
ಕಾಶಿನಾಥ ಮುದ್ದಾಗೋಳ ಕಲಬುರ್ಗಿ.
ಪುಸ್ತಕ:ಶರಣ ಬಂಡಾಯ. ಲೇಖಕರು:ಡಾ ಸರಜೂ ಕಾಟ್ಕರ್.
ಡಾ ಸರಜೂ ಕಾಟ್ಕರ್ ರವರು ಬರೆದ ಶರಣ ಬಂಡಾಯ ಈ ಪುಸ್ತಕವು 20೦3ರಲ್ಲಿ ಪ್ರಕಟಗೊಂಡಿದೆ ಕರ್ನಾಟಕದಲ್ಲಿ ಅಥವಾ ಕನ್ನಡದಲ್ಲಿ ಬಂಡಾಯ ಸಾಹಿತ್ಯ ಆರಂಭಗೊಂಡ ಕಾಲಘಟ್ಟ 12ನೇ ಶತಮಾನ ವಚನಗಳ ಮೂಲಕ ಆಗಿನ ವ್ಯವಸ್ಥೆಯ ವಿರುದ್ಧ ಬಸವಾದಿ ಶರಣರು ದಂಗೆ ಎದ್ದರೂ ತುಂಬು ಮೂಢನಂಬಿಕೆ,ಮೌಡ್ಯತೆ,ಅಸಮಾನತೆ,ಅವೈಜ್ಞಾನಿಕ ವರ್ಣಶ್ರಮ ವ್ಯವಸ್ಥೆಯ ಕಾಲದಲ್ಲಿ ಕೆಲವೇ ಕೆಲವು ಜನರು ಸೇರಿ ಸಮಾನ ಆಲೋಚನೆಯುಳ್ಳವರು ಮತ್ತು ವ್ಯವಸ್ಥೆಯಿಂದ ನಷ್ಟಕ್ಕೆ ಒಳಗಾದವರು ಅಥವಾ ಅಪಮಾನ ಕೊಳಗಾದವರು ವಚನಗಳ ಮೂಲಕ ಜಾತಿಯತೆ, ಮೈಗಳ್ಳುತನದ ಪುರೋಹಿತ ಶಾಹಿಯ ವಿರುದ್ಧ ಎಲ್ಲಾ ತಳ ಸಮುದಾಯದಶ್ರಮಜೀವಿಗಳು ಬಂಡಾಯ ವೆದ್ದ ಕಾಲವೇ ವಚನ ಚಳುವಳಿ,ಬಸವ ಯುಗ,ಶರಣ ಬಂಡಾಯ ಕಾಲ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಟ್ಟಿದೆ.
ಪ್ರಸಕ್ತ ದಿನಮಾನಗಳು ನೋಡಿದರೆ ಪುರೋಹಿತ ವಾದ ಸನಾತನವಾದ ಏನು ಹೇಗೆ ಎಂಬುದರ ಅರ್ಥವಾಗುತ್ತದೆ ಆದರೆ ಇದಕ್ಕೂ ಮುಂಚಿನ 800 ವರ್ಷಗಳ ಹಿಂದೆ ಹೇಗಿರಬಹುದು ಎಂದು ನಾವು ಊಹಿಸಿದರೆ ಅರ್ಥವಾಗುತ್ತದೆ. ಅಂತಹ ಪರಿಸರದಲ್ಲಿದ್ದು ವೇದ, ಆಗಮ, ಶಾಸ್ತ್ರ ,ಪುರಾಣಗಳನ್ನ ಅಲ್ಲ ಗಳೆದು ವಚನಗಳ ಬರೆದು ಅವುಗಳನ್ನು ಅನುಕರಣೆಗೆ ತಂದ ಕೀರ್ತಿ ಬಸವಾಧೀಶ ಶರಣರಿಗೆ ಸಲ್ಲುತ್ತದೆ “ನುಡಿಗೆ ತಕ್ಕ ನಡೆ ಕಂಡರೆ ಕೂಡಲಸಂಗಮದೇವ ನೊಳಗಿಪ್ಪನಯ್ಯ” ಎಂದು ಬಸವಣ್ಣನವರು ಹೇಳುತ್ತಾರೆ. ಜನರು ತಮ್ಮ ಜೀವನದುದ್ದಕ್ಕೂ ಪಾಪ-ಪುಣ್ಯ ಸ್ವರ್ಗ-ನರಕ ದೇವರು-ಧರ್ಮ ಉಚ್ಚ-ನೀಚ ಎಂಬ ಅಂದಾಚರಣೆಯಲ್ಲಿ ಮುಳುಗಿರುವಾಗ ಅಲ್ಲಮ,ಬಸವ, ಅಕ್ಕಮಹಾದೇವಿ,ಸತ್ಯಕ್ಕ,ಸಿದ್ದರಾಮ, ಚನ್ನಬಸವಣ್ಣನವರು ಸೇರಿದಂತೆ ಅನೇಕವಚನಕಾರರು ಈ ಕುರಿತು ಬಹು ಸಂಖ್ಯಾತರ ಪರ ಧನಿಯೆತ್ತಿ ಕೈಲಾಸವನ್ನು ಅಲ್ಲಗಳೆದು “ಕಾಯಕವೇ ಕೈಲಾಸ” “ಅಯ್ಯಾಎಂದೆಡೆ ಸ್ವರ್ಗ ಎಲ್ಲೋ ಎಂದೆಡೆ ನರಕ”ಮತ್ತು “ಆಚಾರವೇ ಸ್ವರ್ಗ ಅನಾಚಾರವೇ ನರಕ” ಎಂಬತಮ್ಮ ವಚನದ ಸಾಲುಗಳ ಮೂಲಕ ಜನರಿಗೆ “ಅರಿವೇ ಗುರು”ಎಂಬ ಮಾರ್ಗ ತೋರಿದರು “ಸ್ಥಾವರಕ್ಕಳಿಂಟು ಜಂಗಮಕ್ಕಳಿವಿಲ್ಲ”ಎಂದು ಹೇಳುತ್ತಾ ಬಹುದೇವತಾರಾದನೆಯನ್ನ ವಿರೋಧಿಸಿ ಏಕದೇವೋಪಾಸನೆಗೆ ಹೆಚ್ಚು ಹೊತ್ತು ಕೊಟ್ಟರು ಅಸಮಾನತೆಯಿಂದ ಕೂಡಿರುವ ಧರ್ಮದ ವ್ಯವಸ್ಥೆ ಬಿಟ್ಟು ಬಂದವರಿಗೆ ಪರ್ಯಾಯವಾಗಿ ಹೊಸ ಶರಣರ ಧರ್ಮ ರಚನೆ ಮಾಡಲು ಸಾಧ್ಯವಾಯಿತು ಸಮಾನತೆಗಳನ್ನ ಅಲ್ಲಗಳೇಯುವ ಸಮಾನತೆಯನ್ನು ಸಾರುವ ಹಾಗೂ ಕೂಡಿಡುವುದನ್ನ ನಿರಾಕರಿಸಿ ಸಮರ್ಪಣ ಭಾವದಿ, ದಾಸೋಹಕ್ಕೆ ಅರ್ಪಿಸುವಂತಹ ವ್ಯವಸ್ಥೆ ಹುಟ್ಟು ಹಾಕಲು ಬಂಡಾಯವನ್ನು ಹುಟ್ಟು ಹಾಕಿದ 12ನೆಯ ಶತಮಾನದ ವಚನಕಾರರು ಕಾಯಕ ಜೀವಿಗಳು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ. ಒಟ್ಟಿನಲ್ಲಿ ಡಾ ಸರಜೂ ಕಾಟ್ಕರ್ ರವರ ಈ ಹೊತ್ತಿಗೆಯನ್ನು ಒಳ್ಳೆಯ ಆಶಯದ ಮೇರೆಗೆ ಸುವಿಸ್ತಾರ ವಿವರಣೆ ನೀಡುತ್ತಾ “ಶರಣಬಂಡಾಯ”ದ ಚಿಕ್ಕಚಿತ್ರಣ ನೋಟ ನೀಡಿದ್ದಾರೆ. ಕೊನೆಯಲ್ಲಿ ಬರುವ ಕಿರಿಯರಾದಡೇನು? ಹಿರಿಯರಾದಡೇನು ?ಅರಿವಿಂಗೆ ಹಿರಿದು ಕಿರಿದುಂಟೆ? ಎಂಬ ಮಾತು ತುಂಬಾ ಅರ್ಥಗರ್ಭಿತವಾದದ್ದು.
ಕಾಶಿನಾಥ ಮುದ್ದಾಗೋಳ ಕಲಬುರ್ಗಿ.
