಿ‌ ಮುದ್ನಾಳ್ ಸ್ವಾಗತಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಘಟನೆ ನಡೆದ ಕ್ಷಣದಿಂದ ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ ಶಾ, ರಕ್ಷಣಾ ಸಚಿವ ರಾಜನಾಥಸಿಂಗ್ ಸೇರಿದಂತೆಯೇ ಇಡಿ ಸರ್ಕಾರ ಮತ್ತು ಉನ್ನತ ಅಧಿಕಾರಿಗಳ ತಂಡ ವಿವಿಧ ತಂತ್ರಗಳನ್ನು ರೂಪಿಸುವುದಕ್ಕೆ ಸತತ ಸಭೆಗಳನ್ನು ಮಾಡಿ ಈಗ ಕಾರ್ಯಾಚರಣೆಗೆ ಮುಂದಾಗಿದ್ದು ಸಮರ್ಥ ಆಡಳಿತದ ಸಂಕೇತವಾಗಿದೆ ಎಂದಿದ್ದಾರೆ.
ದೇಶದ ಮೇಲೆ ಹೀಗೆ ದಾಳಿ ಮಾಡುವವರು ಯಾರೇ ಇರಲಿ, ಅವರನ್ನು ಹುಡುಕಿ ಕೊಲ್ಲಬೇಕು ಮತ್ತು ಇವರಿಗೆ ಸಹಕಾರ ನೀಡುವ ದೇಶಕ್ಕೂ ತಕ್ಕ ಪಾಠ ಕಲಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸರಿಯಾದ ಹೆಜ್ಜೆಯೇ ಇಟ್ಟಿದೆ. ಭಯೋತ್ಪಾದನೆಯ ಮೂಲ ಬೇರನ್ನೆ ಕಿತ್ತಿಹಾಕಬೇಕೆಂದು ಅವರು ಮನವಿ ಮಾಡಿದ್ದಾರೆ.