
ಕೇಳಿ ಸಂಪತಿಯ ಮಾತುಗಳನ್ನು ಜಾಂಬವಂತ ಮೇಲೆದ್ದುI
ಉಪವಾಸದಿ, ಗರುಡರಾಜ ಸಂಪತಿಗೆ ನುಡಿದ: II
“ ಬಿಡಿ ಬಿಡಿಸಿ ಹೇಳೆಮಗೆ, ಸೀತೆಯಲ್ಲಿ? ಯಾರು ನೋಡಿದರು?I
ಸೀತೆ-ಕದ್ದವ ಯಾರು?, ವಾನರರಿಗೆ ಸಹಾಯಮಾಡು”; II
ಕೇಳಿದರು ಸಂಪತಿಗೆ ಜಾಂಬವಂತ ವಾನರರು: “ರಾಮ ಲಕ್ಷ್ಮಣರI
ಗುಡುಗಿನ್ವೇಗದ ಬಾಣಕ್ಕೆ ಬಲಿಯಾಗುವನ್ಯಾರು?”; II
ಉಪವಾಸ ತೊರೆದ ವಾನರರ ಕಂಡು ಸಂಪತಿI
ಹುರುದುಂಬಿಸಲವರನು ಸೀತೆ ಬಗ್ಗೆ ಕೇಳೆಂದ್ನುಡಿದ: II
“ಸೀತೆ ಎಲ್ಲಿರುವಳು,ಹೇಗೆ ಅಪಹರಿಸಿದರವಳನು,I
ಕೇಳಿದ್ದನು ನಿಮಗೆ ವಿವರಿಸುವೆ ಕೇಳು, II
ವೃದ್ಧ ನಿತ್ರಾಣನಾಗಿ ಪರ್ವತದ್ಮೇಲೆ ಬಿದ್ದಾಗ ನಾI
ಪಕ್ಷಿಶ್ರೇಷ್ಠ ಸುಪಾರ್ಶವ ನಾಮ ನನ್ನ ಪುತ್ರ ಬದುಕಿಸದೆನ್ನ; II
ಭೂಷಣ ಗಂಧರ್ವರಿಗೆ ಭಾವುಕತೆ, ಹಾವಿಗೆ ಕೋಪ,I
ಜಿಂಕೆಗೆ ಭಯ, ಹಸಿವು ಗರುಡ ಪಕ್ಷಿಗಳಿಗೆ; II
ಒಂದು ದಿನ ನಾ ಹಸಿವಿನಿಂದ ಬಳಲುತಿದ್ದಾಗI
ಸುಪಾರ್ಶವ ಬ್ಯಾಟಿಯಿಲ್ಲದೆ ಸಂಜೆಗೆ ಮರಳಿದ; II
ಕಾರಣ ತಿಳಿಯಲು ಪುತ್ರನ ವಿಚಾರಿಸಲುI
ಮಹೇಂದ್ರ ಪರ್ವತದ್ಮೇಲೆ ನಡೆದ ಘಟನೆ ತಿಳಿಸಿದ: II
‘ ಓ ತಂದೆ,ಆಕಾಶದತೀ ಎತ್ತರಕ್ಕೆ ಹಾರಿI
ಹುಡುಕುತಿದ್ದೆ ಬ್ಯಾಟಿ ಮಹೇಂದ್ರ ಪರ್ವತದಲಿ;II
ಸಹಸ್ರ ಸಹಸ್ರ ಜಲಚರಗಳನ್ನು ಕಂಡೆI
ಮಹಾಸಾಗರದ ಆಳದಲಿ, ಬ್ಯಾಟಿ ಅರಿಸುವಾಗ; II
ದೈತಾಕಾರದ ವ್ಯಕ್ತಿ ಸ್ತ್ರೀಯಳನ್ನು ಹೊತ್ತೋಯ್ಯುತಿದ್ದI
ಆಕಾಶಮಾರ್ಗದಲಿ, ಬೆಳಕಿನಂತೆ ಹೊಳೆಯುತಿದ್ದಳು; II
ನೋಡಿ, ಅವರಿಬ್ಬರನು ಭೇಟೆಯಾಡಲು ಹೋದೆ,I
ತಮ್ಮನ್ನು ಬಿಡುವಂತೆ ನನ್ನಲಿ ಬೇಡಿಕೊಂಡಾ ವ್ಯಕ್ತಿ; II
ಬೇಡಿಕೊಂಡವರ ಮೇಲೆ ಹಲ್ಲೆ ಸರಿಯಲ್ಲಾ, ಅಲ್ವೇ?I
ನನ್ನ ಹೊಗಳುತ ಅತೀವೇಗದಲಿ ಹೋದನವನು; II
ರಾವಣನು ಸೀತೆಯನು ಅಪಹಿಸಿಕೊಂಡ ಹೋದI,
ತಿಳಿಸಿದರು ವಿಷಯ ನನ್ನ ಬಳಿಬಂದ ಮುನಿಗಳು;II
ಸಿಟ್ಟಿನಲ್ಲಿ ಸೀತೆ ಸೀರೆ ಆಭರಣ ಅಸ್ತವ್ಯಸ್ತವಾಗಿದ್ದವುI
ಪದೇ ಪದೇ ಅವಳು ರಕ್ಷಣೆಗೆ ಹಲಬುತಿದ್ದಳು: ರಾಮಾ, ರಾಮಾ’;II
ಬ್ಯಾಟಿಯಿಲ್ಲದೆ ಮರಳಿಬಂದ ನನ್ನ ಪುತ್ರI
ವಿವರಿಸಿದ ಎನಗೆ ನಡೆದೀ ಪ್ರಸಂಗ; II
ನಾನೇ ಅಸಹಾಯಕ ಸೀತೆ ಕೂಗು ಕೇಳಿದ್ದರೂI
ರಾವಣನ ಎದುರಿಸಲು ಅಸಾಧ್ಯ ಅಸಮರ್ಥನಾಗಿದ್ದ ನನಗೂ; II
ನಾನು ಕೇಳಿದ್ದನು ನಿಮಗೆ ತಿಳಿಸಿರುವೆ ಸೀತೆಯನುI
ಹುಡುಕಿ ಬಿಡಿಸಿಕೊಳ್ಳುವದು ನಿಮ್ಮ ಶೂರತನ; II
ಸಾಗಿರಿ ನೀವು ಸುಗ್ರೀವನ ಯೋಚನೆಯಂತೆI
ಸಬಲರು ರಾಮ ಲಕ್ಷ್ಮಣರು ನಿಮ್ಮ ರಕ್ಷಣೆಗೆ; II
ಸಾಕಷ್ಟು ಕಾಲ-ವ್ಯಯವಾಗಿದೆ, ಈಗಾಗಲೆ,I
ಸಾಹಸಿಗಳು ನೀವು ಮುನ್ನುಗ್ಗಿ,ಹಿಂಜರಿಯದೆ”. II
ಕಿಷ್ಕಿಂಧಕಾಂಡ ರಾಮಾಯಣ
ಗಾಯಗೊಂಡ ಬಿದ್ದ ಸಂಪತಿಯು ರಾವಣನು ಸೀತೆಯನ್ನು ಲಂಕೆಗೆ ಹೊತ್ತೋಯ್ದ ಸಂಗತಿಯನ್ನು ತಾನು ತನ್ನ ಮಗನಿಂದ ತಿಳಿದ ವಿಷಯ ಮತ್ತು ತಾನೂ ರಾವಣನಿಂದ ಸೀತೆಯನ್ನು ರಕ್ಷಿಸುಲು ಅಸಮರ್ಥನಿದ್ದ ವಿಷಯಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು ಅದರಲ್ಲಿಯ ಮುಖ್ಯಾಂಶಗಳು: (1)ಜಾಂಬವಂತ ಮತ್ತು ವಾನರರು ಸಂಪತಿಯನ್ನು ಕೋರಿದರು: ಸಂಪತಿಯ ಮಾತುಗಳನ್ನು ಕೇಳಿದ ಜಾಂಬವಂತನು ಉಪವಾಸದಿಂದ ಮೇಲೆದ್ದು ಗರುಡರಾಜ ಸಂಪತಿಗೆ ತಮಗೆ ಬಿಡಿ ಬಿಡಿಸಿ ಹೇಳು, ಸೀತೆಯಲ್ಲಿ? ಯಾರು ನೋಡಿದರು? ಸೀತೆ-ಕದ್ದವ ಯಾರು?, ವಾನರರಿಗೆ ಸಹಾಯಮಾಡು ಎಂದು ಜಿಜ್ಞಾಸೆಯಿಂದ ಕೋರಿದನು, ಅದೇ ಕ್ಷಣ ಜಾಂಬವಂತ ಮತ್ತು ವಾನರರು ಕೂಡಿ ಸಂಪತಿಗೆ “ರಾಮ ಲಕ್ಷ್ಮಣರ ಗುಡುಗಿನ್ವೇಗದ ಬಾಣಕ್ಕೆ ಬಲಿಯಾಗುವನ್ಯಾರು?” ಎಂದು ವಿನಯದಿಂದ ಪ್ರಶ್ನಿಸಿದರು; ವಾನರರು ಸಂಪತಿಯಿಂದ ಸೀತೆಯ ವಿಷಯ ತಿಳಿಯಲು ಪ್ರಯತ್ನಿಸಿದರು; (2) ಉಪವಾಸ ತೊರೆದು ಜಿಜ್ಞಾಸೆಯುಳ್ಳ ವಾನರರನ್ನು ಹುರುದುಂಬಿಸಲು ಸಂಪತಿಯು ಅವರಿಗೆ ಸೀತೆ ಎಲ್ಲಿರುವಳು ಎಂದು ಹೀಗೆ ಹೇಳಿದನು” ನಾನು ವೃದ್ಧ ನಿತ್ರಾಣನಾಗಿ ಪರ್ವತದ್ಮೇಲೆ ಬಿದ್ದಾಗ ಪಕ್ಷಿಶ್ರೇಷ್ಠ ಸುಪಾರ್ಶವ ನಾಮ ನನ್ನ ಪುತ್ರ ನನ್ನನು ಬದುಕಿಸಿದನು; ಭಾವುಕತೆ ಗಂಧರ್ವರಿಗೆ ಭೂಷಣ, ಹಾವಿಗೆ ಕೋಪ ಭೂಷಣ, ಜಿಂಕೆಗೆ ಭಯ ಭೂಷಣ, ಹಸಿವು ಗರುಡ ಪಕ್ಷಿಗಳಿಗೆ ಭೂಷಣ; ಒಂದು ದಿನ ನಾನು ಹಸಿವಿನಿಂದ ಬಳಲುತಿದ್ದಾಗ ನನ್ನ ಸುಪಾರ್ಶವ ಬ್ಯಾಟಿಯಿಲ್ಲದೆ ಸಂಜೆಗೆ ಮರಳಿದನು ಅದರ ಕಾರಣ ತಿಳಿಯಲು ನಾನು ಪುತ್ರನನ್ನು ವಿಚಾರಿಸಲು ಅವನು ಮಹೇಂದ್ರ ಪರ್ವತದ್ಮೇಲೆ ನಡೆದ ಘಟನೆಯನ್ನು ತಿಳಿಸಿದನು: ‘ ಓ ತಂದೆ, ನಾನು ಮಹೇಂದ್ರ ಪರ್ವತದಲ್ಲಿ ಆಕಾಶದ ಅತೀ ಎತ್ತರಕ್ಕೆ ಹಾರಿ ಬ್ಯಾಟಿ ಹುಡುಕುತಿದ್ದೆನು; ಹಾರಾಡುವಾಗ ನಾನು ಮಹಾಸಾಗರದ ಆಳದಲಿ ಬ್ಯಾಟಿ ಅರಿಸುವಾಗ ಸಹಸ್ರ ಸಹಸ್ರ ಜಲಚರಗಳನ್ನು ಕಂಡೆನು ಆದರೆ ಅದೇ ವೇಳೆ ಆಕಾಶಮಾರ್ಗದಲ್ಲಿ ದೈತಾಕಾರದ ವ್ಯಕ್ತಿಯು ಒಬ್ಬ ಸ್ತ್ರೀಯಳನ್ನು ಹೊತ್ತೋಯ್ಯುತಿದ್ದನು, ಅವಳು ಬೆಳಕಿನಂತೆ ಹೊಳೆಯುತಿದ್ದಳು; ಅದನ್ನು ನೋಡಿ ಅವರಿಬ್ಬರನು ಭೇಟೆಯಾಡಲು ಅವರ ಹತ್ತಿರ ಹೋದೆನು, ನನ್ನ ಕಂಡ ಆ ವ್ಯಕ್ತಿಯು ತಮ್ಮನ್ನು ಬಿಡುವಂತೆ ನನ್ನಲ್ಲಿ ಬೇಡಿಕೊಂಡನು, ಬೇಡಿಕೊಂಡವರ ಮೇಲೆ ಹಲ್ಲೆ ಸರಿಯಲ್ಲಾ, ಅಲ್ವೇ? ಹಾಗು ನನ್ನ ಹೊಗಳುತ ಅವನು ಅತೀವೇಗದಲಿ ಹೋದನು; ನಂತರ ನನ್ನ ಬಳಿ ಬಂದ ಮುನಿಗಳು ರಾವಣನು ಸೀತೆಯನ್ನು ಅಪಹಿಸಿಕೊಂಡು ಹೋದ ವಿಷಯ ತಿಳಿಸಿದರು; ಸಿಟ್ಟಿನಲ್ಲಿದ್ದ ಸೀತೆಯ ಸೀರೆ ಆಭರಣಗಳು ಅಸ್ತವ್ಯಸ್ತವಾಗಿದ್ದವು, ಪದೇ ಪದೇ ಅವಳು ರಕ್ಷಣೆಗೆ ರಾಮಾ, ರಾಮಾ ಎಂದು ಕೂಗಿ ಕರೆಯುತಿದ್ದಳು; ಆ ದಿನ ಬ್ಯಾಟಿಯಿಲ್ಲದೆ ನನ್ನ ಪುತ್ರ ಮರಳಿಬಂದು ನನಗೆ ನಡೆದ ಪ್ರಸಂಗವನ್ನು ವಿವರಿಸಿದನು” ಎಂದು ಸೀತೆಯನ್ನು ರಾವಣ ಹೊತ್ತೋಯ್ದ ಸುಳಿವನ್ನು ನೀಡಿದನು.” ಸಂಪತಿಯು ತನ್ನ ಮಗನ ಮೂಲಕ ಸೀತೆಯನ್ನು ರಾವಣ ಅಪರಿಸಿ ಲಂಕಗೆ ಒಯ್ದ ಪ್ರಸಂಗವನ್ನು ವಾನರರಿಗೆ ಹೇಳಿದನ್ನು ಆದಿಕವಿ ವಿವರಿಸುವಾಗ (ಅ) ಸಂಪತಿಯ ಮಗನ ಶೌರ್ಯವನ್ನು ತಿಳಿಸುವದರ ಜೊತೆ ರಾವಣನು ಅವನಲ್ಲಿ ವಿನಂತಿಸಿಕೊಂಡು ಪಾರಾದ ವಿಷಯವನ್ನು ತಿಳಿಸಿರುವರು ಹಾಗು(ಬ) ಅಸಹಾಯಕ ತಂದೆಯನ್ನು ರಕ್ಷಿಸುವ ಮತ್ತು ಬದುಕಿಸಿದ ಸಂಪತಿ ಮನಗ ಗುಣವನ್ನು ತಿಳಿಸುವದರ ಜೊತೆಗೆ ತಂದೆಯ ಸೇವೆ ಪುತ್ರಧರ್ಮ ಎಂಬದನ್ನು ತಿಳಿಸಿರುವರು; (2) ಸಂಪತಿಯೂ ಸೀತೆಯ ಕೂಗು ಕೇಳಿದನ್ನು ತಿಳಿಸುವನು: ವಾನರರಿಗೆ ಸಂಪತಿಯು ತಾನೇ ಅಸಹಾಯಕ ಸ್ಥಿತಿಯಲ್ಲಿದ್ದಾಗ ತನಗೂ ಸೀತೆಯ ಕೂಗು ಕೇಳಿದ್ದರೂ ರಾವಣನ ಎದುರಿಸಲು ತಾನೂ ಅಸಮರ್ಥನಾಗಿದ್ದೆ; ಎಂದು ಹೇಳುತ “ಸೀತೆಯನ್ನು ಹುಡುಕಿ ಬಿಡಿಕೊಳ್ಳುವದು ನಿಮ್ಮ ಶೂರತನ; ನೀವು ಸುಗ್ರೀವನ ಯೋಚನೆಯಂತೆ ಸಾಗಿರಿ, ನಿಮ್ಮ ರಕ್ಷಣೆಗೆ ರಾಮ ಲಕ್ಷ್ಮಣರು ಸಬಲರು; ಈಗಾಗಲೆ ಸಾಕಷ್ಟು ಕಾಲ-ವ್ಯಯವಾಗಿದೆ, ನೀವು ಸಾಹಸಿಗಳು ಹಿಂಜರಿಯದೆ ಮುನ್ನುಗ್ಗಿರಿ” ಎಂದು ಪ್ರೋತ್ಸಾಹ ನೀಡುವ ಮಾತುಗಳನ್ನು ಆಡಿದ್ದನ್ನು ಆದಿಕವಿಯು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
