ಸಿಯುಕೆ ವಿದ್ಯಾರ್ಥಿಗಳ ಹೋರಾಟಕ್ಕೆ ಎಸ್ಎಫ್ಐ ಬೆಂಬಲ

By admin

ಸಿಯುಕೆ ವಿದ್ಯಾರ್ಥಿಗಳ ಹೋರಾಟಕ್ಕೆ ಎಸ್ಎಫ್ಐ ಬೆಂಬಲ

ಕಲ್ಬುರ್ಗಿ: ನಗರದ ಕಡಗಂಚಿ ಹತ್ತಿರ ಇರುವ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ( ಸಂಶೋಧನಾ ) ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಲಾ ಒಬ್ಬರಂತೆ ಈಗಾಗಲೇ ವಿಶ್ವವಿದ್ಯಾಲಯ ಸಣ್ಣ ಕೊಠಡಿಯನ್ನು ನೀಡಿದೆ. ಈಗ ಆ ಕೊಠಡಿಗೆ ಹೊಸದಾಗಿ ಪ್ರವೇಶ ಪಡೆದ ಮತ್ತೊಬ್ಬ ವಿದ್ಯಾರ್ಥಿಗಳನ್ನು ಸೇರಿಸಿ ಕೊಠಡಿ ಹಂಚಿಕೆಗೆ ಮುಂದಾಗಿದೆ ಇದು ಸರಿಯಾದ ಕ್ರಮವಲ್ಲ ಈ ಕುರಿತು ವಿಶ್ವವಿದ್ಯಾಲಯ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಮಾಡಬೇಕು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯವನ್ನು ನೀಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಐ ). ಕಲ್ಬುರ್ಗಿ ಜಿಲ್ಲಾ ಸಮಿತಿ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹ ಮಾಡುತ್ತದೆ.

ಸಂಶೋಧನಾ ವಿದ್ಯಾರ್ಥಿಳಿಗೆ ನೀಡಿರುವ ಕೊಠಡಿಯ ಅಳತೆ ಚಿಕ್ಕದ್ದು 7×11 ಈ ಕೊಠಡಿಯಲ್ಲಿ ಒಬ್ಬ ಸಂಶೋಧನಾರ್ಥಿಯ ಅಧ್ಯಯನಕ್ಕೆ ಬೇಕಾದ ಪುಸ್ತಕ ಸೇರಿ ಇತರೆ ಸಾಮಾಗ್ರಿಗಳನ್ನು ಇಟ್ಟುಕೊಂಡು ಅಭ್ಯಾಸ ಮಾಡಲು ಮಾತ್ರ ಸಾಧ್ಯವಾಗುತ್ತದೆ. ಅದೇ ಕೊಠಡಿಗೆ ಮತ್ತೊಬ್ಬ ವಿದ್ಯಾರ್ಥಿಯನ್ನು ಸೇರ್ಪಡೆ ಮಾಡಿದರೆ ಅಧ್ಯಾಯನಕ್ಕೆ ತೊಂದರೆ ಆಗುತ್ತದೆ ಅದಕ್ಕೆ ಅವರಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ ಜೊತೆಗೆ ಒಬ್ಬರಿಗೆ ಒಂದೇ ಕೊಠಡಿ ಎಂದು ಯುಜಿಸಿ ನಿಯಮ ಕೂಡ ಇದೆ. ಈಗ ಅದನ್ನು ಲೆಕ್ಕಿಸದೆ ಯುಜಿಸಿ ನಿಯಮಕ್ಕೆ ವಿರುದ್ದವಾಗಿ ಕೇಂದ್ರೀಯ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕು ಹೊಸ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ, ಪರ್ಯಾಯ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು. ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಸೇರುವ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು. ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಹಾಸ್ಟೆಲ್ ಮತ್ತು ಮೆಸ್ ಗೆ ಹಣ ಶುಲ್ಕ ತೆಗೆದುಕೊಳ್ಳುವ ವಿವಿಗೆ ಏಕೆ ಹಾಸ್ಟೆಲ್ ನೀಡಲು ಸಾಧ್ಯವಾಗುವುದಿಲ್ಲವೆಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.
ಇರುವ ಹಾಸ್ಟೆಲ್ ಗಳಲ್ಲೂ ಈಗ ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಸ್ವಚ್ಚತೆ ಸೇರಿ ಅನೇಕ ಸಮಸ್ಯೆಗಳಿವೆ ಈ ಬಗ್ಗೆ ಗೊತ್ತಿದ್ದರೂ ವಿವಿ ಜಾಣ ಕುರುಡರಂತೆ ವರ್ತಿಸುತ್ತಿದೆ. ವಿವಿಯು ವಿದ್ಯಾರ್ಥಿಗಳನ್ನು ಅಲಕ್ಷ್ಯ ಮಾಡಿ ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿ ಕೂಡಲೇ ವಿದ್ಯಾರ್ಥಿಗಳ ಅಧ್ಯಾಯಕ್ಕೆ ಅಡಚಣೆ ಉಂಟು ಮಾಡುತ್ತಿದೆ ಇಂತಹ ವಿದ್ಯಾರ್ಥಿ ವಿರೋಧಿ ನೀತಿಯನ್ನು ಕೈ ಬಿಡಬೇಕು ಹಾಗೂ ಕೇಂದ್ರೀಯ ವಿವಿ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕೆಂದು ನಿರ್ಲಕ್ಷ್ಯ ತೋರಿದರೆ ವಿದ್ಯಾರ್ಥಿಗಳ ಜೊತೆಗೂಡಿ ನಮ್ಮ‌ ಸಂಘಟನೆ ಹೋರಾಟಕ್ಕೆ ಮುಂದಾಗಬೇಕಾಗುತ್ತೆಂದು ಎಸ್ಎಫ್ಐ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಸುಜಾತ ಎಚ್ಚರಿಕೆ ನೀಡಿದ್ದಾರೆ.