ಆಮಂತ್ರಣದ ಮೇರೆಗೆ ಪ್ರವೇಶಿಸಿದ ಲಕ್ಷ್ಮಣI ಕಿಷ್ಕಿಂದಕಾಂಡ ರಾಮಾಯಣ ಭಾಗ-11

By admin


ಆಮಂತ್ರಣದ ಮೇರೆಗೆ ಪ್ರವೇಶಿಸಿದ ಲಕ್ಷ್ಮಣI
ಭವ್ಯ ಕಿಷ್ಕಿಂಧ ತನ್ನ ವೀರಾವೇಶದಲಿ, II
ಗವಿ-ರಾಜ್ಯ ಮುತ್ತು ರತ್ನ ವಜೃ ಆಭರಣ, ಕೆತ್ತನೆ ಕಲೆ,I
ಹೂ ಹಣ್ಣಿನ ಉಪವನಗಳಿಂದ ಕಂಗೊಳಿಸುತಿತ್ತು, II
ಶೃಂಗಾರಿತ ಹೂ ಹಾರ ಭರಣಗಳಿಂದ ವಾನರರುI
ಗಂಧರ್ವರಂತೆ ಕಂಡರು ಲಕ್ಷ್ಮಣನಿಗೆ, II
ಶ್ರೀಗಂಧ ಕಮಲ ಸುಗಂಧದ್ರವ್ಯ ಸುವಾಸನೆI
ಹರಡಿತ್ತು ಎಲ್ಲಡೆ ದಾರಿಯುದ್ದಕ್ಕೂ, II
ವಿಂಧ್ಯದಂತಹ ಬಹುಮಹಡಿ ಗವಿಗಳುI
ಶುಭ್ರಜಲ ಝರಿಗಳು, ರಮ್ಯತಾಣ, II
ಅಂಗದ, ದ್ವೀದಿ, ಗವಯ, ಗವಾಕ್ಷ, ಗಜ, ಶರಭ, ವಿದ್ಯುನ್ಮಾಲ,I
ಸಂಪಾತ, ಸೂರ್ಯಾಕ್ಷ, ಹನುಮ, ಕುಮುದ, 4.33.6
ವೀರಬಾಹು, ಸುಬಾಹು,ನಳ, ಸುಶೇಷನ, ತಾರ, I
ಜಾಂಬವತ, ದಧಿವಕ್ತ್ರ, ನೀಲ, ಸುಪಾಟಲ, II
ಸುನೇತ್ರ, ತೆಷಾಮ, ವೀರವಾನರರ ತಾಣಗಳು ಕಂಡವುI
ಬಿಳಿಮೋಡಗಳಂತೆ ದಾರಿಯೂದ್ದಕ್ಕೂ ಲಕ್ಷ್ಮಣನಿಗೆ, II
ಬಿಳಿ ಪರ್ವತ ಶಿಖರದಲಿ ಕಂಡಿತು ಅಂತಪುರ ಸುಗ್ರೀವನ,I
ಹೂ ಹಣ್ಣು ಬಳ್ಳಿಗಿಡ ಸುವಾಸನೆಗಳಿಂದ ತುಂಬಿತ್ತು, II
ಏಳು ಪ್ರಾಂಗಣ ದಾಟಿ ಸುಭದ್ರ ಅಂತಪುರದತ್ತI
ಸಾಗಿದನು ಲಕ್ಷ್ಮಣ ಸುಗ್ರೀವನ ಭೇಟಿಗೆ, II
ಕೇಳಿ ಬಂತು ಸುಮಧುರ ಸಂಗೀತ ಗಾಯನI
ಪ್ರವೇಶಿಸುತಿದ್ದಂತೆ ಅಂತಪುರ ದ್ವಾರ ಲಕ್ಷ್ಮಣನಿಗೆ, II
ಕಂಡನು ವಿಭಿನ್ನ ಯುವ ಸುಂದರಿಯನುI
ಲಕ್ಷ್ಮಣ ಸುಗ್ರೀವನ ಅಂತಪುರದಲಿ, II
ಕಂಡು ಲಕ್ಷ್ಮಣನ ಅಳುಕಲಿಲ್ಲ, ಅಂಜಲಿಲ್ಲI
ತಮ್ಮ ಅಲಂಕಾರದಲಿ ಮಗ್ನರಿದ್ದ ಸುಂದರಿಯರು, II
ವಾನರಿಯರ ಬೆಳ್ಳಿಗೆಜ್ಜೆ ನಾದ, ಚಿನ್ನಾಭರಣಗಳ ಸದ್ದು ಕೇಳಿI
ಲಜ್ಜಿತನಾಗಿ ಕಸಿವಿಸಿಗೊಂಡು ನಿಂತನು ಲಕ್ಷ್ಮಣ, II
ಕೋಪ ಮನದಲಿ ಉಕ್ಕಿದರೂ, ತಡೆದು,I
ವರ್ತಿಸಿದ ಶಾಂತ ಸ್ವಭಾವದಿ ಲಕ್ಷ್ಮಣ, II
ಕಿಷ್ಕಿಂಧಕಾಂಡ ರಾಮಾಯಣ

ಮಂತ್ರಣದಮೇರೆಗೆ ಲಕ್ಷ್ಮಣನು ತನ್ನ ವೀರಾವೇಶದಲಿ ಭವ್ಯ ಕಿಷ್ಕಿಂಧವನ್ನು ಪ್ರವೇಶಿಸಿದ ಮತ್ತು ಅವನು ಕಂಡ ಕಿಷ್ಕಿಂಧದ ಅಂದವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು: (1) ಕಿಷ್ಕಿಂಧ ರಾಜ್ಯದ ವರ್ಣನೆ: ಗವಿ-ರಾಜ್ಯ ಕಿಷ್ಕಿಂಧವು ಮುತ್ತು ರತ್ನ ವಜ್ರ ಆಭರಣ, ಕೆತ್ತನೆ ಕಲೆ, ಹೂ ಹಣ್ಣಿನ ಉಪವನಗಳಿಂದ ಕಂಗೊಳಿಸುತಿತ್ತು, ಶೃಂಗಾರಿತ ಹೂ ಹಾರ ಭರಣಗಳಿಂದ ವಾನರರು ಗಂಧರ್ವರಂತೆ ಕಾಣುತಿದ್ದರು, ಶ್ರೀಗಂಧ ಕಮಲ ಸುಗಂಧದ್ರವ್ಯ ಸುವಾಸನೆ ಎಲ್ಲಡೆ ದಾರಿಯುದ್ದಕ್ಕೂ ಹರಡಿತ್ತು, ವಿಂಧ್ಯಪರ್ವತ ಶಿಖರಗಳಂತಹ ಬಹುಮಹಡಿ ಗವಿಗಳ ಮತ್ತು ಶುಭ್ರಜಲ ಝರಿಗಳ ರಮ್ಯತಾಣವಾಗಿತ್ತು; ಅದರಂತೆ ಅಲ್ಲಿಯೇ ವೀರವಾನರರ ತಾಣಗಳು ಇದ್ದವು; ಬಿಳಿಮೋಡಗಳಂತೆ ದಾರಿಯೂದ್ದಕ್ಕೂ ಬಿಳಿ ಪರ್ವತ ಶಿಖರದಲಿ ಸುಗ್ರೀವನ ಅಂತಪುರ ಇತ್ತು; ಆ ಪ್ರದೇಶವು ಹೂ ಹಣ್ಣು ಬಳ್ಳಿಗಿಡ ಸುವಾಸನೆಗಳಿಂದ ತುಂಬಿತ್ತು; ಸುಗ್ರೀವನ ಅಂತಪುರ ಏಳು ಪ್ರಾಂಗಣಗಳೀಂದ (ಆವರಣ) ಸುಭದ್ರವಾಗಿತ್ತು, ಅಂತಪುರವು ಸುಮಧುರ ಸಂಗೀತ ಗಾಯನಗಳಿಂದ ತುಂಬಿತ್ತು; ಸುಗ್ರೀವನ ಅಂತಪುರವು ಸದಾ ಅಲಂಕಾದಲಿ ಮಗ್ನರಿದ್ದ ವಿಭಿನ್ನ ಯುವ ಸುಂದರ ವಾನರಿಯರ ( ವಾನರ-ಸ್ತ್ರೀಯರ) ಕಾಲಲ್ಲಿಯ ಬೆಳ್ಳಿಗೆಜ್ಜೆ ನಾದ ಮತ್ತು ಚಿನ್ನಾಭರಣಗಳ ಸದ್ದುಗಳಿಂದ ತುಂಬಿತ್ತು, (2) ಲಕ್ಷ್ಮಣನ ವರ್ತನೆ: ಲಕ್ಷ್ಮಣನು ಸುಗ್ರೀವನ ಭೇಟಿಗೆ ಏಳು ಪ್ರಾಂಗಣಗಳನ್ನು (ಆವರಣ) ದಾಟಿ ಸುಭದ್ರ ದ್ವಾರ ಪ್ರವೇಶಿಸುತಿದ್ದಂತೆ ಲಕ್ಷ್ಮಣನಿಗೆ ಸುಮಧುರ ಸಂಗೀತ ಗಾಯನ ಕೇಳಿ ಬಂತು; ಲಕ್ಷ್ಮಣನು ಸುಗ್ರೀವನ ಅಂತಪುರದಲಿ ತಮ್ಮ ಅಲಂಕಾರದಲಿ ಮಗ್ನರಿದ್ದ ವಿಭಿನ್ನ ಯುವ ಸುಂದರಿಯರು ಕಂಡರು, ಅವನು ಅವರಿಗೆ ಅಳುಕಲಿಲ್ಲ ಮತ್ತು ಅಂಜಲಿಲ್ಲ; ಲಕ್ಷ್ಮಣನು ಒಂದು ಕ್ಷಣ ವಾನರಿಯರ ( ವಾನರ ಸ್ತ್ರೀಯರ) ಕಾಲಿನ ಬೆಳ್ಳಿಗೆಜ್ಜೆ ನಾದ, ಚಿನ್ನಾಭರಣಗಳ ಸದ್ದು ಕೇಳಿ ಲಜ್ಜಿತನಾಗಿ ಕಸಿವಿಸಿಗೊಂಡು ನಿಂತನು; ಲಕ್ಷ್ಮಣನು ತನ್ನ ಕೋಪ ಮನದಲಿ ಉಕ್ಕಿದರೂ ಅದನ್ನು ತಡೆದು, ಶಾಂತ ಸ್ವಭಾವದದಿಂದ ವರ್ತಿಸಿದನ್ನು ಆದಿಕವಿ ವಾಲ್ಮೀಕಿಯು ಲಕ್ಷ್ಮಣನ ಗುಣವನ್ನು ವಿವರಿಸಿರುವರು.

ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ