
ಮಹೇಶ ಕೇವಂಟಗಿ, ಯುವ ಬರಹಗಾರರು
Review
ಸಿನಿಮಾದ ಹೆಸರು : ಗಂಟುಮೂಟೆ
ನಿರ್ದೇಶಕರು : ರೂಪಾ ರಾವ
ನಾನು ಸುಮಾರು ಮೂರು ವರ್ಷಗಳ ಹಿಂದೆ ಒಂದು ಸಾರಿ ಈ ಗಂಟುಮೂಟೆ ಸಿನಿಮಾ ನಾಲ್ಕೈದು ಜನರ ಜೊತೆಗೂಡಿ ನೋಡಿದ್ದೆ. ಈ ಸಿನಿಮಾವನ್ನು ಆವಾಗ ನಾನು BA first semester ಇದ್ದೆ ಅನಿಸುತ್ತೆ. ಆವಾಗ ನಾನು ಲ್ಯಾಪ್‌ಟಾಪ್ ನಲ್ಲಿ ನೋಡಿದ್ದೆ.
ಆವಾಗ ನಾನು ನೋಡಿದ ದೃಷ್ಟಿಕೋನ ಬೇರೆ ಆಗಿತ್ತು. ಒಂದು ಕುಟುಂಬದಲ್ಲಿಯ ಪರಿಸ್ಥಿತಿಗಳು, ಸಮಾಜದ ಕಟ್ಟುಪಾಡುಗಳು ಸಂಪ್ರದಾಯದ, ಸಂಸ್ಕೃತಿ, ಎಲ್ಲದರ ಮಧ್ಯ ನಾನು ಸಮಾಜದ ಜೊತು ಬೀಳುವ ಜೋಳಿಗೆ ಆಗುತ್ತಿದ್ದೆ ಏನೋ? ಗೋತ್ತಿಲ್ಲ.
ಆದರೆ, ಆವಾಗ ನೋಡುತ್ತಿದ್ದಾಗ ನನಗೆ high schoolನಲ್ಲಿ ಹುಡುಗಿಯರ ಮೇಲೆ ಆಗಿದ್ದು ಅದು crush, love, ಏನೋ ಅಂತ ಗೋತ್ತಾಗಿಲ್ಲ. ಆದರೆ ನನಗೆ ಹುಡುಗಿಯರು ಜಾಸ್ತಿ ಮಾತಡಿಸ್ತಾ ಇದ್ದರು. ಹಾಗೆ ನಾನು ಅವರ ಜೊತೆ ಜಾಸ್ತಿ ಇರತ್ತಿದ್ದೆ, ಶಾಲೆಯಲ್ಲಿ ನನ್ನ ಸ್ನೇಹಿತರು ನನ್ನ ನೋಡುವ ರೀತಿಯೇ ಬೇರೆಯಾಗಿತ್ತು.
ನಾನು ಹತ್ತನೇ ತರಗತಿಯಲ್ಲಿ ಇದ್ದಾಗ. ಒಂದು ಕಾರ್ಯಕ್ರಮ ನಡೆದಿತ್ತು. ಆ ಸಮಯದಲ್ಲಿ ಹೆಣ್ಣಿನ ಮೇಲೆನ ಅತ್ಯಾಚಾರ ವಿರೋಧವಾಗಿ ನನ್ನ ಗೆಳತಿ ಭಾಷಣ ಮಾಡುತ್ತಿದ್ದಳು. ಆಗ ನಾನು ವೇದಿಕೆಯ ಮುಂಭಾಗದಲ್ಲಿಯೇ ಕುಳಿತುಕೊಂಡು ಅವಳು ಭಾಷಣ ಮಾಡುತ್ತಿದ್ದ ವಾಕ್ಯಗಳಿಗೆ ನಾನು ಹುಂ.. ಹುಂ.. ಎಂದು ತಲೆ ಆಡಿಸುತ್ತಾ ಇದ್ದುದನ್ನು ನಮ್ಮ ಮುಖ್ಯಗುರುಗಳು ಗಮನಿಸಿದರು. ಆವಾಗ ಅವರು ಅಧ್ಯಕ್ಷೀಯ ಭಾಷಣ ಮಾಡುವ ಸಂದರ್ಭದಲ್ಲಿ ನನ್ನನ್ನು ವ್ಯಂಗ್ಯ ವಾಗಿ ಮಾತಾನಡಿದರು. ಆದರೆ, ಅಲ್ಲಿಯ ಮುಖ್ಯ ವಿಷಯವನ್ನು ನಗೆ ಪಾಟಿಲಿಕೆ ಮಾಡಿದರು. ಹಾಗಾಗಿ, ಸಮಾಜದಲ್ಲಿ ಹುಡುಗಿಯರ ಜೊತೆ ಹುಡುಗ ಇರುತ್ತಿದ್ದರೆ ಅವನನ್ನು ಈ ಸಮಾಜ ನೋಡುವ ದೃಷ್ಟಿಕೋನ ಯಾವರೀತಿ ಇರುತ್ತೆ. ಮತ್ತೆ ನನಗೆ ಬೇರೆಯ ಹೆಸರುಗಳಿಂದ ಕರೆಯುತ್ತದರು. ಆದರೆ, ನಾನು ತಲೆಕೆಡೆಸಿಕೊಳ್ಳದಿರಲು ಕಾರಣ ಆ ಹೆಣ್ಣಿನ ಭಾವನೆಗಳು ನನ್ನೊಳಗೆ ಇದ್ದವು ಎಂದು ಗೋತ್ತಾಗುತ್ತೆ.
ಈಗ ಮತ್ತೆ ಅದೇ ಸಿನಿಮಾ ನೋಡಿರೋ ಆಯಾಮ ಬೇರೆಯಾಗಿದೆ ನನ್ನದು. ಅದೇನು ಒಂದು ಖುಷಿ ಕೊಡಾತಾಯಿತ್ತು. ಸಿನಿಮಾ ನೋಡ ನೋಡಾತ್ತಾ ನಾನು ಆ ಸಿನಿಮಾದಲ್ಲಿ ಇದ್ದೆ ಎನ್ನುವುದರ ಮಟ್ಟಿಗೆ ಕುತೂಹಲಕಾರಿಯಾಗಿ ಈ ಕಥೆಯನ್ನು ಹೆಣೆದಿದ್ದಾರೆ ಅನಿಸಿತು. ಆ ಹೆಣ್ಣು ಮನಸ್ಸಿನ ಆಯ್ಕೆ, ಅವಳ ಆಸೆ, ಅವಳ ಇಷ್ಟಗಳು ಹೀಗೆ ಒಂದಾದ ಮೆಲೊಂದು ಹುಟ್ಟ ತೊಡಗುತ್ತವೆ.
ಆ ವಯಸ್ಸಿನಲ್ಲಿ ಮೂಡುವ ನಿದ್ದೆ, ಹಾಳು ಮಾಡಿಸುವ ನಗು, ಸಿನೆಮಾದಲ್ಲಿ ಹಿರೋ ಹಿರೊಯಿನ್ ಕಾಪಾಡುವ ದೃಶ್ಯಗಳನ್ನು ನಮ್ಮ ಮನಸ್ಸಿನ ಮೇಲೆ ಬಹಳಷ್ಟು ಪ್ರಭಾವ ಬೀರಿರುತ್ತವೆ.
ಮೀರಾ ಚಿಕ್ಕ ವಯಸ್ಸಿನಿಂದಾನೆ ಅವಳಿಗೆ ಸಿನಿಮಾ ನೋಡುವ ಹವ್ಯಾಸ ಇರುತ್ತೆ. ಹಾಗಗಿ ಸಿನೆಮಾ ಥಿಯೇಟರ್ ಗೆ ಹೋದಮೇಲೆ ಅವಳ ದೇಹದ ಮೇಲೆ ಆದ ಒಂದು ಹಿಂಸೆ, ಒಪ್ಪಿಗೆ ಇಲ್ಲದ ಮುಟ್ಟುವಿಕೆ ಅವಳ ಮನಸ್ಸಿನ ಮೇಲೆ ಒಂದು ಗಾಯ ಎಂದು ತೋರಿಸಿಕೊಡುತ್ತದೆ. ಈ ವ್ಯವಸ್ಥೆಯನ್ನು ಒಪ್ಪಿಕೊಂಡು ದಿನಾ ಸಾಗಿಸುತ್ತಿರುವ ಗಂಡು ಮನಸ್ಸುಗಳಿಗೆ ಏನನ್ನಬೇಕು? ಎಂದು ಪ್ರಶ್ನೇ ಮೂಡುತ್ತದೆ.
ಆದರೆ, ಮೀರಾಳು ತನಗೆ ತಾನೆ ಹಾಕಿಕೊಂಡ ಪ್ರಶ್ನೆಯೇ ಈ ಸಿನಿಮಾ ಮುಂದಾಕ್ಕೆ ಸಾಗಲು ಅನು ಮಾಡಿಕೊಡುತ್ತದೆ.
ಅವಳು ಪ್ರಶ್ನೆ ಹಾಕಿಕೊಂಡು ಸಮ್ಮನಾಗಲ್ಲಿಲ್ಲ. ಉತ್ತರದ ಹುಡಕಾಟ ಪ್ರಾರಂಭದಲ್ಲಿ ಮುನ್ನಡೆಯುತ್ತಾಳೆ.
“ನಾನು ಸಿನಿಮಾ ನೋಡೊಕೆ ಬಂದಿರೋದು ನಾನೆಕೆ ನನ್ನ mood ಕೆಡೆಸಿಕೊಳ್ಳಬೇಕು ಎಂದು.”
ಮತ್ತೆ ಥಿಯೇಟರ್ ಒಳಗೆ ಹೋಗುವುದು ಇದೆಯಲ್ಲ, ಈ ಸಾಂಪ್ರದಾಯಿಕ ವ್ಯವಸ್ಥೆ ಒಳಗೆ ಪ್ರವೇಶ ಮಾಡುತ್ತಿರುವುದು ಎಂದು ನನಗೆ ಭಾಸವಾಯಿತು.
ಈ ಸಿನಿಮಾದಲ್ಲಿ ಮೀರಾಳ ಒಂದೊಂದು ಪ್ರಶ್ನೆಗಳ ಉತ್ತರದ ಹುಡುಕಾಟ ಹೆಚ್ಚು ಹೆಚ್ಚು ಆಗುತ್ತಾ ಹೋತ್ತದೆ.
ಮತ್ತೆ ಅವಳಿಗೆ ಅನಿಸಿದನ್ನು ಮಾಡು ಛಲ ಅವಳಲ್ಲಿತ್ತು. ಸ್ನೇಹಿತರೊಂದಿಗೆ ಸಿಗರೇಟು ಎಳೆಯೊಕೆ ಹೋದಾಗ ಅವಳು ನನಗೂ ಕೊಡು ಎಂದಾಗ, ಮದು “ನೀನು ಒಳ್ಳೆಯ ಹುಡುಗಿರ ತರ ‘ಸಿನಿಮಾದಲ್ಲಿ ಹಿರೋಯಿನ’ ಕೈಯಲ್ಲಿ ಯಾಕೆ ಸಿಗರೇಟು ಎಂದು ಕೇಳೊದು ಬಿಟ್ಟು, ನನಗು ಒಂದು ಪಫು ಕೊಡು ಎಂದು ಕೇಳಿತ್ತಿದಿಯಾ” ಎಂದು ಕೇಳುತ್ತಾನೆ.
ಆಗ ಅವಳು ತನ್ನೊಳಗೆ ತಾನೆ ಕೋಳ್ಳುತ್ತಾಳೆ, ಅವನು ಕೈಯಲ್ಲಿ ಸಿಗರೇಟ ಹಿಡಿದಾಗ ನಾನೆಕೆ ಅವ ಒಳ್ಳೆವ, ಕೆಟ್ಟವ ಜಡ್ಜ ಮಾಡಕ್ಕಾಗಲ್ಲಿಲ್ಲ? ಎಂದು.
ಈ ಪ್ರಶ್ನೆ ಇದೆಯಲ್ಲ ಇದು ಎಲ್ಲರೂ ಹಾಕೊಳ್ಳಬೇಕಾದ ಪ್ರಶ್ನೆ ಹೌದು. ಸಿಗರೇಟ ಸೇದೊರೆಲ್ಲ ಕೆಟ್ಟೊರು, ಸಿಗರೇಟ್ ಸೇದದೆ ಇರೋರೆಲ್ಲ ಕೆಟ್ಟವರು. ಈತರದ ಸಾಲುಗಳು ಹೇಳು ಸಿನಿಮಾಗಳು ಶಾಲೆಯ ಮಕ್ಕಳ ಮೇಲೆ ಎಷ್ಟೊಂದು ಪರಿಣಾಮಕಾರಿಯಾಗಿ ಪ್ರಭಾವ ಬೀರಿರುತ್ತವೆ. ಇಲ್ಲಿ ಸಿನಿಮಾಗಳು ಕೂಡಾ ಒಂದು ಲಿಂಗಕ್ಕೆ ಅನ್ಯಾಯ ಎಸಗುವ ಕಾರ್ಯಾ ಮಾಡುತ್ತವೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ವ್ಯವಸ್ಥೆ ಹಾಕಿ ಕೊಟ್ಟಿರುವ ತಳಪಾಯ ಎಂದು ಹೇಳಬಹುದು. ಮತ್ತೆ ಇನ್ನೊಬ್ಬರ ಮೇಲೆ ಪೈನಲ್ ಆಗಿ ನೀವು ಇರೋದು ಹೀಗೆ, ಇದೆ ಕೊನೆಯ ಮಾತು ಎಂದು ಹೇಳೊದು ತಪ್ಪು.
ಸಿನೆಮಾ ಈ ಸೂಕ್ಷ್ಮ ವಾಕ್ಯ ಹೇಳುವುದರೊಂದಿಗೆ ಸಂದೇಶ ಸಾರುತ್ತದೆ.
ಮತ್ತೆ ಇನ್ನೊಂದು ದೃಶ್ಯ ಬರುತ್ತೆ. ಆ ಹುಡುಗಿ ಸಿಕ್ಕಿಲ್ಲ ಎಂದ ಕಾರಣಕ್ಕೆ ಅವಳ ದೇಹವನ್ನು ಆಧಾರ ಇಟ್ಟಿಕೊಂಡು ಬೈಯುವುದು. ಈ ಪಿತೃಪ್ರಧಾನತೆಯ ವ್ಯವಸ್ಥೆಯಲ್ಲಿ ಮನೆ ಎಂಬ ಶಾಲೆಯಿಂದಾನೆ ಕಲಿಸಿಕೊಡುತ್ತಾರೆ.
ಗಂಡು ಏನಂದರು ಸಹಿಸಿಕೊಳ್ಳಬೇಕು ಎನ್ನುವ ಮನಸ್ಥಿತಿ ಬೆಳೆದಿರುತ್ತದೆ. ಹಾಗೆ ಹೆಣ್ಣು ಮಾನಸಿಕವಾಗಿ ಹಿಂಸೆಗೆ ಒಳಗಾಗಿಬಿಡುತ್ತಾಳೆ. ಆ ವಯಸ್ಸಿನಲ್ಲಿ ಅನ್ನುವ ಬದಲು ಈ ವ್ಯವಸ್ಥೆ ಎನ್ನುವುದು ಉತ್ತಮ. ಮದು ಮತ್ತು ಮೀರಾ ನಡುವೆ ನಡೆದ ಖಾಸಗಿ ವಿಷಯವನ್ನು ಅವಳ ಅನುಮತಿ ಇಲ್ಲದೆ, ಅವಳಿಗೆ ನಾನು ‘ಕಿಸ’ ಮಾಡಿರೊದು, ಅವಳ ದೈಹಿಕತೆಯನ್ನು ಸ್ನೇಹಿತರಿಗೆ ಹೇಳಿಕೊಂಡು ಮಜಾ ತಗೊಳ್ಳೋದು ಎಷ್ಟು ಸರಿ ಅನಿಸುತ್ತೆ? ಎಲ್ಲರಿಗೆ ತಮ್ಮ ಮೇಲೆ ತಾವೆ ಹಾಳಕೊಳಬೇಕದ ಪ್ರಶ್ನೆ. ನನಗೆ ಅರಿವಿಲ್ಲದೆ ಮಾಡಿದರೆ ಅದು ವ್ಯವಸ್ಥೆಯನ್ನು ದೂರಬೇಕಾಗಿತ್ತೆ. ನನಗೆ ಅರಿವಿದ್ದು ಅವಳನ್ನು ನಾನು ಬೇಕು ಬೇಕು ಅಂತ ಎಂದು ಪದ ಪದೇ ಅವಳ ಜೊತೆ ನಾನು ಹಾಗೆ ವರ್ತಿಸಿದೆ, ಅವಳ ದೈಹಿಕ ಅಂಗಗಳನ್ನು ಮುಟ್ಟಿದೆ ಎಂದು ಎಲ್ಲದರೆದರೂ ಹೇಳಿಕೊಳ್ಳವುದು ತಪ್ಪು.
ಒಬ್ಬ ಹುಡುಗ ಮೀರಾಳಿಗೆ ಪ್ರಪೋಸ್ ಮಾಡಿದಾಗ ಅವಳು ಒಲ್ಲೆಂದಾಗ.
ಹುಡುಗಿ ತನಗೆ ಸಿಗಲ್ಲಿ ಎಂದ ಮಾತ್ರಕ್ಕೆ ಅವಳನ್ನು ‘ಡಗಾರ’ ಎಂದು ಕರೆಯೋದು ಇದೆಯಲ್ಲ ಅದು ಎಷ್ಟು ಸರಿ?. ಮತ್ತೆ ಮೀರಾ ಈ ಡಗಾರ ಎಂದರೇನು? ಅಂತ ಮತ್ತೆ ಅದರ ಹುಡುಕಾಟ ಆರಂಭ ಮಾಡಿದಾಗ ಯಾರಿಗೆ ಕೇಳೊದು ಎಂದು ಪ್ರಶ್ನೆಯಾಗಿ ಬಿಡುತ್ತೆ.
ಆ ಪ್ರಶ್ನೆಯ ಗುಂಗಿನಲ್ಲಿ ಮನೆಗೆ ಬಂದಾಗ, ತನ್ನ ಮನೆಯೊಳಗೆ ತನ್ನ ತಾಯಿಯೊಂದಿಗೆ ಟಿ.ವಿ.ನೋಡುವಾಗ ಒಂದು ಹಾಡು ಬರುತ್ತೆ.
“ಡಂ..ಡಂ..ಡಗಾರ.. ಡಗಾರ” ಎಂದು ಆದರೆ, ಅಮ್ಮ ಅದನ್ನು ಬಂದ ಮಾಡುವುದರ ಜೊತೆಗೆ, ಒಂದು ಮಾತು ತನ್ನಷ್ಟಕ್ಕೆ ತಾನೆ ” ಏನ ಸಾಹಿತ್ಯ ಬರಿತಾರೋ, ಮಕ್ಕಳ ಮೇಲೆ ಪರಿಣಾಮ ಬೀರಲ್ಲವಾ? ಸಿನಿಮಾ ಜಗತ್ತೆ ಹಾಳಾಗಿದೆ.” ಎಂದಾಗ ಮೀರಾಳಿಗೆ ಮತ್ತೆ ಆ ಪದ ತಲೆಗೆ ಮೊಳೆ ಹೊಡೆದಾಗೆ ಅನಿಸುತ್ತಿರುತ್ತೆ. ಡಗಾರ ಎನ್ನುವ ಪದನ್ನು ತನ್ನ ಮನಸ್ಸಿನಲ್ಲಿ ಯೋಚನೆ ಮಾಡುತ್ತ ಮಾರ್ಕೆಟಗೆ ಹೋದಾಗ ಅವಳಿಗೆ ಗೋತ್ತಾಗುತ್ತೆ. ಆ ಡಗಾರ ಎನ್ನುವ ಪದದ ಅರ್ಥ. ಗೋತ್ತಾದ ನಂತರ ಎಷ್ಟು ಸೂಕ್ಷ್ಮ ವಾಗಿ ಹೇಳುತ್ತಾಳೆ. “ಅದು ಒಂದು ರೀತಿಯ ವೃತ್ತಿ ” ಎಂದು ತಮ್ಮ ದೇಹವನ್ನು ಬಳಸಿಕೊಂಡು ತಮ್ಮ ಹಸುವನ್ನು ನೀಗಿಸುವ ಕೊಳ್ಳುವ ದಾರಿ. ಮತ್ತೆ ಈ ವೃತ್ತಿ ಎಲ್ಲಾ ಲಿಂಗಗಳಲ್ಲಿಯ ಸ್ವಾಭಾವಿಕ ಕ್ರಿಯೆ. ಈ ಕ್ರಿಯೆಯನ್ನು ನಂಬಿಕೊಂಡು ಬದುಕುತ್ತಿರುವ ಲೈಂಗಿಕ ಅಲ್ಪಸಂಖ್ಯಾತರ ವೃತ್ತಿಗೆ ಅವಹೇಳನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಈ ಪಿತೃ ವ್ಯವಸ್ಥೆ ಅವರು ಒಪ್ಪಿಕೊಳುವ ಕೆಲಸಕ್ಕೆ ಘನತೆ ಬರುತ್ತೆ, ಅವುಗಳು ಮಾತ್ರ ಕೆಲಸನಾ? ಈ ಸಂಪ್ರದಾಯವಾದಿಗಳು ಒಂದು ಲಿಂಗಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಹೇಳಬಹುದು.
ಲೈಂಗಿಕ ಅಲ್ಪಸಂಖ್ಯಾತರ ಘನತೆಗೆ ಧಕ್ಕೆ ತರುವ ಕೆಲಸ ಇದಾಗಿದೆ ಎಂದು ಹೇಳುತ್ತೆನೆ.
ಮತ್ತೆ ಇನ್ನೊಂದು ದೃಶ್ಯ ಬರುತ್ತೆ ಮೀರಾ ಭಾಷಣ ಮಾಡುವ ಸಂದರ್ಭದಲ್ಲಿ ವ್ಯವಸ್ಥೆ ಒಂದು ಹೆಣ್ಣನ್ನು ವಸ್ತುವಾಗಿ ನೋಡು ಎಂದು, ಎಲ್ಲರಿಗೆ ಒಂದೊಂದು ಕನ್ನಡಕ ಕೊಟ್ಟಿದೆ ಎಂದು ತೋರಿಸಲಾಗುತ್ತದೆ. ಹೇಗೆಂದರೆ, ಮೀರಾನ್ನು ಅಧಾರ ವಾಗಿ ಇಟ್ಟುಕೊಂಡು ಅವಳ ಮೇಲೆ ಬೆಟ್ಟಿಂಗ ಮಾಡೊದಿದೆಲ್ಲಾ, ಈ ಮಹಾಭಾರತ ಕಾವ್ಯದಲ್ಲಿ ಪಾಂಡವರು ದ್ರೌಪದಿಯನ್ನು ಇಟ್ಟಾಗೆ ಎಂದು ನನಗೆ ಅನಿಸಿತ್ತು. ಹೆಣ್ಣು ಅನ್ನೊವುದು ವಸ್ತು ಅಲ್ಲಾ ಎಂದು ಅರಿವಾಗಬೇಕಿದೆ. ಇದನ್ನು ನಿರ್ದೇಶಕಿ ರೂಪ ರಾವ ಅವರ ಸೂಕ್ಷ್ಮ ಪ್ರಜ್ಞೆ ಎದ್ದು ಕಾಣುತ್ತದೆ.
ಕೊನೆಯದಾಗಿ, ಈ ಸಿನಿಮಾದಲ್ಲಿ ವ್ಯವಸ್ಥೆಯೂ ಕುಟುಂಬಗಳ ಮೇಲೆ ಹೇರಿರುವ ದೊಡ್ಡ ಹೇರಿಕೆಗಳು ಅಂದರೆ, ನೀನು first class, ನೀನು ಪಾಸ ಆಗಲೇ ಬೇಕು, ನೀನು ಪಾಸ ಆಗಿಲ್ಲ ಅಂದರೆ, ನಿನಗೆ ಈ ಭೂಮಿ ಮೇಲೆ ಇದ್ದರೂ ವೆಸ್ಟ, ಬದುಕಲು ಅನರ್ಹ ಎನ್ನುವ ದೊಡ್ಡ ಮಟ್ಟದ ಆಪಾದನೆಗಳು. ಮಕ್ಕಳ ಮೇಲೆ ಆಗುವ ಪರಿಣಾಮದ ಬಗ್ಗೆ ತನ್ನ ತಂದೆ-ತಾಯಿಗಳು ಸ್ವಲ್ಪ ಕೂಡಾ ಯೋಚನೆ ಮಾಡದ ಹಾಗೆ ಮಾಡಿದ್ದು, ಈ ವ್ಯವಸ್ಥೆ ಹಾಕಿಕೊಟ್ಟಿರುವ ಒಂದು ನಿಯಮ. ಮಕ್ಕಳಿಗೆ ಬಹಳಷ್ಟು ಗೊಂದಲ ಸೃಷ್ಟಿ ಮಾಡಿ ಅವರು ಕೊನೆಗೆ ಸಾಯುವ ಮಟ್ಟಿಗೆ ಹೋಗಿಬೀಡುತ್ತಾರೆ.
ಮೀರಾ first class student ಅನಿಸಿಕೊಡಿರೊಳು, ಮದು ಪೇಲಾಗಿರೊ student ಇವರ ಮಧ್ಯ ಹೆಚ್ಚು- ಕಡಿಮೆ ಅನ್ನೋ ಒಂದು ಧಾರ ಎಳೆಯುತ್ತೆ. ಮಧುಗೆ ಅದು ತನ್ನ ಮನದಲ್ಲಿ ಕಾಡುವ ಪ್ರಶ್ನೆ, ಮತ್ತೆ ಅವರ ಅಪ್ಪ ಫಲಿತಾಂಶ ಬರುವ ಮುಂಚೆನೆ ನನ್ನ ಮಗನಿಗೆ ಕಾಲೇಜಿನ ಪಾರಂ ತುಂಬಿಸುವ ಮುಂದಾಲೋಚನೆ, ಅವನ ತಂಗಿಗೆ ಹೇಗೆ ಮುಖ ತೋರಿಸೋದು? ಎಂದು ಇಂತಹ ಕಿಳಿರಿಮೆಗಳು ಎಲ್ಲಾ ಬೆಳೆದು, ತಾನು ಬದುಕಿನು ಉಪಯೋಗ ಇಲ್ಲ ಎಂದು ಸಾವಿಗೆ ಶರಣಾಗೋದು ವೈಯಕ್ತಿಕ ಸಾವಲ್ಲ, ಇದು social murder ಎಂದು ಕರೆಯಲೆಬೇಕು.
ಈ ಸಾವಿಗೆ ಈ ವ್ಯವಸ್ಥೆನೇ ಕಾರಣ.
ಮೀರಾ ಕೊನೆಯ ಮಾತು ಹೇಳತ್ತಾಳೆ.
“ಯಾರೋ ನನ್ನ ಖಾಸಗಿತಕ್ಕೆ ಕೈ ಹಾಕಿದರು ಅದು ನನ್ನ ಕೊಲ್ಲಿಲ್ಲ.
ಮತ್ತೆ ಯಾರೋ ನನ್ನ ಗೌರವಕ್ಕೆ ಕೈ ಹಾಕಿದರು ಇದು ಕೂಡಾ ನನ್ನ ಕೊಲ್ಲಲ್ಲಿ.
ಆದರೆ, ಇವನು ನನ್ನ ಆತ್ಮಕ್ಕೆ ಕೈ ಹಾಕಿ ರಾಡಿಕೊಚ್ಚೆ ಮಾಡಿ ಬಿಟ್ಟಿದ್ದ. ಇದು ಕೂ ನನ್ನ ಕೊಲ್ಲಲ್ಲ ಅನಿಸುತ್ತೆ” ಎಂದು ಹೇಳುತ್ತಾಳೆ.
ಇಲ್ಲಿ ಮೀರಾಳ ಗಟ್ಟಿತನ ಪುಟ್ಟಿದೆದ್ದು ಕಾಣುತ್ತದೆ ಎಂದು ಹೇಳಬಹುದು.
ಮತ್ತೆ, ಸರ್ಕಾರಗಳು ಇಂತಹ ಘಟನೆಗಳು ಪರೀಕ್ಷಯ ಫಲಿತಾಂಶದ ದಿನದಂದು ಅತಿ ಹೆಚ್ಚಾಗಿ ನಡೆಯುತ್ತವೆ. ಸರ್ಕಾರಗಳು ಮಕ್ಕಳು ಈ ತರದ ನಿರ್ಧಾರದ ಬಗ್ಗೆ ಯೋಚನೆಗಳು ಬಾರದಂತೆ ನೋಡಿ ಕೊಳ್ಳಬೇಕಿದೆ.
ಮಕ್ಕಳಿಗೆ ಆಪ್ತ ಸಮಾಲೋಚನೆ ಅವಶ್ಯಕತೆ ಬಹಳಷ್ಟು ಇರುತ್ತದೆ.
ಈ ಗಂಟುಮೂಟೆ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಹೊತ್ತಿಕೊಂಡು ಇರತ್ತಾನೆ/ಳೆ.
ಕೆಲೊಬ್ಬರು ಆ ಮೂಟೆಯನ್ನು ಇಳಿಸಿ ಅದನ್ನು ಬಿಚ್ಚಿ ಅದರಲ್ಲಿ ಏನಿದೆ ಎಂದು ನೋಡಲು ಬಯಸುವವರು, ಅದೆಲ್ಲ ಯಾಕೆ ಎನ್ನುವವರು ಇದ್ದಾರೆ. ಯಾಕೆಂದರೆ,
ಈ ಗಂಟುಮೂಟೆಯಲ್ಲಿ ನೋವಿನ ಮೂಟೆ, ಖುಷಿಗಳಿಂದ ಕೂಡಿದ ಮೂಟೆ, ಕಷ್ಟಗಳ ಮೂಟೆ, ನಾನ ತರಹದ ಮೂಟೆಯನ್ನು ಹೊತ್ತವರು ಇದ್ದರೆ.
ಒಟ್ಟಿನಲ್ಲಿ ಈ ಗಂಟುಮೂಟೆ ನನ್ನ ಕಳೆದು ಹೋಗಿರುವ ಗಂಟನ್ನು ಮರಳಿ ನೆನೆಪಿಸಿದೆ.
ಎಲ್ಲಾರೂ ನೋಡಲೇ ಬೇಕಾದ, ಸೂಕ್ಷ್ಮತೆಯನ್ನು ನಮಗೆ ಮನಗಾಣಿಸುವ, ಸಿನಿಮಾ ಇದಾಗಿದೆ.
ರೂಪಾರಾವ ಅವರು ಸಿನಿಮಾಗೆ ಚುತ್ಯಿ ಬರದ ಹಾಗೆ ಎಲ್ಲಾವನ್ನೂ ಪೋಣಿಸಿದ್ದಾರೆ ಎಂದು ನನ್ನ ಗ್ರಹಿಗೆ ತಿಳಿದಿದನ್ನು ಬರಿದಿರುವೆ.
-ಮಹೇಶ ಕೇವಂಟಗಿ, ಯುವ ಬರಹಗಾರರು
