
ಚಿತ್ತಾಪುರ: ಚಿತ್ತಾಪುರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ಹುಟ್ಟುಹಬ್ಬದ ಅಂಗವಾಗಿ, ನಮ್ಮ *ಅಮೋಘ ಸಂವಿಧಾನ ಪೀಠಿಕೆ* ಯನ್ನು ಓದುವ ಮೂಲಕ ಶ್ರೀ ಪ್ರಿಯಾಂಕ್ ಖರ್ಗೆಜೀ ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೈತ್ರಿ ಫೌಂಡೇಶನ್ ಸಂಸ್ಥೆಯ ವತಿಯಿಂದ ಮೈತ್ರಿ ಫೌಂಡೇಶನ್ ಸಂಸ್ಥಾಪಕಿ ಮತ್ತು ಈ ಕಾರ್ಯಕ್ರಮದ ಆಯೋಜಕರು ಆದ ಶ್ರೀಮತಿ ರೇಣುಕಾ ಸಿಂಗೆ ಅವರು ವಿದ್ಯಾರ್ಥಿಗಳಿಗೆ ‘ಚಿತ್ತಾಪುರದ ಅಭಿವೃದ್ಧಿಯ’ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳನ್ನು ಆಯ್ಕೆ ಮಾಡಿ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಮತ್ತು ಪೌರ ಕಾರ್ಮಿಕ ಮಹಿಳೆಯರಿಗೆ ಉಡುಗೊರೆ ನೀಡುವ ಮೂಲಕ ಅರ್ಥಪೂಣವಾಗಿ ಆಚರಿಸಿದರು.

ಈ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಜಗದೇವ ಗುತ್ತಿಗೆದಾರ, ಬಸವರಾಜ್ ಚಿನಮಳ್ಳಿ, ರಾಜಗೋಪಾಲ್ ರೆಡ್ಡಿ, ದೆವಿಂದ್ರಪ್ಪಾ ಮರತೂರ, ಭೀಮರಾವ್ ಟಿಟಿ, ಮಲ್ಲಿಕಾರ್ಜುನ ಪೂಜಾರಿ, ಅನೇಕರು ಉಪಸ್ಥಿತರಿದ್ದರು.
