“ಗಂಗಾವತಿ | ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆಗೆ ತೆರೆ”
Contents
“ಗಂಗಾವತಿ | ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆಗೆ ತೆರೆ”• ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ : ಗಂಗಾವತಿ : ನಗರದ ಜಯನಗರ ಹತ್ತಿರದ ವಾಲ್ಮೀಕಿ ನಗರ ಗುಡ್ಡದ ಏರಿಯಾದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಭಕ್ತಿಯಿಂದ ಅಲಂಕಾರಗೊಂಡ ಗಣಪತಿ, ಡಿಜೆ ನಾದಸ್ವರದ ಸೊಗಡಿನಿಂದ ಸಡಗರ ಸಂಭ್ರಮ ಮನೆ ಮಾಡಿತ್ತುಮಹಿಳೆಯರು, ಮಕ್ಕಳು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರೆ, ಯುವಕರು ಡಿಜೆ ನೃತ್ಯದ ತಾಳದಲ್ಲಿ ಕಳೆ ತಂದುಕೊಂಡರು.ಭಕ್ತರು “ಗಣಪತಿ ಬಪ್ಪಾ ಮೋರಿಯಾ” ಘೋಷಣೆಗಳೊಂದಿಗೆ ಮೆರವಣಿಗೆಗೆ ಚೈತನ್ಯ ತುಂಬಿದರು.ಅಂತಿಮವಾಗಿ ಶಾಂತಿಯುತವಾಗಿ ಗಣೇಶ ವಿಸರ್ಜನಾ ಕಾರ್ಯಕ್ರಮ ನೆರವೇರಿದ್ದು, ಸ್ಥಳೀಯರು ಸಮನ್ವಯದಿಂದ ಭಾಗವಹಿಸಿದ ದೃಶ್ಯ ಎಲ್ಲರ ಮನ ಸೆಳೆಯಿತು.

