
ಲಗುಬಗೆದಿ ಸುಗ್ರೀವ ಆಸನದಿಂದಿಳಿದು ಬಂದನುI
ಭೇಟಿಗೆ, ಲಕ್ಷ್ಮಣ ಬಂದ ಸುದ್ಧಿ ತಿಳಿದು, II
ಸುಗ್ರೀವ ಉಧ್ಗರಿಸಿದ “ ಅಂಗದನ ಸೂಚನೆI
ಸ್ಪಷ್ಟವಾಯಿತೇನಗೆ ಭೇಟಿಯ, ಓ ಲಕ್ಷ್ಮಣಾ”II
ಒಣ-ಮುಖದಿ, ಮನದಲಿ ದುಃಖದಿI
ಸುಗ್ರೀವ ನುಡಿದನು ತಾರಾಳಿಗೆ: II
“ ಶುಭ್ರ ಸ್ವಭಾವದ ಮೃದುಮನಸ್ಸಿನವI
ಲಕ್ಷ್ಮಣನ ಕೋಪ ರೋಷಕ್ಕೆ ಕಾರಣವೇನು? II
ಯಾವ ಅಪರಾಧ ಪ್ರಚೋಧಿಸಿದೆ ನರಶ್ರೇಷ್ಠನI
ತಿಳಿಸು, ಓ ಪವಿತ್ರ ತಾರಾ,II
ನಮ್ಮಿಂದ ಕ್ಷುಲಕ ತಪ್ಪು ನಡೆದಿದ್ದರೂI
ತಕ್ಷಣ ಸರಿಪಡಿಸು ನಿನ್ನ ಜಾಣ್ಮೆಯಿಂದ, II
ನೀನೇ ಯೋಗ್ಯಳು ಶಮನ ಪಡಿಸಲುI
ಲಕ್ಷ್ಮಣನ ಕೋಪ ತಾಪ, ನಿನ್ನ ಮೃದುಶಬ್ದದಿ, II
ಕೋಪಿಸನು ಲಕ್ಷ್ಮಣ ಕಂಡು ನಿನ್ನ,I
ಸ್ತ್ರೀಗೆ ಗೌರವ ತೋರುವರು ಪುರುಷೊತ್ತಮರು, II
ಶಾಂತಗೊಳಿಸು ನಿನ್ನ ಮೃದು ಮಾತುಗಳಿಂದ, I
ಭೇಟಿಗೆ ಬರುವೆ ನಾ ಲಕ್ಷ್ಮಣನ”; ಚಿನ್ನಾಭರಣ ಗೆಜ್ಜೆ ನಾದ II
ಮಾಡುತ ಮಾದಕಾಕ್ಷಿ ,ಬಳಕುವ ನಡುಗೆಯ ಮಾದಕ-ನಾರಿ ತಾರಾ,I
ನಡೆದಳು ಭೇಟಿಗೆ ಲಕ್ಷ್ಮಣನ, II
ಬದಿಗೆ ಸರಿದು ನಿಂತ ಲಕ್ಷ್ಮಣ ತಲೆ ತಗ್ಗಿಸಿI
ಕೋಪ ತೊರೆದು, ಕಂಡು ರಾಣಿ ತಾರಾ ಬರುವದನ್ನು, II
ಸದ್ಗುಣಿ ಕರುಣೆದಿ, ಅಳುಕದೇ ಸ್ನೇಹದಿI
ಲಕ್ಷ್ಮಣನಿಗೆ ತಾರಾ ನುಡಿದಳು: II
“ಓ ಮನುಜೇಂದ್ರಜಾ, ಕೋಪಿಗೆ ಕಾರಣವೇನು, ನಿನ್ನI
ನೀಡಿದರೆ ಮೌಖಿಕ ಆದೇಶ ಯಾರಾದರೂ? II
ವನಕ್ಕೆ ಒಣ-ಗಿಡದ ಅಪಾಯದಂತೆI
ಕಾಡಾಗ್ನಿ ನಿಸ್ಸಂದೇಹ ಹರಡಿದೆಕೆ? “II
ಸತ್ವಭರಿತ ತಾರಾಳ ಪೀಠಿಕೆ ಶಬ್ದ ಕೇಳಿI
ಸ್ನೇಹದಿ ವಿಶ್ವಾಸದಿ ಲಕ್ಷ್ಮಣ ನುಡಿದ: ಬಯಕೆ ಮಗ್ನದಲಿ II
ಧರ್ಮನಿಷ್ಠೆ ನಾಶವಾಯಿತೆ ಸುಗ್ರೀವನಲಿ,I
ಸಹೋದರನ ಹಿತ ಮರೆತು ದುರ್ಬುದ್ಧಿಯವನಾದನೆ ಸಹೋದರ, II
ರಾಜ್ಯ-ಚಿಂತೆಯಿಲ್ಲದೆ, ಶೋಕ ಪಾರಾಯಣವಿಲ್ಲದೆI
ಓ ತಾರಾ, ಭೋಗದಲಿ ಮುಳುಗಿರುವದು ಮಂತ್ರಗಣ, II
ಗತಿಸಿದವು ನಾಲ್ಕು ಮಾಸ ಸುಗ್ರೀವನ ವಚನದಂತೆ, ಮದI
ಮಸ್ತಿಯಲಿ ಕಾಲಕಳೆದ ಸುಗ್ರೀವನ ಬುದ್ದಿ ಉಡಗಿದೆ, II
ಪಾನಮತ್ತನಾದದು ಯಾವ ಪುರುಷಾರ್ಥಕ್ಕಾಗಿ? I
ಧರ್ಮ ಪವಿತ್ರತೆ ಹಾಳಾಗುವದು ಪಾನದಿ, II
ಉಪಕಾರಕ್ಕೆ ಪ್ರತ್ಯುಪಕಾರ ಸಲ್ಲಿಸದಿದ್ದರೆ ಧರ್ಮನಷ್ಟ,I
ಸ್ನೇಹ ಕಳೆದುಕೊಂಡವನಿಗೆ ಗುಣನಷ್ಟ, II
ಗುಣಶ್ರೇಷ್ಠನಿಗೆ ಸ್ನೇಹವೇ ಸಂಪತ್ತು, ಧರ್ಮ ಪಾರಾಯಣ, I
ಸ್ನೇಹ ಗುಣಸಂಪತ್ತು ಇರದು ಧರ್ಮವಿಲ್ಲದವನಲ್ಲಿ,ಎರಡೂ, II
ಓ ಕಾರ್ಯತತ್ವಜ್ಞೆ, ನಿಂತಿದೇಕೆ ವರ್ತಮಾನ ಕಾರ್ಯ ?I
ಉತ್ತರಿಸು, ಕಾರ್ಯ ಪ್ರಾರಂಭ ಕುರಿತು” II
ಕಿಷ್ಕಿಂಧಕಾಂಡ ರಾಮಾಯಣ
ಲಕ್ಷ್ಮಣ ಬಂದ ಸುದ್ಧಿ ತಿಳಿದು ಸುಗ್ರೀವನು ಲಗುಬಗೆಯಿಂದ ಆಸನದಿಂದಿಳಿದು ಅವನ ಭೇಟಿಗೆ ಬಂದನು ಹಾಗು ಅಂಗದನು ಭೇಟಿಯ ಸೂಚನೆ ನೀಡಿದನ್ನು ಲಕ್ಷ್ಮಣನಿಗೆ ಅರುಹಿದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು:(1) ಸುಗ್ರೀವನು ಲಕ್ಷಣನ ಸ್ವಭಾವ ತಿಳಿದು ತಾರಾಳನ್ನು ಸಂಧಾನಕ್ಕೆ ಕಳುಹಿಸಿದನು, ಬಾಡಿದ ಮುಖದಿಂದ ಮನದಲ್ಲಿ ದುಃಖಿಸುತ್ತ ಸುಗ್ರೀವನು ತಾರಾಳಿಗೆ ಶುಭ್ರ ಸ್ವಭಾವದ ಮೃದು ಮನಸ್ಸಿನವ ಲಕ್ಷ್ಮಣನ ಕೋಪ ರೋಷಕ್ಕೆ ಕಾರಣವೇನು? ಎಂಬದನ್ನು ತಿಳಿಯಲು, ತಮ್ಮಿಂದ ಯಾವುದೇ ಕ್ಷುಲಕ/ಸಣ್ಣ ತಪ್ಪು ನಡೆದಿದ್ದರೂ ಜಾಣ್ಮೆಯಿಂದ ಅದನ್ನು ತಕ್ಷಣ ಸರಿಪಡಿಸಿ, ಲಕ್ಷ್ಮಣನ ಕೋಪ ತಾಪವನ್ನು ಮೃದು ಶಬ್ದಗಳಿಂದ ಶಮನ ಪಡಿಸಲು ಅವಳೇ ಯೋಗ್ಯಳು, ಸ್ತ್ರೀಗೆ ಗೌರವ ತೋರುವರು ಪುರುಷೊತ್ತಮ ಲಕ್ಷ್ಮಣನು ತಾರಾಳ ಕಂಡು ಕೋಪಿ ತೊರೆಯುವನು ಅವನ ಮುಂದೆ ಹೋಗಿ ಶಾಂತಗೊಳಿಸು ಆನಂತರ ತಾನು ಲಕ್ಷ್ಮಣನ ಭೇಟಿಗೆ ಬರುದಾಗಿ ಹೇಳಿ ತಾರಾಳನ್ನು ಕಳಿಸುವನು, (2) ಸ್ತ್ರೀ, ಒಬ್ಬ ಉತ್ತಮ ಸಂಧಾನಗಾರ್ತಿ: ಲಕ್ಷ್ಮಣ ಮತ್ತು ತಾರಾಳ ಸ್ವಭಾವ ಅರಿತಿದ್ದ ಸುಗ್ರೀವ ತಾರಾಳನ್ನೇ ಲಕ್ಷ್ಮಣನೊಂದಿಗೆ ಸಂಧಾನ-ಸಂವಾದಕ್ಕೆ ಕಳಿಸಿದನು; ಲಕ್ಷ್ಮಣನ ಕೋಪ ರೋಷಕ್ಕೆ ಕಾರಣವೇನು? ಯಾವ ಅಪರಾಧ ಅವನನ್ನು ಪ್ರಚೋಧಿಸಿದೆ ,ತಮ್ಮಿಂದ ಯಾವುದೇ ಕ್ಷುಲಕ/ಸಣ್ಣ ತಪ್ಪು ನಡೆದಿದ್ದರೂ ಜಾಣ್ಮೆಯಿಂದ ಅದನ್ನು ತಕ್ಷಣ ಸರಿಪಡಿಸು, ಲಕ್ಷ್ಮಣನ ಕೋಪ ತಾಪವನ್ನು ಮೃದು ಶಬ್ದಗಳಿಂದ ಶಮನ ಪಡಿಸಲು ಯೋಗ್ಯಳು, ಸ್ತ್ರೀಗೆ ಗೌರವ ತೋರುವರು ಪುರುಷೊತ್ತಮ ಲಕ್ಷ್ಮಣನು ತಅರಾಳ ಕಂಡು ಕೋಪಿಸುವದಿಲ್ಲ ಎಂದು ಸುಗ್ರೀವನು ತಾರಾಳಿಗೆ ಆಡಿದ ಮಾತುಗಳ ಮೂಲಕ ಆದಿಕವಿಯು ಸ್ತ್ರೀಯ ಸಂಧಾನ ವಿಧಾನ ಮತ್ತು ಜಾಣ್ಮೆಯನ್ನು ತಿಳಿಸಿರುವರು, (3) ಪರಸ್ತ್ರೀಯರೊಂದಿಗೆ ಲಕ್ಷ್ಮಣನ ನಡತೆ: ಲಕ್ಷ್ಮಣನು ಸ್ತ್ರೀಗೆ ಗೌರವ ತೋರುವ ಶುಭ್ರ ಸ್ವಭಾವದ ಮೃದು ಮನಸ್ಸಿನವನು, ಲಕ್ಷ್ಮಣನ ಅಂತಪುರದಲಿ ತಮ್ಮ ಅಲಂಕಾದಲಿ ಮಗ್ನರಿದ್ದ ವಿಭಿನ್ನ ಯುವ ಸುಂದರಿಯನು ಕಂಡು, ವಾನರಿಯರ ( ವಾನರ-ಸ್ತ್ರೀಯರ) ಕಾಲಲ್ಲಿಯ ಬೆಳ್ಳಿಗೆಜ್ಜೆ ನಾದ, ಚಿನ್ನಾಭರಣಗಳ ಸದ್ದು ಕೇಳಿ ಒಂದು ಕ್ಷಣ ಲಜ್ಜಿತನಾಗಿ ಕಸಿವಿಸಿಗೊಂಡನು ಆದರೆ ವಿಚಲಿತಗೊಳ್ಳಲಿಲ್ಲ ಅದರಂತೆ ರಾಣಿ ತಾರಾ ಬರುವದನ್ನು ನೋಡಿ ಬದಿಗೆ ಸರಿದು ಲಕ್ಷ್ಮಣನು ಕೋಪ ತೊರೆದು ತಲೆ ತಗ್ಗಿಸಿ ನಿಂತನು. ಆದರೆ ಇನ್ನೊಂದೆಡ ಲಕ್ಷ್ಮಣನ ಕೋಪ ಸ್ವಭಾವವು ವನದಲ್ಲಿ ಒಣಗಿದ ಕಟ್ಟಿಗೆಯಂತೆ ಇಡೀ ಅರಣ್ಯವನ್ನು ಸುಡಬಲ್ಲದು ಎಂಬ ವಿವರಣೆಯೂ ಇದೆ ಆದರೆ ಕೋಪ ಸ್ವಭಾವವಿದ್ದರೂ ಅವನೊಬ್ಬ ಜ್ಞಾನಿಯಾಗಿದ್ದನು ಆದಿಕವಿ ವಾಲ್ಮೀಕಿಯು ತಿಳಿಸಿರುವರು (4) ಸ್ನೇಹ ಗುಣ ಸಂಪತ್ತು: ಸತ್ವಭರಿತ ತಾರಾಳ ಪೀಠಿಕೆಯ ಮಾತುಗಳನ್ನು ಕೇಳಿದ ಲಕ್ಷ್ಮಣನು ಸ್ನೇಹ ವಿಶ್ವಾಸದಿಂದ ತಾರಾಳಿಗೆ ಬಯಕೆಯ ಮಗ್ನದಲಿ ಸುಗ್ರೀವನ ಧರ್ಮನಿಷ್ಠೆ ನಾಶವಾಯಿತೆ, ರಾಮನ ಹಿತ ಮರೆತು ದುರ್ಬುದ್ಧಿಯವನಾದನೆ, ರಾಜ್ಯದ ಮಂತ್ರಿಗಳು ರಾಜ್ಯದ ಚಿಂತೆಯಿಲ್ಲದೆ, ಶೋಕ ಪಾರಾಯಣವಿಲ್ಲದೆ, ಭೋಗದಲಿ ಮುಳುಗಿರುವರು, ಸುಗ್ರೀವನ ವಚನದಂತೆ ಮಳೆಗಾಲದ ನಾಲ್ಕು ಮಾಸಗಳು ಗತಿಸಿದವು, ಮದಮಸ್ತಿಯಲಿ ಕಾಲಕಳೆದ ಸುಗ್ರೀವನ ಬುದ್ದಿ ಉಡಗಿದೆ, ಅವನು ಪಾನಮತ್ತನಾದದು ಯಾವ ಪುರುಷಾರ್ಥಕ್ಕಾಗಿ? ಸುಗ್ರೀವನ ನಿರ್ಲಕ್ಷತನ ಕುರಿತು ಲಕ್ಷ್ಮಣನು ಮದ್ಯಕುಡಿತದಿಂದ ಧರ್ಮಪವಿತ್ರತೆ ಹಾಳುವದು, ಉಪಕಾರಕ್ಕೆ ಪ್ರತ್ಯುಪಕಾರ ಸಲ್ಲಿಸದಿದ್ದರೆ ಧರ್ಮನಷ್ಟವಾಗುವದು, ಸ್ನೇಹ ಕಳೆದುಕೊಂಡವನಿಗೆ ಗುಣನಷ್ಟವಾಗುವದು, ಗುಣಶ್ರೇಷ್ಠನಿಗೆ ಸ್ನೇಹವೇ ಸಂಪತ್ತು ಮತ್ತು ಧರ್ಮ ಪಾರಾಯಣ, ಆದರೆ ಧರ್ಮವಿಲ್ಲದವನಲ್ಲಿ ಸ್ನೇಹ ಗುಣಸಂಪತ್ತು ಎರಡೂ ಇರದು ಎಂದು ನೀಡಿದ ಉಪದೇಶಗಳು ಅವನ ಜ್ಞಾನ ಪರಿಧಿಯನ್ನು ಪರಿಚಯಿಸುವದು, ತದ್ಮೂಲಕ ಆದಿಚಿಂತಕ ವಾಲ್ಮೀಕಿಯು ಲಕ್ಷನನ ಆಧ್ಯಾತ್ಮಿಕ ಜ್ಞಾನದ ಪರಿಚಯ ನೀಡಿರುವರು,
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
