ಕುಳಿತಲ್ಲೇ ಹೌಹಾರಿದ ಸುಗ್ರೀವ ಕಂಡು I ಕಿಷ್ಕಿಂದಕಾಂಡ ರಾಮಾಯಣ‌ ಭಾಗ-12

By admin


ಕುಳಿತಲ್ಲೇ ಹೌಹಾರಿದ ಸುಗ್ರೀವ ಕಂಡುI
ಕ್ರೋದಿತ ಗೂಳಿಯಂತೆ ನುಗ್ಗಿದ ಲಕ್ಷ್ಮಣನ, II
ಸರಿದರು ಅಪ್ಪಿಕೊಂಡಿದ್ದ ರುಮಾ ವ ಸ್ತ್ರೀಯರು, ಕಂಡ I
ಸುಗ್ರೀವ ಮೋಡಗಳ ಮಧ್ಯೆ ಹುಣ್ಣಿಮೆಚಂದ್ರನಂತೆ, II
ರಕ್ತ-ಕೆಂಪೇರಿದ ಕಣ್ಣು, ಕರಮುಗಿದುI
ಸುಗ್ರೀವ ನಿಂತನು ಕಲ್ಪವೃಕ್ಷದಂತೆ,II
ರುಮಾ ವ ಸ್ತ್ರೀಯರ ಮಧ್ಯೆ ನಿಂತI
ಸುಗ್ರೀವನಿಗೆ ಲಕ್ಷ್ಮಣ ನುಡಿದ ಕ್ರೋದದಿ:II
“ಸತ್ವ ಬಲಸಂಪನ್ನ, ಇಂದ್ರಿಗಳ ಗೆದ್ದವ,I
ಕೃತಜ್ಞ ಸತ್ಯವಾದಿ ರಾಜ ಯೋಗ್ಯನು ಲೋಕಕ್ಕೆ, II
ರಾಜನಾಗಿ ಸಿಂಹಾಸನೇರಿದ ಅಪ್ರಮಾಣಿಕನಾದವI
ಸ್ನೇಹಿತನಿಗೆ ಹುಸಿ ಭರವಸೆ ನೀಡಿದವ, ನಿರ್ದಯಿ ಅಲ್ವೇ? II
ಸಹಾಯ ಪಡೆದು ಪ್ರತಿ-ಸಹಾಯ ಮಾಡದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡತೆ, I
ಪಿತೃ ಹತ್ಯೆ ಮಾಡಿದಂತೆ, ಓ ಹಾರುವ ವಾನರೇಶ್ವರಾ,|| ಸ್ನೇಹಿತ ಸಹಾಯದಿ ಎಲ್ಲ ಪಡೆದೂ I
ಸ್ನೇಹಿತನಿಗೆ ದ್ರೋಹ ಬಗೆದವ ಮರಣ ದಂಡನೆಗೆ ಯೋಗ್ಯ, II
ಪ್ರಾಯಶ್ಚಿತ್ತವಿದೆ ಗೋಹತ್ಯೆಗೆ, ಕುಡುಕನಿಗೆ, ವ್ರತಭಗ್ನನಿಗೆI
ಕಳ್ಳನಿಗೆ, ಆದರೆ ಪ್ರಾಯಶ್ಚಿತವಿಲ್ಲ ಕೃತಜ್ಞನಿಗೆ, II
ರಾಮನಿಂದ ಸಹಾಯ ಪಡೆದು ಪ್ರತಿಸಹಾಯ ಮಾಡದಿದ್ದರೆI
ರಾಮನಿಗೆ, ಅದು ಅಸಭ್ಯತೆ ಹುಸಿ ಸ್ನೇಹ, ನಿನ್ನ, II
ಓ ವಾನರಾ, ಒಪ್ಪಂದದಂತೆ ಸೀತೆ ಅರಿಸುದು ನಿನ್ನ ಹೊಣೆ ಅಲ್ವೇ?I
ಕಾಯುತಿಹನು ರಾಮ, ಹುಸಿ ವಚನ ಭ್ರಮೆ ನೀಡಿ,II
ಸುಖಬೋಗದಲಿ ತಲ್ಲೀನ ನೀನು ಕಪ್ಪೆಗಾಗಿI
ಹೊಂಚು ಹಾಕಿದ ಸರ್ಪವೆಂದು ತಿಳಿಲಿಲ್ಲ ರಾಮನಿಗೆ, II
ರಾಘವನಿಗೆ ಅಪಚಾರ ಬಗೆದಲ್ಲಿ ನೀI
ವಾಲಿಯಂತೆ ರಾಮನ ಬಾಣಿಗೆ ಬಲಿಯಾಗುವಿ, II
ಸುಖಭೋಗದಲಿ ರಾಮನ ಕಾರ್ಯ ಮರೆತರೆI
ಸಿಗುವದು ನಿನಗೂ ವಾಲಿ ಗತಿ”.II
ಕಿಷ್ಕಿಂಧಕಾಂಡ ರಾಮಾಯಣ

ಕ್ರೋದಿತ ಗೂಳಿಯಂತೆ ನುಗ್ಗಿದ ಲಕ್ಷ್ಮಣನನ್ನು ನೋಡಿ ಸುಗ್ರೀವನು ಕುಳಿತಲ್ಲೇ ಹೌಹಾರಿದ ಮತ್ತು, ಲಕ್ಷ್ಮಣನನ್ನು ನೋಡಿ ಸುಗ್ರೀವನನ್ನು ಅಪ್ಪಿಕೊಂಡಿದ್ದ ರುಮಾ ಮತ್ತು ಸ್ತ್ರೀಯರು ದೂರ ಸರಿದ ಸನ್ನಿವೇಶದಲ್ಲಿ ಲಕ್ಷಣನು ಸುಗ್ರೀವನಿಗೆ ನೀಡಿದ ಎಚ್ಚರಿಕೆ ಮಾತುಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯ ಅಂಶಗಳು(1) ಲೋಕಕ್ಕೆ ಸತ್ವ ಬಲಸಂಪನ್ನ, ಇಂದ್ರಿಗಳ ಗೆದ್ದವ, ಕೃತಜ್ಞ ಸತ್ಯವಾದಿ ರಾಜನೇ ಯೋಗ್ಯನು: ಲಕ್ಷ್ಮಣನಿಗೆ ರಾಣಿಯರ ಮಧ್ಯೆಯಿದ್ದ ಸುಗ್ರೀವನು ಮೋಡಗಳ ಮಧ್ಯೆ ಹುಣ್ಣಿಮೆಚಂದ್ರನಂತೆ ಕಂಡನು; ಸುಗ್ರೀವನ ಕಣ್ಣುಗಳು ಮಧ್ಯದಮಲಿನಲ್ಲಿ ರಕ್ತ-ಕೆಂಪೇರಿದ್ದವು, ಲಕ್ಷ್ಮಣನಿಗೆ ಕರಮುಗಿದು ಸುಗ್ರೀವನು ಕಲ್ಪವೃಕ್ಷದಂತೆ ನಿಂತನು, ರುಮಾ ಮತ್ತು ಸ್ತ್ರೀಯರ ಮಧ್ಯೆ ನಿಂತ ಸುಗ್ರೀವನಿಗೆ ಕ್ರೋದದಿಂದ ಲಕ್ಷ್ಮಣನು ರಾಜನಾಗಿ ಸಿಂಹಾಸನೇರಿದ ಬಳಿಕ ಅಪ್ರಮಾಣಿಕನಾದವ, ಸ್ನೇಹಿತನಿಗೆ ಹುಸಿ ಭರವಸೆ ನೀಡಿದವ, ನಿರ್ದಯಿ ಅಲ್ವೇ? ಎಂದು ಎಚ್ಚರಿಸುವ ಮಾತುಗಳೊಂದಿಗೆ ಪ್ರಶ್ನೆ ಮಾಡಿದನು, (2) ಸಹಾಯ ಪಡೆದು ಪ್ರತಿ-ಸಹಾಯ ಮಾಡದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಂತೆ, ಪಿತೃಗಳ ಹತ್ಯೆ ಮಾಡಿದಂತೆ: ಸುಗ್ರೀವನಿಗೆ ಕೋಪದ ಮಾತುಗಳನ್ನು ಮುಂದುವರೆಸಿ ಲಕ್ಷ್ಮಣನು ಸಹಾಯ ಪಡೆದು ಪ್ರತಿ-ಸಹಾಯ ಮಾಡದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡತೆ, ಪಿತೃಗಳ ಹತ್ಯೆ ಮಾಡಿದಂತೆ; ರಾಮನ ಸಹಾಯದಿಂದ ಎಲ್ಲವನ್ನು ಪಡೆದುಕೊಂಡು ನಂತರ ಸ್ನೇಹಿತನಿಗೆ ದ್ರೋಹ ಬಗೆದವನು ಮರಣದಂಡನೆಗೆ ಯೋಗ್ಯನು ಎಂದು ಎಚ್ಚರಿಕೆ ಮಾತುಗಳನ್ನು ಆಡುವನು, (3) ಪ್ರಾಯಶ್ಚಿತ್ತವಿದೆ ಗೋಹತ್ಯೆಗೆ, ಕುಡುಕನಿಗೆ, ವ್ರತಭಗ್ನನಿಗೆ, ಕಳ್ಳನಿಗೆ, ಆದರೆ ಪ್ರಾಯಶ್ಚಿತವಿಲ್ಲ ಕೃತಜ್ಞನಿಗೆ ಮತ್ತು ಹುಸಿ ಸ್ನೇಹಕ್ಕೆ: ಪ್ರಾಯಶ್ಚಿತ್ತವಿದೆ ಗೋಹತ್ಯೆಗೆ, ಕುಡುಕನಿಗೆ, ವ್ರತಭಗ್ನನಿಗೆ, ಕಳ್ಳನಿಗೆ, ಆದರೆ ಪ್ರಾಯಶ್ಚಿತವಿಲ್ಲ ಕೃತಜ್ಞನಿಗೆ, ರಾಮನಿಂದ ಸಹಾಯ ಪಡೆದು ರಾಮನಿಗೆ ಪ್ರತಿಸಹಾಯ ಮಾಡದಿದ್ದರೆ ಅದು ನಿನ್ನ ಅಸಭ್ಯತೆ ಮತ್ತು ಹುಸಿ ಸ್ನೇಹ, ಒಪ್ಪಂದದಂತೆ ಸೀತೆಯನ್ನು ಹುಡುಕಿಕೊಡುವದು ನಿನ್ನ ಹೊಣೆ ಅಲ್ವೇ? ಅಲ್ಲಿ ನಿನ್ನ ಸಹಾಯಕ್ಕಾಗಿ ರಾಮ ಕಾಯುತಿರುವನು, ಇಲ್ಲಿ ನೀನು ರಾಮನಿಗೆ ಹುಸಿ ವಚನ ಭ್ರಮೆ ನೀಡಿ, ಸುಖಭೋಗದಲಿ ತಲ್ಲೀನನಾಗಿರುವಿ; ರಾಮನಿಗೆ ನೀನೊಬ್ಬ ಕಪ್ಪೆಗಾಗಿ ಹೊಂಚು ಹಾಕಿದ ಸರ್ಪವೆಂದು ತಿಳಿಲಿಲ್ಲ, ನೀನು ರಾಘವನಿಗೆ ಅಪಚಾರ ಬಗೆದಲ್ಲಿ ವಾಲಿಯಂತೆ ಅವನ ಬಾಣಿಗೆ ಬಲಿಯಾಗುವಿ; ಸುಖಭೋಗದಲಿ ರಾಮನ ಕಾರ್ಯ ಮರೆತರೆ ನಿನಗೂ ವಾಲಿ ಗತಿಯೇ ಸಿಗುವದು ಎಂದು ಪ್ರಶ್ನಿಸುತ್ತ ಎಚ್ಚರಿಕೆಯ ಮಾತುಗಳನ್ನು ಆಡಿದನು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಯೋಗ್ಯ ರಾಜನ ಬಗ್ಗೆ, ಕೃತಜ್ಞತೆ ಬಗ್ಗೆ ಮತ್ತು ಪ್ರಾಯಶ್ಚಿತಕ್ಕೆ ಯಾರು ಅರ್ಹರಲ್ಲಾ ಎಂಬ ತತ್ವಗಳನ್ನು ಲೋಕಕ್ಕೆ ಬೋಧಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ