“LOCAL EXPRESS : “ಯಾದಗಿರಿ| ಒಳಚರಂಡಿ ಕಾಮಗಾರಿ ಯೋಜನೆ :  ಅನುಮೋದನೆಗಾಗಿ ಸಿಎಂಗೆ ಶಾಸಕ ಆರ್‌ವಿಎನ್ ಮನವಿ” 

By admin

 “ಯಾದಗಿರಿ| ಒಳಚರಂಡಿ ಕಾಮಗಾರಿ ಯೋಜನೆ :  ಅನುಮೋದನೆಗಾಗಿ ಸಿಎಂಗೆ ಶಾಸಕ ಆರ್‌ವಿಎನ್ ಮನವಿ” 

ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ : 

ಸುರಪುರ : ನಗರದ ಎರಡನೇ ಹಂತದ ಒಳ ಚರಂಡಿ ಯೋಜನೆ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಈ ಸಂಬಂಧ  ಸಿಎಂ ಅವರನ್ನು ಭೇಟಿಯಾದ ಅವರು ಸುರಪುರ ನಗರದ ಎರಡನೇ ಹಂತದ ಒಳಚರಂಡಿ ಕಾಮಗಾರಿ ಯೋಜನೆಗೆ ರೂ. 241.70 ಕೋಟಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಕೋರಿದರು.

ತಕ್ಷಣ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆಯ ಭರವಸೆ ನೀಡಿದರು. ಅದೇ ರೀತಿ ಅಲ್ಲಿಯೇ ಇದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಕೂಡ ಅನುಮೋದನೆ ನೀಡುವುದಾಗಿ ಶಾಸಕ ಆರ್‌ವಿಎನ್‌ ಅವರಿಗೆ ತಿಳಿಸಿದರು.