ಕೇಳಿ ಲಕ್ಷ್ಮಣನ ಸಂಧಾನಕೋರಿಕೆ ನುಡಿ I ಕಿಷ್ಕಿಂದಕಾಂಡ ರಾಮಾಯಣ ಭಾಗ-12

By admin


ಕೇಳಿ ಲಕ್ಷ್ಮಣನ ಸಂಧಾನಕೋರಿಕೆ ನುಡಿI
ಮಧುರ ಸ್ವಭಾವದಿ ತಾರಾ ಉತ್ತರಿಸಿದಳು ಲಕ್ಷ್ಮಣನಿಗೆ:II
“ತನ್ನವರ ಮೇಲೆ ಕೋಪಿಸುವ ಕಾಲವಲ್ಲಾ ,ಇದುI
ಸುಗ್ರೀವನ ತಪ್ಪನ್ನು ಕ್ಷಮಿಸುವದೇ ಸೂಕ್ತ, ನಿನಗೆ, II
ಓ ಕುಮಾರ, ಗುಣಸಂಪನ್ನನು ಕ್ಷಮಿಸುವನು ದುರ್ಬಲನ,I
ಕೋಪ ನಿಯಂತ್ರಣದಲ್ಲಿರಿಸಿದವ ಪರಿಪೂರ್ಣ ವ್ಯಕ್ತಿ, II
ಸುಗ್ರೀವ ಸ್ನೇಹಿತ ರಾಮನ ಕೋಪಬಲ್ಲೆ,ನಾ;I
ಕಾರ್ಯವಿಳಂಬವಾದ ಕಾಲ ಬಲ್ಲೆ, ನಾ; II
ನಡೆದ ತಪ್ಪು ಅಪರಾಧ ಬಲ್ಲೆ,ನಾ;I
ಏನು ಮಾಡಬೇಕು ಮುಂದೆ, ಚನ್ನಾಗಿ ಬಲ್ಲೆ,ನಾ; II
ಓ ನರಶ್ರೇಷ್ಠನೇ, ಬಲ್ಲೆ ನಾ ದೇಹ-ಕಾಮ-ತೃಷೆ, ಬಲ್ಲೆ ನಾ,I
ವಾನರಿಯರೊಂದಗಿನ ಕಾಮಕೇಳಿ ಸುಗ್ರೀವನ, II
ಕೋಪಿಷ್ಟ ಮನಸ್ಥಿತಿಗೆ ಭಾವನೆ ತಿಳಿಯವು; I
ಕಾಮಕೇಳಿ ಮನುಷ್ಯನಿಗೆ ಸಮಯ ಸ್ಥಳ ಪ್ರಜ್ಞೆಯಿರದು, ಸರಿ ತಪ್ಪು ತಿಳಿದಿತ್ತೇ? II
ಓ ಶತ್ರುನಾಶಕನೇ, ನನ್ನೆದಿರು,ರತಿಕ್ರೀಡೆಯಲಿI
ತೊಡಗಿದ ಸುಗ್ರೀವ ಲಜ್ಜೆಯಿಲ್ಲದವ, ಕ್ಷಮಿಸು, II
ತೀರಿಸಿಕೊಳ್ಳುವರು ಕಾಮತೃಷೆ ಲಜ್ಜೆಮಿತಿಯಲಿI
ತಪಸ್ವಿ ಮಹರ್ಷಿಗಳು, ಆ ಲಜ್ಜೆ ಸುಗ್ರೀವನಲಿಲ್ಲ”,II
ತಲೆ ತಗ್ಗಿ ಕಣ್ಣು ಮುಚ್ಚಿಕೊಂಡಳು ಲಜ್ಜೆಯಿಂದI
ತಾರಾ ಮಾತಗಳನಾಡುವಾಗ ಲಕ್ಷ್ಮಣನಿಗೆ, II
ಸುಗ್ರೀವ ಹಿತದಲಿ ತಾರಾ I
ಲಕ್ಷ್ಮಣನಿಗೆ ಪುನಃ ನುಡಿದಳು: II
“ಓ ನರಶ್ರೇಷ್ಠನೇ, ಜ್ಞಾಪಿಸಿಹನು ಸುಗ್ರೀವ ಈಗಾಗಲೆI
ಪೂರ್ಣಗೊಳಿಸಲು ನಿಮ್ಮ ಕಾರ್ಯವನು, II
ಇಚ್ಚಾರೂಪಿ ವಾನರರು ಬಂದಿಹರು ಸಹಸ್ರ ಸಹಸ್ರ ಬಲದಲಿ, I
ಶತಾಯಗತಾಯ ನೆರವೇರಿಸಲು ನಿಮ್ಮ ಕಾರ್ಯ, II
ಶೂರನೇ, ಬಾಗಿಲಲ್ಲಿ ನಿಲ್ಲದೆ ಅಂತಪುರದೊಳಗೆ ಬಾ,I
ನೋಡು ತಲೆಯೆತ್ತಿ ನಿನ್ನ ಸ್ನೇತರ ಪತ್ನಿಯರನು, II
ಪವಿತ್ರ ಭಾವನೆ ಮನಸ್ಸಿನವರಿಗೆ ತಗಲದು ಪಾಪI
ನೋಡುವದರಿಂದ ಕಣ್ಣೇತ್ತಿ ಪರಸ್ತ್ರೀಯರ ಮುಖ”;II
ತಾರಾಳ ಸ್ವಾಗತ ಪಡೆದು ಲಕ್ಷ್ಮಣ I
ಪ್ರವೇಶಿಸಿದನು ಅಂತಃಪುರ ಕಕ್ಷೆಯ, II
ಆಭರಣ ಹೂಹಾರಗಳಿಂದ ಅಲಂಕೃತ ಸುಗ್ರೀವI
ಚಿನ್ನಾಸನದಲಿ ಕುಳುತ್ತಿದನು ಕಂಡ ಲಕ್ಷ್ಮಣ, II
ರುಮಾ ಬದಿಯಲಿ ಕುಳುತಿದ್ದ ಸುಗ್ರೀವI
ಉರಿಗಣ್ಣಿನ ಲಕ್ಷ್ಮಣನ ನೋಡಿದ. II
ಕಿಷ್ಕಿಂಧಕಾಂಡ ರಾಮಾಯಣ

ಲಕ್ಷ್ಮಣನ ಕೋಪ ನೋಡಿದ ಸುಗ್ರೀವನು ಜಾಣ್ಮೆ ತಾರಾಳನ್ನು ಅವನೊಂದಿಗೆ ಸಂವಾದ ನಡಿಸಲು ಮತ್ತು ಅವನ ಕೋಪ ಶಮನಗೊಳಿಸಿಲು ಕಳಿಸಿದ ಮತ್ತು ತಾರಾಳ ಸಂಧಾನ ಜಾಣ್ಮೆಯನ್ನು ಆದಿಸ್ತ್ರೀಸಂಔಏಧಕ ವಾಲ್ಮೀಕಿಯು ಈ ಪ್ರಸಂಗದಲ್ಲಿ ವಿವರಿಸಿರುವರು: (1) ತಾರಾಳ ಸ್ವಭಾವ ಮತ್ತು ವಿದ್ವತ್ವ: , ಸೌಂದರ್ಯ ಮತ್ತು ಜಾಣ್ಮೆ: ವಾಲಿಯ ದಂಡನಾಯಕ ಸುಶೇನ ಮಗಳು ತಾರಾ, ಪರಾಕ್ರಮಿ ವಾಲಿಯ ಪತ್ನಿ ಮತ್ತು ವೀರ ಅಂಗದನ ತಾಯಿ ತಾರಾಳು ಮೃಧು ಸ್ವಭಾವದ ಜಾಣ ಮತ್ತು ಮೃಧುಭಾಷಿಣಿ ಆಗಿದ್ದಳು, ಮೃದು ಶಬ್ದಗಳಿಂದ ಲಕ್ಷ್ಮಣನ ಕೋಪ ಶಮನ ಮಾಡುವ ಯೋಗ್ಯತ್ಯೆ ಅವಳಲಿತ್ತು, ಅದನ್ನು ಅರಿತ ಸುಗ್ರೀವನು ತಾರಾಳನ್ನು ಲಕ್ಷ್ಮಣನೊಂದಿಗ ಮಾತನಾಡಲು ಕಳುಹಿಸಿದನು, ಸ್ತ್ರೀ ಸಂದಾನ ಮತ್ತು ಸಂವಾದದಲ್ಲಿ ಚತುರಳು ಮತ್ತು ಬದ್ಧಿವಂತಳು ಎಂಬ ಸಂದೇಶವನ್ನು ಆದಿಕವಿ ವಾಲ್ಮೀಕಿಯು ಈ ಮುಖೇನ ಜಗಕ್ಕೆ ಸಂದೇಶ ಕೊಟ್ಟಿರುವರು,(ಅ) ದೇಹ-ಕಾಮ-ತೃಷೆ ಕುರಿತು ಲಕ್ಷ್ಮಣನೊಂದಿಗೆ ಮಾತಗಳನಾಡುವಾಗ ತಾರಾಳು ಲಜ್ಜೆಯಿಂದ (ನಾಚಿಕೆಯಿಂದ)ತಲೆ ತಗ್ಗಿ ಕಣ್ಣು ಮುಚ್ಚಿಕೊಂಡಿದ್ದಳು; ಸುಗ್ರೀವನ ಅಲಜ್ಜಿತ ಕಾಮಕೇಳೀ ಸ್ವಭಾವವನ್ನು ವಿವರಿಸುವಾಗ ಕಿಂಚಿತ ತನ್ನ ಶಬ್ದಗಳಲ್ಲಿ, ಸ್ವಭಾವದಲ್ಲಿ ತಾರಾ ವಿಚಲಿತಗೊಳ್ಳಳಿಲ್ಲ. ಸೌಂದರ್ಯದಲ್ಲಿ ತಾರಾ ಒಬ್ಬ ಮಾದಕ ಸ್ತ್ರೀ ಯಾಗಿದ್ದಳು, ಚಿನ್ನಾಭರಣ ಗೆಜ್ಜೆ ನಾದ ಮಾಡುತ ಮಾದಕಾಕ್ಷಿ ,ಬಳಕುವ ನಡುಗೆಯ ಮಾದಕ-ನಾರಿ ತಾರಾಳು ಲಕ್ಷ್ಮಣನ ಭೇಟಿಗೆ ಬಂದದನ್ನು ಕವಿಯ ಶಬ್ದಗಳು ಅದನ್ನು ರುಜುವಾತ ಪಡಿಸುವದು, (ಬ) ಅದರಂತೆ ತಾರಾಳು ಒಬ್ಬ ವಿದುಷಿ ಮತ್ತು ಶ್ರೇಷ್ಠ ಸಂಧಾನಕಿಯಾಗಿದ್ದಳು, ಲಕ್ಷಣನಿಗೆ ಅವಳು ಅದು ತನ್ನವರ ಮೇಲೆ ಕೋಪಿಸುವ ಕಾಲವಲ್ಲಾ , ಸುಗ್ರೀವನ ತಪ್ಪನ್ನು ಕ್ಷಮಿಸುವದೇ ಸೂಕ್ತ ಮಾರ್ಗ, ದುರ್ಬಲ ವ್ಯಕ್ತಿಯನ್ನು ಗುಣಸಂಪನ್ನ ವ್ಯಕ್ತಿಯು ಕ್ಷಮಿಸುವನು, ಪರಿಪೂರ್ಣ ವ್ಯಕ್ತಿ ಕೋಪವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳುವನು, ಸುಗ್ರೀವನಿಂದ ಕಾರ್ಯ ವಿಳಂಬವಾದ ಸಮಯ ಬಲ್ಲೆನು, ಈಗ ನಡೆದ ತಪ್ಪಿನ ಅಪರಾಧವನ್ನು ಬಲ್ಲೆನು ಹಾಗು ಮುಂದೆ ಏನು ಮಾಡಬೇಕು ಎಂಬದನ್ನು ಚನ್ನಾಗಿ ಬಲ್ಲೆನು ಎಂದು ಆಡಿದ ಮಾತುಗಳು ಅವಳೊಬ್ಬಳು ಪರಿಪೂರ್ಣ ಸಂಧಾನಕಿ ಮತ್ತು ಜ್ಞಾನಿ ಎಂಬದನ್ನು ಆದಿಕವಿ ಸ್ಪಷ್ಟಪಡಿಸಿರುವರು, (2) ರತಿಕ್ರೀಡೆ, ಅಲಜ್ಜಿತ: ರತಿಕ್ರೀಡೆಗೆ ಅಥವಾ ಕಾಮತೃಷೆ ತೀರಿಸಿಕೊಳ್ಳಲು ಸಮಯ ಮತ್ತು ಸ್ಥಳದ ಮಿತಿ ಇರುವದು ಆದರೆ ಅಸಾಮಾನ್ಯ ಕಾಮುಕರಲ್ಲಿ ಅದಕ್ಕೆ ಲಜ್ಜೆಮಿತಿ ಇರುವದಿಲ್ಲ ಅದನ್ನು ತಾಳು ಲಕ್ಷ್ಮಣನಿಗೆ ತಾನು ದೇಹ-ಕಾಮ-ತೃಷೆ ಬಲ್ಲೆನು, ವಾನರಿಯರೊಂದಗಿನ ಸುಗ್ರೀವನ ಕಾಮಕೇಳಿಯನ್ನು ಬಲ್ಲೆನು, ಕಾಮಕೇಳಿ ಕ್ರಿಯೆ(ರತಿಕ್ರಿಯೆ)ಯಲ್ಲಿ ಮನುಷ್ಯನಿಗೆ ಸಮಯ ಮತ್ತು ಸ್ಥಳದ ಪ್ರಜ್ಞೆಯಿರದು, ಕೋಪಿಷ್ಟ ಮನಸ್ಥಿತಿಗೆ ಈ ಭಾವನೆಗಳು ತಿಳಿಯುವದಿಲ್ಲ, ಇನ್ನು ಸರಿ ತಪ್ಪು ತಿಳಿದಿತ್ತೇ? ತನ್ನ ಉಪಸ್ಥಿತಯಿಲ್ಲಿಯೇ ಲಜ್ಜೆಯಿಲ್ಲದ ಸುಗ್ರೀವನು ರತಿಕ್ರೀಡೆಯಲಿ ತೊಡಗಿದನ್ನು ಕ್ಷಮಿಸು; ತಪಸ್ವಿ ಮಹರ್ಷಿಗಳು ಕಾಮತೃಷೆಯನ್ನು ಲಜ್ಜೆಯ ಮಿತಿಯಲಿ ತೀರಿಸಿಕೊಳ್ಳುವರು ಆದರೆ ಆ ಲಜ್ಜೆ ಮಿತಿ ಸುಗ್ರೀವನಲಿಲ್ಲಎಂದು ಸುಗರೀವನಿಗಾಗಿ ಕ್ಷಮೆ ಕೇಳಿದ ಮಾತುಗಳಲ್ಲಿ ಆದಿಕವಿ ವಾಲ್ಮೀಕಿಯು ವಿಕೃತಕಾಮಿಗಳ ಲಜ್ಜಗೇಡಿತನದ ಬಗ್ಗೆ ತಿಳಿಸಿರುವರು, ಕಾಮ ಅಂಧವಾಗಿರುವದು, ಅದಕ್ಕೆ ಯಾವುದೇ ಪ್ರಜ್ಞೆ ಮತ್ತು ಭೇಧ ವಿಲ್ಲದನ್ನು ಆದಿ ಜೈವಿಕ ತಜ್ಞ ವಾಲ್ಮೀಕಿಯು ವಿಕೃತಕಾಮ ಸ್ವಭಾವದ ಬಗ್ಗೆ ತಿಳಿಸಿರುವರು., (3) ಪರ ಸ್ತ್ರೀ ಮುಖ ನೋಡುವದು ಪಾಪಕಾರ್ಯ ಅಲ್ಲ: ಪರ ಸ್ತ್ರೀಯರನ್ನು ಕಂಡು ತಲೆ ತಗ್ಗಿಸಿ ಅಂತಪುರ ಬಾಗಿಲಲ್ಲಿ ನಿಂತ ಸ್ತ್ರೀ-ಗೌರವ ಸ್ವಭಾವದ ಲಕ್ಷ್ಮಣನಿಗೆ ತಾರಾ “ಅಂತಪುರದೊಳಗೆ ಬಾ, ನೋಡು ತಲೆಯೆತ್ತಿ ನಿನ್ನ ಸ್ನೇತರ ಪತ್ನಿಯರನ್ನು, ಪವಿತ್ರ ಭಾವನೆಯ ಮನಸ್ಸಿನವರಿಗೆ ಕಣ್ಣೇತ್ತಿ ಪರಸ್ತ್ರೀಯರ ಮುಖ ನೋಡುವದರಿಂದ ಪಾಪ ತಗಲುವದಿಲ್ಲ”ಎಂದು ನುಡಿಯುವ ಮೂಲಕ ಯಾವುದೇ ಸ್ತ್ರೀಯನ್ನು ಶುದ್ಧ ಭಾವನೆಯಿಂದ ನೋಡುವದು ಪಾಪ ಅಥವಾ ಅಪರಾಧ ಅಲ್ಲ ಎಂಬ ಸಾಮಾಜಿಕ ಮನಸ್ಥಿತಿವನ್ನು ಆದಿಕವಿ ವಾಲ್ಮೀಕಿಯು ತಿಳಿಸಿರುವರು; (4)ಸೀತೆ ಹುಡುಕುವ ಕಾರ್ಯ: ತಾರಾಳ ಸ್ವಾಗತ ಪಡೆದು ಲಕ್ಷ್ಮಣನು ಅಂತಃಪುರ ಕಕ್ಷೆಯ ಪ್ರವೇಶಿಸಿದನು; ಆಭರಣ ಹೂಹಾರಗಳಿಂದ ಅಲಂಕೃತ ಸುಗ್ರೀವನು ಚಿನ್ನಾಸನದಲಿ ಕುಳುತ್ತಿದನು ಲಕ್ಷ್ಮಣನು ಕಂಡನು; ಪತ್ನಿ ರುಮಾ ಬದಿಯಲಿ ಕುಳುತಿದ್ದ ಸುಗ್ರೀವನು ಒಂದು ಕ್ಷಣ ಉರಿಗಣ್ಣಿನ ಲಕ್ಷ್ಮಣನ್ನು ನೋಡಿದನು, ಅದನ್ನು ಅರಿತ ತಾರಾಳು ಸುಗ್ರೀವ ಹಿತದಲಿ ಮುಂದುವರೆದು ಪುನಃ ಲಕ್ಷ್ಮಣನಿಗೆ ಸುಗ್ರೀವನು ಈಗಾಗಲೇ ಸೀತೆಯನ್ನು ಹುಡುಕುವ ಕಾರ್ಯವನು ಪೂರ್ಣಗೊಳಿಸಲು ಆಜ್ಞಾಪಿಸಿರುವನು; ಶತಾಯಗತಾಯ ನಿಮ್ಮ ಕಾರ್ಯ ನೆರವೇರಿಸಲು ಇಚ್ಚಾರೂಪಧಾರಿ ವಾನರರು ಸಹಸ್ರ ಸಹಸ್ರ ಬಲದಲಿ ಬಂದಿರುವರು, ಎಂದು ಲಕ್ಷಣನನ್ನು ಸಮಾಧಾನ ಪಡಿಸಿದ ತಅರಅಳ ಚಾತುರ್ಯವನ್ನು ಆದಿಕವಿ ವ್ಯಕ್ತಪಡಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ