
ಶಿಸ್ತು ಅಕಲ್ಕ ಸಂಹಿತೆ ಬಹುಮುಖ್ಯIಸ್ನೇಹ-ಧರ್ಮ ಸಮಯ-ಪಾಲನೆಗೆ, IIಸಾರ್ಥಸುಖದಲಿ ಮಗ್ನನಾದವನಿಗೆ ಕಾಣದು, Iಸ್ನೇಹ-ಧರ್ಮ ಪಾಲನೆ ಹೊಣೆ, ಬುದ್ಧಿಮಂಕಾಗುವದು, II
ಸೀತೆ-ಹುಡುಕುವ ಕಾರ್ಯ ವಿಳಂಬವಾಗುತಿದೆ,I
ಓ ಸುಗ್ರೀವಾ, ಸ್ನೇಹ-ಕರ್ತವ್ಯ ಮುಂದೂಡಬೇಡಾ, II
ನಿನ್ನ ನಂಬಿದ ರಾಮನಿಗೆ ಬೇಸರವಾಗದಿರಲಿ,ಬಹುಬೇಗ ಪೂರ್ಣವಾಗಲಿI
ಅವನ ಕಾರ್ಯ,ನಿನ್ನ ವಚನ, II
ಸಬಲ ವಾನರ ವೀರರನು ಕರೆI
ವಹಿಸು ಸೀತೆ-ಅರಸುವ ಹೊಣೆ ಅವರಿಗೆ, II
ಪತ್ನಿ ವ ರಾಜ್ಯವನು ಪಡೆಯಲು ಮಾಡಿದ ಸಹಾಯI
ಸ್ಮರಿಸಿಕೋ,ಮಾಡು ರಾಮನಿಗೆ ಸಹಾಯ, II
ಓ ಸುಗ್ರೀವಾ, ತಡವೇಕೆ, ಆಜ್ಞೆಮಾಡು ಆಕಾಶ ಭೂಮಿI
ಪಾತಾಳ ಹುಡುಕಿ ತರುವೆವು ಸೀತೆಯನು”;II
ಕೇಳಿ ಹನುಮಾನನ ಕೋರಿಕೆ ಮಾತು, ವಾನರ ಸೈನ್ಯI
ಸೇರಿಸಲು ನಿಲನಿಗೆ ಹೇಳಿದ ಸುಗ್ರೀವ, II
“ ಓ ನಿಲನೇ, ಸಕಲ ತಂತ್ರಬಲ್ಲ ವಾನರI
ವೀರರನು ಸೇರಿಸು, ನಿನ್ನ ನೇತೃತ್ವದ, II
ಅಂಗದನ ಜೊತೆ ಸೇರಿ, ಜಾಂಬವಂತ,ಹಿರಿಯI
ವಾನರರ ಭೇಟಿಯಾಗಿ ಮಾರ್ಗದರ್ಶನ ಪಡೆ”,II
ವಾನರ ಸೈನಾಧಿಪತಿ ನಿಲನಿಗೆ ಆಜ್ಞಾಪಸಿI
ಅಂತಪುರ ಹೊಕ್ಕನು ಸುಗ್ರೀವ. II
ಹನುಮಾನನು ಸುಗ್ರೀವನಿಗೆ ಅವನ ಜವಾಬ್ದಾರಿ ಬಗ್ಗೆ ಎಚ್ಚರಿಸುವ ಪ್ರಸಂಗಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿ ವಿವರಿಸಿದ ವಿಶೇಷತೆಗಳು (1) ಶಿಸ್ತು ಸಂಹಿತೆ ಪಾಲನೆ ರಾಜನ ಧರ್ಮ— ರಾಜನಿಗೆ ತನ್ನ ರಾಜ್ಯ ಕೋಶ, ಸೈನ್ಯ, ಸ್ನೇಹ ಮತ್ತು ಸಾರ್ವಭೌಮತೆಗಳಿಗೆ ಮಹತ್ವವ ತಿಳಿದಿರಬೇಕು ಹಾಗು ಅವನಲ್ಲಿ ಸ್ನೇಹ-ಧರ್ಮ, ಸಮಯ-ಪಾಲನೆಗೆ ಮತ್ತು ವಚನ ಪಾಲಿಸು ಬಹುಮುಖ್ಯ ಗುಣಗಳು ಇರಬೇಕು; ತನ್ನ ಸ್ವಾರ್ಥ ಭೋಗ ಸುಖದಲ್ಲಿಯೇ ಕಾಲಕಳೆಯುವವ ರಾಜನಾಗಲು/ದೇಶ ಆಳಲು ಅಯೋಗ್ಯ; ಹೀಗೆ ಆದಿಕವಿ ವಾಲ್ಮೀಕಿ ಪ್ರಕೃತಿ ಮತ್ತು ಜೀವಿಗಳ ಸಂಬಂಧ ವಿವರಿಸುವ ಜೊತೆ ರಾಜನ್ನು ಶಿಸ್ತು ಸಂಹಿತೆ ಪಾಲನೆ ಮುಖ್ಯವೆಂಬ ಕಠೋರ ಸತ್ಯಗಳನ್ನು ವರ್ಣಿಸಿರುವರು. (2) ಸುಗ್ರೀವನಿಗೆ ಹನುಮಂತನಿಂದ ಎಚ್ಚರಿಕೆ: “ನಿನ್ನ ಮಂಕುಬುದ್ದಿಯಿಂದಾಗಿ ಸ್ನೇಹ-ಧರ್ಮ ಪಾಲನೆ ಹೊಣೆ ಅರ್ಥಾತ್ ಸೀತೆ-ಹುಡುಕುವ ಕಾರ್ಯ ವಿಳಂಬವಾಗುತಿದೆ; ಸ್ನೇಹ-ಕರ್ತವ್ಯ ಮುಂದೂಡಬೇಡಾ, ನಿನ್ನ ನಂಬಿದ ರಾಮನಿಗೆ ಬೇಸರವಾಗದಿರಲಿ,ನಿನ್ನ ವಚನ ಪಾಲಿಸು ಬಹುಬೇಗ ಸೀತೆಯನ್ನು ಹುಡುಕುವ ಕಾರ್ಯ ಪೂರ್ಣವಾಗಲಿ; ಸಬಲ ವಾನರ ವೀರರನು ಕರೆದು ಅವರಿಗೆ ಸೀತೆ-ಅರಸುವ ಹೊಣೆಯನ್ನು ವಹಿಸು, ನಿನ್ನ ಪತ್ನಿ ಮತ್ತು ರಾಜ್ಯವನು ಹಿಂಪಡೆಯಲು ರಾಮನು ಮಾಡಿದ ಸಹಾಯ ಸ್ಮರಿಸಿಕೋ ಹಾಗು ರಾಮನಿಗೆ ಸಹಾಯ ಮಾಡು; , ಇನ್ನು ತಡವೇಕೆ, ನೀನು ನಮಗೆ ಆಜ್ಞೆಮಾಡು, ನಾವು ಆಕಾಶ ಭೂಮಿ ಪಾತಾಳಗಳನ್ನು ಹುಡುಕಿ ಸೀತೆಯನು ತರುವೆವು” ಎಂದು ಎಚ್ಚರಿಸುತ್ತ ಹನುಮಾನನು ವಚನ ಪಾಲನೆ ಕರ್ತವ್ಯ ಸ್ಮರಿಸುತ್ತ ಆಜ್ಞೆ ಕೋರಿಕೆ ಮಾತಗಳನ್ನು ಸುಗ್ರೀವನಿಗೆ ಆಡಿವನು, ಹೀಗೆ ಜವಾಬ್ದಾರಿಯನ್ನು ನೆನಪಿಸಿ ಕೊಡುವ ಮಂತ್ರಿ, ಸ್ನೇಹಿರಿದ್ದರೆ ರಾಜ್ಯ ಮತ್ತು ವ್ಯಕ್ತಿಗೆ ಹಿತಕರ ಎಂಬ ಸತ್ಯವನ್ನು ಆದಿಕವಿ ವಾಲ್ಮೀಕಿಯು ತಿಳಿಸಿರುವರು, (3) ಸುಗ್ರೀವನ ಆಜ್ಞೆ: ಸುಗ್ರೀವನು ಹನುಮಾನನ ಕೋರಿಕೆ ಮಾತುಗಳನ್ನು ಮನವರಿಕೆ ಮಾಡಿಕೊಂಡು ವಾನರ ನಾಯಕ ‘ನಿಲ’ನಿಗೆ ಅವನ ನೇತೃತ್ವದಲ್ಲಿ ಸಕಲ ತಂತ್ರಬಲ್ಲ ವಾನರ ವೀರರನು ಸೇರಿಸಲು ಹಾಗು ಅಂಗದನ ಜೊತೆ ಸೇರಿ ಜಾಂಬವಂತ ಮತ್ತು ಹಿರಿಯ ವಾನರರನ್ನು ಭೇಟಿಯಾಗಿ ಅವರ ಮಾರ್ಗದರ್ಶನ ಪಡೆಯಲು ವಾನರ ಸೈನಾಧಿಪತಿ ನಿಲನಿಗೆ ಸುಗ್ರೀವನು ಆಜ್ಞಾಪಿಸುವನು, ಹೀಗೆ ಸೀತೆಯನ್ನು ಹುಡುಕುವ ಕಾರ್ಯ ಆರಂಭವಾದದನ್ನು ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ವಿವರಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
