ಹರಪ್ಪ: ಡಿಎನ್ಎ ನುಡಿದ ಸತ್ಯ(ಪುಸ್ತಕ ಕುರಿತ ಬರಹ)

By admin

ಪುಸ್ತಕ- ಹರಪ್ಪ : ಡಿಎನ್ಎ ನುಡಿದ ಸತ್ಯ. ಲೇಖಕರು- ಸುರೇಶ್ ಭಟ್ಟ ಬಾಕ್ರಬೈಲ್& ಲಕ್ಷ್ಮೀಪತಿ ಕೋಲಾರ

ಈ ಪುಸ್ತಕ ಬಿಡುಗಡೆಯಾಗಿ 3 ರಿಂದ 4 ವರ್ಷ ವಾದರು ಇದು ಜನರ ಕೈಗೆ ಸಿಕ್ಕಿಲ್ಲ ಯಾಕೆ? ಈ ಪುಸ್ತಕವನ್ನು ತಲುಪಿಸುವ ಕಾರ್ಯ ಮಾಡ ಬೇಕಾಗಿರೋದು ಯಾರು? ಮಾಡಿಲ್ಲ ಯಾಕೆ? ಈ ಪುಸ್ತಕದಲ್ಲಿ ಇರುವುದೆನು? ಈ ಎಲ್ಲಾ ಪ್ರಶ್ನೆಗಳಿಗೆ ಈ ಪುಸ್ತಕ ಓದಿದ ಮೇಲೆ ಕಟುವಾದ ಸತ್ಯದುತ್ತರ ಸಿಗುವ ಸಾಧ್ಯತೆಗಳಿವೆ ಎನ್ನುವುದು ನನ್ನ ಗ್ರಹಿಕೆ.

ನನಗೆ ಈ ಪುಸ್ತಕ ಓದಿದ ಮೇಲೆ ಅನಿಸುತು. ಏನೆಂದರೆ, 2018 ಅಕ್ಟೋಬರನಲ್ಲಿ ಈ ‘ಹರಪ್ಪ ಡಿಎನ್ಎ ನುಡಿದ ಸತ್ಯ’ ಪುಸ್ತಕ ಬಿಡುಗಡೆಯಾಗಿದೆ. ಹಾಗೆ 2022ರಲ್ಲಿ ದೇವನೂರು ಮಹಾದೇವ ಅವರ ‘RSS ಆಳ ಮತ್ತು ಅಗಲ’ ಪುಸ್ತಕ ಬಿಡುಗಡೆ ಆಯಿತು.

ಆದರೆ, ನನಗೆ ಅರ್ಥ ಆಯಿತು. ದೇವನೂರು ಅವರು ಸರಿಯಾದ ಸಮಯಕ್ಕೆ ಬೀಸಿದ ಚಾಟಿ ಎಲ್ಲಾ ಶ್ರೀ ಸಾಮಾನ್ಯರನ್ನು ತಲುಪಿದೆ ಎಂದು.

ಸತ್ಯ ಯಾವತ್ತಿಗೂ ಬುದಿ ಮುಚ್ಚಿದ ಕೆಂಡ ಇದಂತೆ. ಎನ್ನುವ ನಾಲ್ನುಡಿ ಕೇಳುತ್ತಾ ಬಂದಿರತ್ತಿವೆ ನಾವೆಲ್ಲರೂ. ಈ ಮಾತು ಹೇಳೊದಕ್ಕೆ ಕಾರಣನೇ ಈ ಪುಸ್ತಕದಲ್ಲಿನ ಇರುವ ಸತ್ಯ ಹಾಗೂ ಮಿಥ್ಯಗಳು ಜನರಿಗೆ ತಲುಪಬೇಕಾದ ತುರ್ತು ಇದೆ.

ಈ ಪುಸ್ತಕದಲ್ಲಿ ಪ್ರಾಚೀನ ಸಿಂಧೂ ನಾಗರಿಕತೆಯ ಹರಪ್ಪ, ರಾಖಿಗರಿ,ಭಾಷೆಗಳ ಬಗ್ಗೆ, ಸಂಸ್ಕೃತಿಗಳ ಬಗ್ಗೆ, ಭೂಪ್ರದೇಶದ ಬಗ್ಗೆ, ವಲಸೆ ಇತಿಹಾಸ, ಸಂಶೋಧನೆ, ಉತ್ಖನನ, ವಂಶವಾಹಿ ಪರೀಕ್ಷೆಗಳ ಬಗ್ಗೆ, ಭೂಮಿಯ ಮೊದಲು ಮಾನವರು ಎಲ್ಲಿ ಕಾಣಿಸಿಕೊಂಡರು, ಈ ಭರತಖಂಡದ ಮೂಲನಿವಾಸಿ ಯಾರು?
ಆರ್ಯರು ಎಂದರೆ ಯಾರು? ದ್ರಾವಿಡ ಎಂದರೆ ಯಾರು? ಈ ತರಹದ ಗೊಂದಲಗಳನ್ನು ಬಗೆ ಹರಿಸಲು ಸಹಾಯ ಆಗಿದೆ ಎಂದು ಹೇಳಬಹುದು.

ಸುರೇಶ್ ಭಟ್ಟ ಬಾಕ್ರಬೈಲ್ ಮತ್ತು ಲಕ್ಷ್ಮೀಪತಿ ಕೋಲಾರವರು DNA ಸಂಶೋಧನೆಗಳು ಏನನ್ನು ತಿಳಿಸಿದೆ ಅದನ್ನು ತಮ್ಮ ಬರವಣಿಗೆಯ ಮೂಲಕ ಜನರಿಗೆ ತಲುಪಿಸುವ ಸಲುವಾಗಿ ಈ ಪುಸ್ತಕ ಬರೆದಿದ್ದಾರೆ.

ಸುರೇಶ ಭಟ್ ಬಾಕ್ರಬೈಲು ರವರು ಈ ಪುಸ್ತಕದಲ್ಲಿ “ವೈದಿಕ ಆರ್ಯರು ಭಾರತದ ಮೂಲನಿವಾಸಿಗಳಲ್ಲ, ವಲಸಿಗರು”
ಎಂಬ ಲೇಖನದ ಶಿರ್ಶಿಕೆ ಕೊಡುವುದರ ಮೂಲಕನೇ ಸತ್ಯವನ್ನು ಓದುಗರಿಗೆ ಬಹಳಷ್ಟು ಕುತೂಹಲ ಮೂಡಿಸಿದ್ದಾರೆ. ಆರ್ಯರು ಯಾರು? ಎಂಬುದನ್ನು ತಿಳಿಸುತ್ತಾರೆ.
ಹಾಗೂ ದ್ರಾವಿಡರು ಎಲ್ಲಿಯವರು ಅವರು ಈ ಭರತಖಂಡಕ್ಕೆ ಹೇಗ ಮೂಲನಿವಾಸಿ ಆಗಿದ್ದಾರೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಸುರೇಶ ಭಟ್ಟ ಬಾಕ್ರಬೈಲ್ ಅವರ ಬರವಣಿಗೆಯಲ್ಲಿ ಒಂದನ್ನು ಸ್ಪಷ್ಟ ಪಡಿಸುತ್ತಾರೆ. ಏನೆಂದರೆ,
“ಇನ್ನು ‘ಆರ್ಯ’, ‘ದ್ರಾವಿಡ’ ಎಂಬ ವ್ಯತ್ಯಾಸಗಳ ಬಗ್ಗೆ. ಎಲ್ಲರೂ ಗಮನಿಸಬೇಕಿರುವ ಅಂಶವೆಂದರೆ ಇವೆರಡೂ ಭಾಷೆಗೆ ಸಂಬಂಧಪಟ್ಟ ಪದಗಳೇ ಹೊರತು ಜನಾಂಗಕ್ಕೆ ಸಂಬಂಧಪಟ್ಟವು ಅಲ್ಲ. ಅಂದರೆ ‘ದ್ರಾವಿಡ’ ಭಾಷೆಗಳನ್ನಾಡುವ ಜನರು ಮತ್ತು ‘ಆರ್ಯ’ ( ಇಂಡೋ – ಯುರೋಪಿಯನ್ ಕುಟುಂಬಕ್ಕೆ ಸೇರಿದ) ಭಾಷೆಗಳನ್ನಾಡುವ ಜನರು. ‘ಆರ್ಯ’ ಜನಾಂಗ ಅಥವಾ ‘ದ್ರಾವಿಡ’ ಜನಾಂಗ ಎನ್ನುವುದು ತಪ್ಪಾಗುತ್ತದೆ.” ಎಂದು ಹೇಳುತ್ತಾರೆ.
ಈ ಮೇಲಿನ ವಾಕ್ಯದಲ್ಲಿ ಜನರಿಗೆ ಪ್ರಸ್ತುತ ಸಮಯದಲ್ಲಿ ಆರ್ಯರು ಅಂದರೆ ಅಂದೊಂದು ಜನಾಂಗ ಇದೆ. ಹಾಗೂ ದ್ರಾವಿಡ ಎಂದರೆ ಇನ್ನೊಂದು ಜನಾಂಗ ಇದೆ. ಎಂದು ಎಷ್ಟೋ ಜನಕ್ಕೆ ಇರುವ ತಪ್ಪು ಕಲ್ಪನೆ ಇದ್ದು, ಅದನ್ನು ಒಪ್ಪಿಕೊಂಡವರು ಇದ್ದಾರೆ. ಜನರು ತಮ್ಮ ತಪ್ಪು ಕಲ್ಪನೆಯನ್ನು ಸರಿಪಡಿಸಿಕೊಳ್ಳಲು ಅನು ಆಗಿದೆ ಎಂದು ಹೇಳಬಹುದು.

ಈ ಪುಸ್ತಕ ದಲ್ಲಿ,
“ಈ ಸಿಂಧೂ ನಾಗರಿಕತೆಯ ರಾಖಿಗರಿ ಪಟ್ಟಣದಲ್ಲಿ ದೊರೆತ ಅವಶೇಷಗಳು. ಈ ಸಂಶೋಧನೆಯನ್ನು ಮಾಡಿದವರು ಡಾ. ವಸಂತ ಶಿವರಾಮ ಶಿಂಧೆಯವರು. ಇವರು ಪುಣೆಯ ಡೆಕ್ಕನ್ ಕಾಲೇಜಿನ ಉಪಕುಲಪತಿಗಳು ಹಾಗೂ ಪ್ರಾಕ್ತನ ಶಾಸ್ತ್ರಜ್ಞರು. ಇವರು ತಂಡವು 2015 ಮಾರ್ಚ್ 11 ಮದು ರಾಖಿಗಹ್ರಿಯಲ್ಲಿ ಇಬ್ಬರು ಪುರುಷರದು, ಒಂದು ಸ್ತ್ರೀಯದು ಮತ್ತು ಒಂದು ಮಗುವಿನದು ಸೇರಿ ಒಟ್ಟು ನಾಲ್ಕು ಮಾನವ ಅವಶೇಷಗಳನ್ನು ಪತ್ತೆಹಚ್ಚಿದೆ. ಅವರಲ್ಲೊಂದು ಪುರುಷ ಅಸ್ಥಿಪಂಜರ ಸುಮಾರು 4500 ವರ್ಷಗಳಷ್ಟು ಹಿಂದಿನದು ಎನ್ನಲಾಗಿದೆ. ಆತನ ವಂಶವಾಹಿಗಳಲ್ಲಿ ಸ್ಟೆಪ್ಪಿಯ ಜನ ( ಆರ್ಯ ಭಾಷಿಕರು) ಕುರುಹುಗಳು ಇಲ್ಲವೆಂದು ಖಚಿತವಾಗಿ ಹೇಳುತ್ತವೆ! ಪರೀಕ್ಷೆಗಳ ಫಲವಾಗಿ ತುರಾನ್ ಮೂವರು ವ್ಯಕ್ತಿಗಳ ವಂಶವಾಹಿ ಸ್ವರೂಪ ಸಿಂಧೂ ಕಣಿವೆಯ ಹೆಚ್ಚಿನವರು ವಂಶವಾಹಿ ಸ್ವರೂಪವನ್ನು ಹೋಲುವ ವಿಷಯದಲ್ಲಿಯೂ ಖಚಿತ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿದೆ.” ಎಂದು ಸುರೇಶ ಭಟ್ ಬಾಕ್ರಬೈಲ್ ಅವರು ಈ ಪುಸ್ತಕ ದಲ್ಲಿ ಹಂಚಿಕೊಡಿದ್ದಾರೆ.

ಇಷ್ಟು ಸಾಕು ಅನಿಸುತ್ತೆ ಈ ಸಂಘ ಪರಿವಾರದವರ ಬುಡು ಬೇರು ನಡುಗಿಸಿ ಈ ದೇಶದ ಮೂಲನಿವಾಸಿಗಳು ಯಾರು ಎಂಬುದನ್ನು ತಿಳಿದು ಕೊಳ್ಳಬಹುದು.

ನನ್ನ ಸಂಸ್ಕೃತಿಗಳು, ನನ್ನ ಭಾಷೆ, ಆಚಾರ- ವಿಚಾರ, ಆಹಾರ ಪದ್ದತಿ, ಉಡುಗೆ ತೊಡುಗೆ ಮುಂತಾದವುಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಆದರೆ, ಯಾರದೋ ಬೆಳೆ ಬೆಯಿಸಿಕೊಳ್ಳಲು ಬೇರೆ ಯಾರನ್ನು ತುಳಿಯೋದು, ಬಡವರು ಬಡವರಾಗಿಯೇ ಉಳಿಬೇಕು, ಶ್ರೀಮಂತ ಶ್ರೀಮಂತ ರಾಗಿಯೇ ಉಳಿಬೇಕು ಅನ್ನೊದಕೊಸ್ಕರ ಇಲ್ಲ ಸಲ್ಲದನ್ನು ತುಳಿತಕೊಳಗಾದವರ ಮೇಲೆ ಹೇರುವುದು, ಹಾಗೆ ಅಧಿಕಾರ ಚಲಾಯಿಸಬೇಕು ಎನ್ನುವ ಅಜಂಡಾವನ್ನು ಈ ಸಂಘ ಪರಿವಾರದವರು ಮಾಡತಿದ್ದಾರೆ ಎಂದು ಹೇಳಬಹುದು. ಈ ದೇಶದ ಜನರ ಮೂಲ ಗೋತ್ತಾಗಲೇಬಾರದು, ಇದಕ್ಕೆ ಪರ್ಯಾಯವಾಗಿ ಆರ್ಯರು ಬಂದಿದಾರೆ ಎಂದು ಮೂಲಭೂತವಾದ ಸಾಬೀತು ಪಡಿಸಲು ಸರ್ಕಾರವು ಈ ಸಂಘ ಪರಿವಾರದೊಂದಿಗೆ ಜೊತೆಗೆ ನಿಂತಿದೆ. ಎಂದು ಈ ಪುಸ್ತಕ ಓದಿದ ಮೇಲೆ ಗೋತ್ತಾಗುತ್ತದೆ.

ಲಕ್ಷ್ಮೀಪತಿ ಕೋಲಾರ ರವರ ಬರವಣಿಗೆ ನನಗೆ ಬಹಳಷ್ಟು ಕುತೂಹಲಕಾರಿಯಾಗಿ ಓದಲು ಪ್ರಚೋದಿಸಿರುವ ಬರಹೆಂದು ಹೇಳುತ್ತೇನೆ. ಮಾನವ ಜೀವಿಯ ಮೂಲ ಎಲ್ಲಿದೆ? ಎಂಬುದನ್ನು ಈ ಪುಟ್ಟ ಪುಸ್ತಕದಲ್ಲಿ ತಿಳಿಸಿದ್ದಾರೆ.

ಇವರ ಬರಹದಲ್ಲಿ ಹಿಂದೂ ಪದ ಬಂದಿದ್ದು ಹೇಗೆ? ಅದರ ಮೂಲ ಏನು? ಎಂಬುದನ್ನು ಈ ಪುಸ್ತಕದಲ್ಲಿ ಜನರಿಗೆ ಇರುವ ಗೊಂದಲವನ್ನು ಬಗೆಹರಿಸುತ್ತಾರೆ.

ನನಗೆ ಇವರ ಈ ಪುಸ್ತಕದಲ್ಲಿ ಒಂದು ಸಾಲು ಬರುತ್ತದೆ.” ಜಾತಿಯನ್ನಷ್ಟೇ ಅಲ್ಲದೆ ಜನಾಂಗವಾದೀ ಶ್ರೇಷ್ಠತೆಯನ್ನು ಮುರಿದಿಕ್ಕಿ ಮುಂದಿರುವರೆಯಬಲ್ಲ ಶಕ್ತಿ ಈ ಲೈಂಗಿಕತೆಗಿದೆ.” ಎಂದು ಹೇಳಿದ್ದಾರೆ.

ಬಹಳಷ್ಟು ನನ್ನ ಮನಕ್ಕೆ ತಾಕೀತು ಯಾಕೆಂದರೆ ಶ್ರೇಷ್ಠ ಕನಿಷ್ಟ ಬರುವುದಿಲ್ಲ ಲೈಂಗಿಕತೆ ಎಂದು.
ಇವರು ಪೂರ್ತಿ ಇತಿಹಾಸವನ್ನು ತೆರೆದಿಟ್ಟಿದ್ದಾರೆ.
ಎಲ್ಲಾ ಸಂಶೋಧನೆಯ ವರದಿಗಳ ಮೂಲಕ.
ಎಲ್ಲರೂ ಈ ಪುಸ್ತಕದಿಂದ ಬಹಳಷ್ಟು ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ನನಗೆ ಅನಿಸುತ್ತದೆ.

Book review by:M ahesh Kevantagi