ನಮನ ಕಲೆಗಾರ ಹೊಯ್ಸಳ- ಕೆಳದಿ ಚನ್ನಮ್ಮ  ಪ್ರಶಸ್ತಿಗೆ ಆಯ್ಕೆ

By admin

ನಮನ ಕಲೆಗಾರ ಹೊಯ್ಸಳ- ಕೆಳದಿ ಚನ್ನಮ್ಮ  ಪ್ರಶಸ್ತಿಗೆ ಆಯ್ಕೆ

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ವತಿಯಿಂದ ನೀಡುವ 2025-26ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪ್ರಶಸ್ತಿಗೆ ಕಿರಿಯ ಕಲಾವಿದೆ ನಮನ ಬಿ.ಕಲೆಗಾರ ಆಯ್ಕೆಯಾಗಿದ್ದಾರೆ.

ಜಿಲ್ಲೆಯಲ್ಲಿ ಅಸಾಧಾರಣ ಸಾಧನೆ ಮಾಡಿದ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆಯುಳ್ಳ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.‌ ಜತೆಗೆ ರೂ.10,000 ಬಹುಮಾನ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಪ್ರಶಸ್ತಿಗೆ ನಮನ ಬಿ.ಕಲೆಗಾರ ಸೇರಿ ಒಟ್ಟು 8 ಮಕ್ಕಳು ಆಯ್ಕೆಗೊಂಡಿದ್ದಾರೆ.