“ಕೊಪ್ಪಳ| ಬಲ್ದೊಟ ಕಾರ್ಖಾನೆಯ ಕಾರ್ಮಿಕ ಸಾವಿಗೆ ಎಸ್ಯುಸಿಐ( ಸಿ)ಪಕ್ಷದ ತೀವ್ರ ಖೇದ: ತಕ್ಷಣ ₹25 ಲಕ್ಷ ಪರಿಹಾರಕ್ಕೆ ಮುಖಂಡ ಶರಣು ಗಡ್ಡಿ ಆಗ್ರಹ”
• ಸೆಕ್ಯಲರ್ ವಾಯ್ಸ್ ನ್ಯೂಸ್ ಕೊಪ್ಪಳ:
ಇಲ್ಲಿನ ಬಲ್ದೊಟ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಿನ್ನಾಳ ಗ್ರಾಮದ ವೀರಭದ್ರಪ್ಪ ಕುಂಬಾರ್ (40) ಅವರು ಕೆಲಸದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಸಾವನ್ನಪ್ಪಿದ ಘಟನೆಗೆ ಸೋಷ್ ಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷವು ತೀವ್ರ ಖೇದ ವ್ಯಕ್ತಪಡಿಸಿದೆ.
ಈ ಸಂಬಂಧ ಬುಧುವಾರ ಪಕ್ಷದ ಸದಸ್ಯ ಶರಣು ಗಡ್ಡಿ ಅವರು ನೀಡಿದ ಪ್ರಕಟಣೆಯಲ್ಲಿ, “ಮೃತ ಕಾರ್ಮಿಕನ ಕುಟುಂಬಕ್ಕೆ ತಕ್ಷಣ ₹25 ಲಕ್ಷ ಪರಿಹಾರ ನೀಡಬೇಕು ಹಾಗೂ ಕುಟುಂಬದ ಸದಸ್ಯರಿಗೆ ಶಾಶ್ವತ ಉದ್ಯೋಗದ ಭರವಸೆ ಕೊಡಬೇಕು,” ಎಂದು ಒತ್ತಾಯಿಸಿದ್ದಾರೆ.
ಕಾರ್ಖಾನೆಗಳಲ್ಲಿ ಕಾರ್ಮಿಕರ ಜೀವಭದ್ರತೆ ಕಡೆಗಣನೆಗೆ ಒಳಗಾಗಿದ್ದು, ಸುರಕ್ಷತಾ ಕ್ರಮಗಳ ಅಭಾವದಿಂದಲೇ ವೀರಭದ್ರಪ್ಪ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಬೇಸರ ವ್ಯಕ್ತಪಡಿಸಿದರು.