LOCAL NEWS: “ಗಂಗಾವತಿ|ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಹೇಮಗುಡ್ಡ ವಸತಿ ಶಾಲೆ ವಿದ್ಯಾರ್ಥಿ ಆಯ್ಕೆ”

By admin

“ಗಂಗಾವತಿ: ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಹೇಮಗುಡ್ಡ ವಸತಿ ಶಾಲೆ ವಿದ್ಯಾರ್ಥಿ ಆಯ್ಕೆ”

• ಸೆಕ್ಯುಲರ್‌ ವಾಯ್ಸ್‌  ನ್ಯೂಸ್‌ ಗಂಗಾವತಿ :

ತಾಲೂಕಿನ ಹೇಮಗುಡ್ಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಡರ್–17 ವಿಭಾಗದ ವಿದ್ಯಾರ್ಥಿ ಅಭಿಷೇಕ ನೀಲಪ್ಪ ಗುಂಡು ಎಸೆತ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಶಾಲೆಯ ಕ್ರೀಡಾ ಶಿಕ್ಷಕರ ಮಾರ್ಗದರ್ಶನದಲ್ಲಿ ತೀವ್ರ ಪರಿಶ್ರಮ ಪಟ್ಟು ಅಭಿಷೇಕ ಈ ಸಾಧನೆ ಮಾಡಿದ್ದಾನೆ. ವಿದ್ಯಾರ್ಥಿಯ ಈ ಯಶಸ್ಸಿಗೆ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಕ್ರೀಡಾ ಪ್ರೇಮಿಗಳು ಅಭಿನಂದನೆ ತಿಳಿಸಿದ್ದಾರೆ.