ಕಿಷ್ಕಿಂಧಕಾಂಡ ರಾಮಾಯಣ ಭಾಗ-45

By admin


ಕುತೂಹಲದಿ ಬಳಿ ಕುಳಿತ ವಾನರರ ನೋಡಿI
ಸಂಪತಿ ವಾನರ ವ ಅಂಗದನಿಗೆ ನುಡಿದ: II
“ಓ ವಾನರರೇ, ಮೈಥೇಲಿ ವಿಷಯ ತಿಳಿದ ಬಗ್ಗೆ,I
ಹೇಳುವೆ ಕೇಳಿರಿ ವಿಸ್ತಾರವಾಗಿ ನಿಮಗೆ; II
ಓ ಅಂಗದಾ, ಪಕ್ಕ-ಸುಟ್ಟುಕೊಂಡು ನಾ ವಿಂಧ್ಯಪರ್ತದಲಿ I
ಬಿದ್ದಾಗ, ಪ್ರಜ್ಞಾಹೀನತೆಯಲಿ ಕಳೆದೆ ಆರು ದಿನ ಅಲ್ಲಿ; II
ನನಗೆ ದಿಕ್ಕ ತೋಚದೆ, ಸಂಪೂರ್ಣ ಅಸಹಾಯಕ ಸ್ಥಿತಿ, I
ಪ್ರಜ್ಞೆ ಬಂದಾಗ ನೋಡಿದೆ ಪರ್ವತ, ನದಿ, ಮಹಾಸಾಗರಗಳ; II
ಪಕ್ಷಿ ಹಿಂಡು,ಮೊನಚಾದ ಶಿಖರ, ಕಂದಕ ಗವಿಗಳು ಕಂಡುI
ದಕ್ಷಿಣ ಮಹಾಸಾಗರತೀರದ ವಿಂಧ್ಯ ಪರ್ವತವೆಂದು ಭಾವಿಸಿದೆ; II
ಹತ್ತಿರದಲಿ ಮುನಿ ನಿಶಾಕರ ಆಶ್ರಮ ಕಂಡೆ,I
ನಿಶಾಕರ ಮುನಿ ಹತ್ತಿರ ಎಂಟು ವರ್ಷ ಆ ಪರ್ವತದಲಿದ್ದೆ;II
ನಿಶಾಕರ ಮುನಿ ಬಳಿ ಹೋಗಲು ಬಯಸಿದೆ,I
ಜಟಾಯು ವ ನಾನು ಹೋಗಿದ್ದೆವು ಮುನಿಬಳೀ ಹಿಂದೆ; II
ಸದಾ ಹೂ ಹಣ್ಣು ಸುಗಂಧಭರಿತ ಮುನಿ ಆಶ್ರಮ, I
ಮುನಿ ಆಶ್ರಮ ಬಳಿ ಹೋದೆ, ದರ್ಶನ ಪಡೆಯಲು;II
ಕಂಗೋಳಿಸಿದರು ಮುನಿ ಸರ್ಪ ಜಿಂಕೆ ಸಿಂಹ ಹುಲಿ ಸೈನ್ಯ್ಮಧ್ಯೆ,I
ಸಂತೋಷಪಟ್ಟರು ಕಂಡು ನನ್ನ, ಕೇಳಿದರುII
ಬಂದ ಉದೇಶ:‘ ಓ ಸಭ್ಯ ಸಂಪತಿ,ನಿನ್ನ ಪಕ್ಕಗಳು ಸುಟ್ಟಿವೆ,I
ಆದರೂ ಜೀವಂತವಿ,ನಿನ್ನ ಸಹೋದರ ಜೊತೆII
ನೋಡಿದ್ದೆ ಹಿಂದೆ; ನೀನು ಹಿರಿಯವ, ಜಟಾಯು ನಿನ್ನI
ಕಿರಿಯ ಸಹೋದರ, ನನಗೆ ಭೇಟಿಯಾಗಿ ನಮಸ್ಕರಿಸಿದ್ದು II
ನೆನಪಿದೆ; ಕಾಯಿಲೆಗಿ ಪಕ್ಕಗಳು ಹೀನವಾಗಿವೇ?I
ಯಾರಾದರೂ ಹಾನಿಯುಂಟು ಮಾಡಿದರೇ? ಸವಿಸ್ತಾರದಿ ತಿಳಿಸು’.II
ಕಿಷ್ಕಿಂಧಕಾಂಡ ರಾಮಾಯಣ

ತನ್ನ ಮಾತುಗಳನ್ನು ಕುತೂಹಲದಿಂದ ಕೇಳುತ ಬಳಿ ಕುಳಿತ ವಾನರರನು ನೋಡಿ ಸಂಪತಿಯು ವಾನರ ಮತ್ತು ಅಂಗದನಿಗೆ ತಮ್ಮ ಕಥೆ ಹೇಳಿದನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು “ಓ ವಾನರರೇ, ಮೈಥೇಲಿಯನ್ನು ರಾವಣ ಹೊತ್ತೋಯ್ದ ವಿಷಯವನ್ನು ನಾನು ತಿಳಿದ ಬಗ್ಗೆ ನಿಮಗೆ ಸವಿಸ್ತಾರವಾಗಿ ಹೇಳಿರುವೆ ಈಗ ನಮ್ಮ ಕಥೆ ಕೇಳಿರಿ; ಓ ಅಂಗದಾ, ಪಕ್ಕ-ಸುಟ್ಟುಕೊಂಡು ನಾನು ವಿಂಧ್ಯಪರ್ತದಲ್ಲಿ ಬಿದ್ದು ಅಲ್ಲಿಯೇ ಪ್ರಜ್ಞಾಹೀನತೆಯಲ್ಲಿ ಆರು ದಿನಗಳನ್ನು ಕಳೆದೆನು ; ಆ ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿ ನನಗೆ ದಿಕ್ಕು ತೋಚದಂತಾಯಿತು, ಪ್ರಜ್ಞೆ ಬಂದಾಗ ನನ್ನ ಸುತ್ತವಿದ್ದ ಈ ಪರ್ವತ, ನದಿ, ಮಹಾಸಾಗರ, ಪಕ್ಷಿ ಹಿಂಡು,ಮೊನಚಾದ ಶಿಖರಗಳು, ಕಂದಕ ಗವಿಗಳು ಕಂಡು ದಕ್ಷಿಣ ಮಹಾಸಾಗರತೀರದ ವಿಂಧ್ಯ ಪರ್ವತವೆಂದು ಭಾವಿಸಿದೆನು; ಅಲ್ಲಿಯೇ ಹತ್ತಿರದಲ್ಲಿ ಮುನಿ ನಿಶಾಕರ ಆಶ್ರಮವನ್ನು ಕಂಡೆನು ಹಾಗು ನಿಶಾಕರ ಮುನಿ ಹತ್ತಿರ ಹೋಗಿ ಅವರ ಬಳಿ ಎಂಟು ವರ್ಷ ಈ ಪರ್ವತದಲಿದ್ದೆನು; ಹಿಂದೊಮ್ಮೆನಿಶಾಕರ ಮುನಿ ಬಳಿ ಹೋಗಲು ಬಯಸಿ ಜಟಾಯು ಮತ್ತು ನಾನು ಮುನಿ ಬಳಿ ಹೋಗಿದ್ದೆವು; ಮುನಿಯ ಆಶ್ರಮವು ಸದಾ ಹೂ ಹಣ್ಣುಗಳಿಂದ ಸುಗಂಧಭರಿತವಾಗಿತ್ತು , ಮುನಿ ಸರ್ಪ ಜಿಂಕೆ ಸಿಂಹ ಹುಲಿ ಸೈನ್ಯ್ಮಧ್ಯೆಯಿದ್ದ ದರ್ಶನವಾಯಿತು, ಮುನಿಗಳು ನನ್ನ ಕಂಡು ಸಂತೋಷಪಟ್ಟರು ಹಾಗು ಬಂದ ಉದೇಶ ಕೇಳಿದರು: ‘ ಓ ಸಭ್ಯ ಸಂಪತಿ, ನಿನ್ನ ಪಕ್ಕಗಳು ಸುಟ್ಟಿವೆ ಆದರೂ ನೀನು ಜೀವಂತವಿರುವಿ, ಈ ಹಿಂದೆ ನಿನ್ನನ್ನು ನಿನ್ನ ಸಹೋದರನ ಜೊತೆ ನೋಡಿದ್ದೆನು, ನೀನು ಹಿರಿಯವ, ಜಟಾಯು ನಿನ್ನ ಕಿರಿಯ ಸಹೋದರ, ನೀವು ನನಗೆ ಭೇಟಿಯಾಗಿ ಪಾದಕ್ಕೆ ನಮಸ್ಕರಿಸಿದ್ದು ನೆನಪಿದೆ; ಈಗ ಕಾಯಿಲೆಯಿಂದ ಪಕ್ಕಗಳು ಹೀನವಾಗಿವೇ? ಯಾರಾದರೂ ಹಾನಿಯುಂಟು ಮಾಡಿದರೇ? ಸವಿಸ್ತಾರದಿ ತಿಳಿಸು” ಎಂದು ಮುನಿ ವಿಚಾರಿಸಿದ ಮಾತುಗಳನ್ನು ಸಂಪತಿ ಹೇಳಿದನು, ಸಂಪತಿಯು ಮುನಿ ನಿಶಾಕರಗೆ ಭೇಟಿಯಾದ ಪ್ರಸಂಗವನ್ನು ಮತ್ತು ನಿಶಾಕರ ಮುನಿ ಸಂಪತಿಯ ದುಸ್ಥಿತಿಯ ವಿಚಾರಿಸಿದ ಮತ್ತು ಅವನನ್ನು ಉಪಚರಿಸಿದ ಪ್ರಸಂಗಗಳನ್ನು ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿ ವಿವರಿಸಿರುವರು. ಋಷಿ ಮುನಿಗಳು ಪೂರ್ವ ಪ್ರಾಚೀನ ಕಾಲದ ವಿಜ್ಞಾನಿಗಳು ಮತ್ತು ತಜ್ಞರು ಆಗಿದ್ದರು ಎಂಬ ವಿಷಯ ಈ ಸನ್ನಿವೇಶದಲ್ಲಿ ಸ್ಪಷ್ಟವಾಗುವದು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌