ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪೌರಾಯುಕ್ತರಿಗೆ ಮನವಿ
ಬಜೆಟ್ ನಲ್ಲಿ 5 ಲಕ್ಷ ರೂಪಾಯಿ ಮೀಸಲಿಡಿ

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಜಿಲ್ಲಾ ಕೇಂದ್ರದ ಪತ್ರಕರ್ತರಿಗೆ ವೈದ್ಯಕೀಯ ನಿಧಿಯಡಿ ನಗರಸಭೆಯ 2026-2027 ಸಾಲಿನ ಬಜೆಟ್ ನಲ್ಲಿ 5 ಲಕ್ಷ ರೂಪಾಯಿ ಮೀಸಲಿಡುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪೌರಾಯುಕ್ತ ಉಮೇಶ್ ಚವ್ಹಾಣ ಅವರಿಗೆ ಮನವಿ ಸಲ್ಲಿಸಲಾಯಿತು.
ಬಜೆಟ್ ನಲ್ಲಿ ಪ್ರತಿವರ್ಷ ಪತ್ರಕರ್ತರು ಮತ್ತು ಅವರ ಕುಟುಂಬದ ಸದಸ್ಯರು ಚಿಕಿತ್ಸೆ ಪಡೆಯಲು ಅನುದಾನ ಬಜೆಟ್ ನಲ್ಲಿ ಮೀಸಲು ಇಡಲಾಗುತ್ತದೆ. ಇದನ್ನು ಈ ಬಾರಿಯೂ ಕೂಡ ಮುಂದುವರೆಯಿಸಬೇಕು ಎಂದುರು.
ಪತ್ರಕರ್ತರು ತಮ್ಮ ಜೀವಸ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಆರೋಗ್ಯ ಸಮಸ್ಯೆ ಉಂಟಾದಾಗ ನಗರಸಭೆಯ ನಿಧಿಯಡಿ ಇರುವ ಆರ್ಥಿಕ ನೆರವಿನಿಂದ ಸಾಕಷ್ಟು ಅನುಕೂಲವಾಗುತ್ತದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಪತ್ರಕರ್ತರ ಸೇವೆ ಅನನ್ಯವಾಗಿದೆ. ಸರಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಘದ ವತಿಯಿಂದ ಇದೇ ವೇಳೆ ಪೌರಾಯುಕ್ತರಿಗೆ ಕೋರಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ರಾಜ್ಯ ಪರಿಷತ್ ಸದಸ್ಯ ಸಾಗರ್ ದೇಸಾಯಿ, ಜಿಲ್ಲಾ ಖಜಾಂಚಿ ರಾಜು ನಲ್ಲಿನಕರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆನಂದ ಗೋರ್ಕಲ್, ವಡಗೇರಾ ತಾಲ್ಲೂಕು ಅಧ್ಯಕ್ಷ ನಾಗಪ್ಪ ಕುಂಬಾರ ನಾಯ್ಕಲ್, ಪತ್ರಕರ್ತರಾದ ಗಣೇಶ್ ಪಾಟೀಲ್, ನಾಗರಾಜ ಮುಗದುಮ್, ಭೀರಲಿಂಗಪ್ಪ ಕಿಲ್ಲನಕೇರಾ ಇದ್ದರು.
