
-ರೇಣುಕಾ ಹನ್ನುರ್ ಕಲಬುರಗಿ
ಬೆತ್ತಲೆ ವೃಕ್ಷ (ಭಾರತ ಲೈಂಗಿಕ ಜಗತ್ತಿನ ಸಾಂಸ್ಕೃತಿಕ, ಚಾರಿತ್ರಿಕ ಸಂಕಥನ )-ಡಾ ಸಿ ಜಿ ಲಕ್ಷ್ಮಿಪತಿ.
‘ಬೆತ್ತಲೆ ವೃಕ್ಷ ‘ಭಾರತ ಲೈಂಗಿಕ ಜಗತ್ತಿನ ಸಾಂಸ್ಕೃತಿಕ, ಚಾರಿತ್ರಿಕ ಸಂಕಥನದ ಬರಹಗಾರರು ಲೇಖಕರು ಆದ -ಡಾ ಸಿ ಜಿ ಲಕ್ಷ್ಮಿಪತಿ ಅವರು ಸಮಾಜ ಶಾಸ್ತ್ರದ ಉಪನ್ಯಾಸಕರಾಗಿದ್ದು ಪ್ರವಾಸ ಕಥನ, ಜ್ಯಾತಿ ಸಂಕಥನ, ಮತ್ತು ಭಾರತ ಲೈಂಗಿಕ ಜಗತ್ತಿನ ಸಾಂಸ್ಕೃತಿಕ, ಚಾರಿತ್ರಿಕ ಸಂಕಥನ ಇನ್ನು ಹಲವು ಬರಹಗಳನ್ನು ಬರದಿದ್ದು ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆ ಈ ವಿಷಯದ ಮೇಲೆ ಪ್ರಭಂದ ಮಂಡಿಸಿದ್ದಾರೆ.’ಬೆತ್ತಲೆ ವೃಕ್ಷ ‘ಭಾರತ ಲೈಂಗಿಕ ಜಗತ್ತಿನ ಸಾಂಸ್ಕೃತಿಕ, ಚಾರಿತ್ರಿಕ ಸಂಕಥನ ಈ ಪುಸ್ತಕವು ಸಖಿ ಪ್ರಕಾಶನದ ಮೂಲಕ 2007ರಲ್ಲಿ ಮೊದಲ ಮುದ್ರಣಗೊಂಡಿದೆ.
ಈ ಕೃತಿಯು ಭಾರತದಲ್ಲಿನ ಲೈಂಗಿಕತೆಯಲ್ಲಿನ ರಾಜಕೀಯ, ಮುಜುಗರ, ಮತ್ತು ಸೀಮಿತತೆಯನ್ನು ಜಗತ್ತಿನ ಅಂದ್ರೆ ಇನ್ನು ಹಲವಾರು ದೇಶಗಳ ಲೈಂಗಿತೆಯ ವಿಚಾರಾಧಾರೆಗಳಲ್ಲಿನ ವ್ಯತ್ಯಾಸವನ್ನು ಜೊತೆಗೆ ಬೇರೆ ಬೇರೆ ಬರಹಗಾರರು ಕಾಮ ಶಾಸ್ತ್ರದ ಕುರಿತಾಗಿ ಅಧ್ಯಯನ ಮಾಡಿದನ್ನು ಹೋಲಿಕೆ ಮಾಡಿ ಬರ್ದಿದ್ದಾರೆ ಲೇಖಕರು.
ಲೈಂಗಿಕತೆಯಲ್ಲಿ ಇರುವ ರಾಜಕೀಯವು ಬಹಳ ಅರ್ಥವಾಗುತ್ತೆ ಮತ್ತು ಈ ಪುಸ್ತಕ ಓದುವದು ಅನಿವಾರ್ಯತೇ ಇದೆ.ಕಾರಣ ಲೈಂಗಿಕ ಶಿಕ್ಷಣ ಕುರಿತು ನಮ್ಮ ನಮ್ಮ ಶಾಲೆಗಳಲ್ಲಿ ಮತ್ತು ಕುಟುಂಬದಲ್ಲಿ ಮಾತಾಡುವದಿಲ್ಲ ಕಾರಣ ಅದೊಂದು ನಿಶಿದ್ದ ಹೇರಲ್ಪಟ್ಟ ವಿಷಯ ಮತ್ತು ವಿಚಾರಧಾರೆಯಾಗಿದೆ ಎಂದು ಹೇಳಬಹುದು. ಆ ಕಾರಣಕ್ಕೆ ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೆ ಕಡಿವಾಣ ಎಂಬುವದಿಲ್ಲ ಎಂದು ಹೇಳಬಹುದು ನಾವು ಕೇವಲ ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೆ ಕಡಿವಾಣ ಹಾಕುವ ಕಾರಣಕ್ಕೆ ಲೈಂಗಿಕತೆಯ ಶಿಕ್ಷಣ ತಿಳಿದುಕೊಳ್ಳಬೇಕು ಎನ್ನುವದು ತಪ್ಪಾಗುತ್ತೆ.
ಲೈಂಗಿಕ ವಿಷಯವು ಹೆಚ್ಚಿಗೆ ಮಹಿಳಾ ಆರೋಗ್ಯ ದೃಷ್ಟಿಕೋನಕ್ಕಾಗಿ ಹಾಗೂ ಪುರುಷರ ಆರೋಗ್ಯ ದೃಷ್ಟಿಕೋನ ದಿಂದಲೂ ಮತ್ತು ಲೈಂಗಿಕಕತೆಯಲ್ಲಿನ ಮೌಢ್ಯ ಆಚರಣೆ ಮತ್ತು ಅದಕ್ಕೂ ಬಲಿಯಾಗುವದು ಹೆಣ್ಣೇ ಆ ಕಾರಣಕ್ಕಾಗಿ ಲೈಂಗಿಕಕತೆಯ ವಿಷಯ ಮುಕ್ತವಾಗಿ ಚರ್ಚಿಸಬೇಕಾದ ಅನಿವಾರ್ಯ ಮತ್ತು ಅವಶ್ಯವಾಗಿದೆ.
ಹೆಣ್ಣಾದವಳು ಪ್ರತಿಯೊಂದು ಕಾರಣಕ್ಕೂ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾಳೆ ಉದಾಹರಣೆಗೆ ಜ್ಯಾತಿ, ಧರ್ಮ, ಲಿಂಗ, ವರ್ಗ, ಬಣ್ಣ, ಆಕಾರ ಇನ್ನಿತರ ಕಾರಣಕ್ಕೆ ದೌರ್ಜನ್ಕ್ಕೆ ಮೊದಲ ಬಲಿ ಪಶು ಹೆಣ್ಣೇ ಆಗಿದ್ದಾಳೆ ಇಷ್ಟೇ ಅವಳು ಹೆಣ್ಣು . ದೌರ್ಜನ್ಯಗಳ ಸಾಲಿನಲ್ಲಿ ಲೈಂಗಿಕ ದೌರ್ಜನ್ಯವು ಹೊರೆತು ಪಡಿಸಿಲ್ಲ . ಹಾಗೆಯೇ ಯುನಿ ಪೂಜೆ, ಸ್ತ್ರೀ ಪೂಜೆ, ದೇವದಾಸಿ ಇನ್ನು ಮದುವೆ ಇನ್ನಿತರ ವಿಚಾರಕ್ಕೆ ಹೆಣ್ಣು ದೌರ್ಜನ್ಯ ಒಳಗಾಗುತ್ತಾಳೆ ಒಳಗಾಗುತ್ತಲೇ ಇದ್ದಾಳೆ. ಹೆಣ್ಣಿಗೆ ಹುಟ್ಟಿನಿಂದಲೇ ಎಲ್ಲದರಲ್ಲೂ ಹಿಂದೆ ದುಡುತ್ತಲ್ಲೆ ಬಂದಿದ್ದಾರೆ ಅದೇ ರೀತಿಯಲ್ಲಿ ಲೈಂಗಿಕಕತೆಯಲ್ಲಿಯು ಮಹಿಳೆಯು ಮುಕ್ತವಾಗಿ ಮಾತನಾಡುವಂತಿಲ್ಲ ಮಾತನಾಡಿದರೆ ಅವಳು ನಾಚಿಕೆ ಬಿಟ್ಟವಳು ಅನ್ನೋ ಪಟ್ಟ. ಅವಳ ಆಸೆ ಆಕಾಂಕ್ಷೆಗೆ ಇಲ್ಲಿ ಎಳ್ಳಷ್ಟೂ ಬೆಲೆ ಇಲ್ಲ ಗಂಡ ಅಥವಾ ಗಂಡಸು ಅನಿಸಿಕೊಂಡವನ ನಿರ್ಣಯವೆ ಅಂತಿಮವಿಲ್ಲಿ.
ನನಗೆ ಈ ಪುಸ್ತಕದಲ್ಲಿ ಆಶ್ಚರ್ಯ ತಂದ ವಿಷಯ ಎಂದರೇ ದೇಶಕ್ಕೆ ಮಹಾತ್ಮರೇನಿಸಿಕೊಂಡ ಗಾಂಧೀಜಿ ಅವರು ಲೈಂಗಿಕ ಜೀವನದ ಕುರಿತು ಹೇಳಿದ್ದಾರೆ, ಮತ್ತು ರಜನಿಶ್ ಎಂಬ ಸನ್ಯಾಸಿಯು ಕಾಮದ ಕುರಿತಾಗಿ ಲೈಂಗಿಕತೆಯಲ್ಲಿ ಇರುವ ಮೂಢ ನಂಬಿಕೆಗಳ ಕುರಿತು ಓಪನ್ ಹೇಳ್ಳಿದ್ದ ಆಶ್ಚರ್ಯ ಎನಿಸಿದೆ. ಮತ್ತು ಲೇಖಕರು ಅಂಕಣ ಬರೆಯುವಾಗ ಹಲವಾರು ಮಹಿಳಾ ಪರ ಸಂಘಟನೆಗಳಿಂದ ಎಚ್ಚರಿಕೆಗಳನ್ನು ಬಂದಿದ್ದರು ಈ ಕೃತಿಯು ಪ್ರಕಟಿಸಿದ್ದು ಖುಷಿ ಎನಿಸಿದೆ.
ಬೆತ್ತಲೆ ವೃಕ್ಷವು ಮೌಢ್ಯ ಆಚರಣೆ, ಮಹಿಳಾ ಆನಾರೋಗ್ಯ್ ದೌರ್ಜನ್ಯ, ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ ಓದಬೇಕು ಇಲ್ಲಿ ಮುಕ್ತತೇಗೆ ಪ್ರಾಮುಖ್ಯತೆ ಪಡೆಯುತ್ತದೆ. ಈ ಕೃತಿಯಲ್ಲಿನ ವಿಷಯದ ಆಳ ಅಗಲ ಎಲ್ಲವೂ ಕೇವಲ ನನ್ನ ಬರಹ ಮತ್ತು ಕೆಲವು ಮಾತುಗಳಲ್ಲಿ ಸಾದರ ಪಡಿಸುವೆ ಎಂದು ಹೇಳಲು ಆಗದು ಆದರೂ ಪುಸ್ತಕದೊಳಗಿನ ವಿಷಯ ಎಲ್ಲಾ ಅಲ್ಲದೆ ಹೋದರು ಅರ್ಧದಷ್ಟು ವಿಷಯವು ಮಸ್ತಕದಲ್ಲಿದೆ ಜೊತೆಗೆ ವಿಷಯದ ಆಳ ಅರ್ಥ ಆಗಿದೆ ಆದರೆ ಬರಹದ ಸಾಲಿನಲ್ಲಿ ತರಲು ಸಾಧ್ಯವಾಗಿದ್ದು ಕೆಲವಂದಸ್ಟೇ ಎಂದಿನಿಸುತ್ತಿದೆ ನನಗೆ.
-ರೇಣುಕಾ ಹನ್ನುರ್ ಕಲಬುರಗಿ
