“ಗಂಗಾವತಿಯಲ್ಲಿ ಯುವಕನ ಬರ್ಬರ ಕೊಲೆ : ಪೊಲೀಸರಿಂದ ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಶುರು”

Contents
“ಗಂಗಾವತಿಯಲ್ಲಿ ಯುವಕನ ಬರ್ಬರ ಕೊಲೆ : ಪೊಲೀಸರಿಂದ ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಶುರು”• ಸೆಕ್ಯುಲರ್ ವಾಯ್ಸ್ ನ್ಯೂಸ್ ಗಂಗಾವತಿ:ಕೊಪ್ಪಳ : ಜಿಲ್ಲೆಯ ಗಂಗಾವತಿಯಲ್ಲಿ ಯವಕನೊರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರು ಘಟನೆ ನಡೆದಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.ಗಂಗಾವತಿಯ ಜುಲೈನಗರದ ನಿವಾಸಿ ಜೆ ವೆಂಕಟೇಶ(34) ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು, ಕೊಲೆಯಾದ ವ್ಯಕ್ತಿ ನಗರದ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷನೆಂದು ಹೇಳಲಾಗುತ್ತಿದೆ.ನಿನ್ನೆ ಮಧ್ಯರಾತ್ರಿ ನಗರದ ರಾಯಚೂರು ರಸ್ತೆಯ ರಿಲೈನ್ಸ್ ಮಾರ್ಟ್ ಹತ್ತಿರ ಘಟನೆ ನಡೆದಿದ್ದು, ರಾತ್ರಿ 1ರ ಸುಮಾರಿಗೆ ಬೈಕ್‌ನಲ್ಲಿ ಹೊರಟಿದ್ದ ಸಮಯದಲ್ಲಿ 4-5 ಜನ ಯುವಕರ ತಂಡ ಬಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ಹಾಗೂ ಕೊಲೆ ಮಾಡಿದವರು ಯಾರೆಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕೊಲೆಯಾದ ಸ್ಥಳದಲ್ಲಿ ಬೆಂಗಳೂರು ಮೂಲದ ಕಾರ ಇದ್ದು, ಅದರಲ್ಲಿ ಮಚ್ಚುಗಳು ದೊರೆತಿರುವುದು ಕಂಡುಬಂದಿದೆ.ವಿಷಯ ತಿಳಿಯುತ್ತಿದ್ದಂತೆ ಎಸ್‌ಪಿ ಡಾ.ರಾಮ ಅರಸಿದ್ದಿ ರಾತ್ರಿಯಿಂದ ಗಂಗಾವತಿಯಲ್ಲೇ ಬೀಡುಬಿಟ್ಟಿದ್ದು, ಕೊಲೆ ಮಾಡಿದ ದುಷ್ಕರ್ಮಿಗಳ ಪತ್ತೆಗೆ ಪೋಲೀಸರ ಶೋಧ ನಡೆಸಿದ್ದಾರೆ. ಘಟನೆಗೆ ಗಂಗಾವತಿ ಜನತೆ ಬೆಚ್ಚಿಬಿದ್ದಿದ್ದು, ನಗರದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.ಕೊಲೆಯಾದ ಯುವಕ ಮಾಜಿ ಶಾಸಕ ಪರಣ್ಣ ಮುನವಳ್ಳಿ ಆಪ್ತ ವಲಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
• ಸೆಕ್ಯುಲರ್ ವಾಯ್ಸ್ ನ್ಯೂಸ್ ಗಂಗಾವತಿ:
ಕೊಪ್ಪಳ : ಜಿಲ್ಲೆಯ ಗಂಗಾವತಿಯಲ್ಲಿ ಯವಕನೊರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರು ಘಟನೆ ನಡೆದಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಗಂಗಾವತಿಯ ಜುಲೈನಗರದ ನಿವಾಸಿ ಜೆ ವೆಂಕಟೇಶ(34) ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು, ಕೊಲೆಯಾದ ವ್ಯಕ್ತಿ ನಗರದ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷನೆಂದು ಹೇಳಲಾಗುತ್ತಿದೆ.
ನಿನ್ನೆ ಮಧ್ಯರಾತ್ರಿ ನಗರದ ರಾಯಚೂರು ರಸ್ತೆಯ ರಿಲೈನ್ಸ್ ಮಾರ್ಟ್ ಹತ್ತಿರ ಘಟನೆ ನಡೆದಿದ್ದು, ರಾತ್ರಿ 1ರ ಸುಮಾರಿಗೆ ಬೈಕ್‌ನಲ್ಲಿ ಹೊರಟಿದ್ದ ಸಮಯದಲ್ಲಿ 4-5 ಜನ ಯುವಕರ ತಂಡ ಬಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ಹಾಗೂ ಕೊಲೆ ಮಾಡಿದವರು ಯಾರೆಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕೊಲೆಯಾದ ಸ್ಥಳದಲ್ಲಿ ಬೆಂಗಳೂರು ಮೂಲದ ಕಾರ ಇದ್ದು, ಅದರಲ್ಲಿ ಮಚ್ಚುಗಳು ದೊರೆತಿರುವುದು ಕಂಡುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಎಸ್‌ಪಿ ಡಾ.ರಾಮ ಅರಸಿದ್ದಿ ರಾತ್ರಿಯಿಂದ ಗಂಗಾವತಿಯಲ್ಲೇ ಬೀಡುಬಿಟ್ಟಿದ್ದು, ಕೊಲೆ ಮಾಡಿದ ದುಷ್ಕರ್ಮಿಗಳ ಪತ್ತೆಗೆ ಪೋಲೀಸರ ಶೋಧ ನಡೆಸಿದ್ದಾರೆ. ಘಟನೆಗೆ ಗಂಗಾವತಿ ಜನತೆ ಬೆಚ್ಚಿಬಿದ್ದಿದ್ದು, ನಗರದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಲೆಯಾದ ಯುವಕ ಮಾಜಿ ಶಾಸಕ ಪರಣ್ಣ ಮುನವಳ್ಳಿ ಆಪ್ತ ವಲಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
