
ಕೇಳಿ ಹನುಮನ ವಚನ ಇಚ್ಛಾರೂಪಧಾರಣಿ ಸುರಸಾI
“ನನ್ನಿಂದ್ಯಾರು ತಪ್ಪಿಸಿಕೊಳ್ಳಲಾರರು, ನನಗಿದೆ ವರದಾನ, II
ಓ ವಾನರಾ, ಮೊದಲು ನನ್ನ ಬಾಯಿ ಸೇರು,I
ನಂತರ ಎಲ್ಲಾದರೂ ಹೋಗು” ಎಂದಳು ಹನುಮಗೆ,II
ಹನುಮನ ಎದಿರು ನಿಂತು ಸುರಸಾI
ನುಂಗಲು ಹನುಮನ ವಿಶಾಲ ಬಾಯಿ ತೆರೆದಳು, II
ಸುರಸಾಳ ಕಂಡು ಹನುಮ ಉಬ್ಬಿಸಿಕೊಂಡ ದೇಹ, I
ಹತ್ತು ಯೋಜನೆ ಉದ್ದ, ಹತ್ತು ಯೋಜನೆ ಅಗಲ, ಕೋಪದಿ, II
ಹನುಮನ ಕಾರ ಕಂಡು ಸುರಸಾI
ಇಮ್ಮಡಿ ಹೆಚ್ಚಿಸಿಕೊಂಡಳು ತನ್ನ ಬಾಯಿ, II
ಇಬ್ಬರಲ್ಲಿಯೂ ಪೈಪೋಟಿ ನಡೆಯಿತು I
ಯೋಜನೆ ಯೋಜನೆಗಳ ದೇಹ, ಬಾಯಿ ಹೆಚ್ಚಿಸಿ ಕೊಳ್ಳುವ, II
ಸುರಸಾ ತೊಂಬತ್ತು ಯೋಜನೆ ಬಾಯಿ ಹೆಚ್ಚಿಸಿದಾಗI
ಜಾಣ ಹನುಮ ಕುಗ್ಗಿಸಿದ ತನ್ನ ದೇಹ, II
ಸುರಸಾಳ ಅತೀ ವಿಶಾಲ ಬಾಯಲ್ಲಿ ಹೊಕ್ಕುI
ಹೊರಬಿದ್ದನು ತಕ್ಷಣ ಹನುಮ ಚಾಣಾಕ್ಷದಿ, II
ಹೊರ ನಿಂತು ಹನುಮ ಹೇಳಿದ ಸುರಸಾಳಿಗೆ I
“ಓ ದಕ್ಷಪುತ್ರಿ,ನಿನ್ನ ಬಾಯಲ್ಲಿ ಹೋಗಿ ಬಂದೆನು ನಿನಗೆ ಶುಭವಾಗಲಿ, II
ಪೂರೈಸಿದೆ ನಿನ್ನ ವರ, ಹೊರಡುವೆ ಸೀತೆ ಹುಡುಕಲು”;I
ಗ್ರಹಣದಿ ಹೊರಬಂದ ಚಂದ್ರನಂತೆ ಹನುಮನ ಕಂಡು ನುಡಿದಳುII
ಹನುಮನಿಗೆ ಸುರಸಾ, “ಓ ಸೌಮ್ಯನೇ, ನಿನ್ನ ಅನಕೂಲದಂತೆ ಹೊರಡು, I
ರಾಮ ಸೀತೆ ಜತೆಯಾಗಿ ಬಾ ತಂದುಬಿಡು”; II
ಕಂಡು ಹನುಮನ ಮೂರನೇ ಕಠಿಣ ಸಾಹಸI
ಹೊಗಳಿದರು ಜೀವಿಗಳೆಲ್ಲ “ಭಲೆ, ಭಲೆ” ಎಂದು, II
ವೇಗದಿ ಗರುಡನಂತೆ ಆಕಾಶ ಸೇರಿದ ಹನುಮI
ಮುಂದು ವರೆಸಿದ ತನ್ನ ಪಯಣ, II
ವಾಯುಮಾರ್ಗದಲಿ ಕಂಡನು ಹನುಮI
ವಿಮಾನಗಳ ಹಾರಾಟ, ಹಿಂಡು ಹಿಂಡಾಗಿ, II
ತಂಬೂರಿ ವಾದ್ಯಗಳೊಂದಿಗೆ ಗಂಧರ್ವರು ವಿಮಾನಗಳಲಿI
ಸಿಂಹ ಹುಲಿ ಆನೆ ಸರ್ಪಗಳೊಂದಿಗೆ ಪಯಣಿಸುತಿದ್ದರು, II
ನಾಗ ಯಕ್ಷ ಗಂಧರ್ವ ವಿಧ್ಯಾಧರ,ಮಹಾ ಮುನಿಗಳಿದ್ದರು,I
ಗಂಧರ್ವರಾಜ ವಿಶ್ವಾವಸು ವಿಹರಿಸುತಿದ್ದರು, II
ಚಂದ್ರ, ಸೂರ್ಯ ಗ್ರಹ ನಕ್ಷತ್ರ ಮಾರ್ಗಗಳಲಿI
ವಿಹರಿಸುವ ಅಲಂಕೃತ ವಿಮಾನಗಳು ಕಂಡವು; II
ವಾಯುಸುತ ಹನುಮ ಆಕಾಶದಲಿ ಹಾರುತಿದ್ದI
ವಿಶಾಲ ರೆಕ್ಕೆಯ ಗರುಡನಂತೆ ನಿರ್ಭಯದಿ, II
ಸುಂದರಕಾಂಡ
ಹಾರಿಹೊಂಡು ಸಮುದ್ರ ದಾಟುವಾಗ ಹನುಮಾನನಿಗೆ ಅಡತಡೆಯಾಗಿ ಅವನನ್ನು ಭಕ್ಷಿಸಲು ನಿಂತ ಸುರಸಾಳ ಸಾಹಸ ಪ್ರಸಂಗೌನ್ನು ಆಹಿಕವಿ ಮಾಲ್ಮೀಕಿಯು ಬಣ್ಣಿಸಿರುವರು, ಅದರಲ್ಲಿ ಮುಖ್ಯಾಂಶಗಳು: (1) ಹನುಮಾನ ಮತ್ತು ಸುರಸಾಳ ಮಧ್ಯೆ ಪೈಪೋಟಿ: ಕೇಳಿ ಹನುಮನ ವಚನ ಇಚ್ಛಾರೂಪಧಾರಣಿ ಸುರಸಾಳು ಹನುಮನಿಗೆ ನುಡಿದಳು: “ನನ್ನಿಂದ್ಯಾರು ತಪ್ಪಿಸಿಕೊಳ್ಳಲಾರರು, ನನಗಿದೆ ವರದಾನ; ಓ ವಾನರಾ, ಮೊದಲು ನನ್ನ ಬಾಯಿ ಸೇರು, ನಂತರ ಎಲ್ಲಾದರೂ ಹೋಗು”; ಹನುಮನ ಎದಿರು ನಿಂತು ಸುರಸಾ ಅವನನ್ನು ನುಂಗಲು ವಿಶಾಲ ಬಾಯಿ ತೆರೆದಳು; ಸುರಶಾಳ ವಿಶಾಲ ಬಾಯಿ ಕಂಡು ಹನುಮನು ತನ್ನ ದೇಹವನ್ನು ಹತ್ತು ಯೋಜನೆ ಉದ್ದ, ಹತ್ತು ಯೋಜನೆ ಅಗಲ ಉಬ್ಬಿಸಿ ಕೊಂಡನು; ಹನುಮನ ದೇಹಾಕಾರ ಕಂಡು ಸುರಸಾ ಇಮ್ಮಡಿ ಹೆಚ್ಚಿಸಿಕೊಂಡಳು ತನ್ನ ಬಾಯಿಯನ್ನು ಹೀಗೆ ಇಬ್ಬರಲ್ಲಿಯೂ ಯೋಜನೆ ಯೋಜನೆಗಳ ದೇಹ, ಬಾಯಿ ಹೆಚ್ಚಿಸಿ ಕೊಳ್ಳುವ ಪೈಪೋಟಿ ನಡೆಯಿತು; ಅಂತ್ಯದಲಿ ಸುರಸಾಳು ತನ್ನ ಬಾಯಿಯನ್ನು ತೊಂಬತ್ತು ಯೋಜನೆ ಹೆಚ್ಚಿಸಿದಾಗ ಜಾಣ ಹನುಮ ತಕ್ಷಣ ತನ್ನ ದೇಹವನ್ನು ಕುಗ್ಗಿಸಿದನು ಹಾಗು ತಕ್ಷಣ ಹನುಮನು ಚಾಣಾಕ್ಷದಿಂದ ಸುರಸಾಳ ಅತೀ ವಿಶಾಲ ಬಾಯಲ್ಲಿ ಹೊಕ್ಕು ಹೊರಬಿದ್ದನು (2) ಸವಾಲುಗಳನ್ನು ಎದಿರಿಸುವ ದೂರದೃಷ್ಠಿ, ಧೈರ್ಯ, ಜಾಣ್ಮೆ, ನಿಪುನತೆ ವ್ಯಕ್ತಿಯಲ್ಲಿರಬೇಕು: ಆದಿಕವಿ ಹನುಮನ ಮೂಲಕ ಬದುಕಿನಲ್ಲಿ ಬರುವ ಕಠಿಣ ಸವಾಲುಗಳನ್ನು ಎದಿರಿಸುವ ಜಾಣ್ಮೆಯನ್ನು ಸಮರ್ಥಿಸಿರುವರು: ಹನುಮನು ಮಹಾಸರ್ಪ ಸುರಸಾ ಅವನ್ನನ್ನು ನುಂಗಲು ಬಂದಾಗ ಚಾಣಾಕ್ಷತೆಯಿಂದ ಪಾರಾಗಿ ಅವಳಿಗೆ ಹೇಳಿದನು: “ಓ ದಕ್ಷಪುತ್ರಿ, ನಿನ್ನ ಬಾಯಲ್ಲಿ ಹೋಗಿ ಬಂದೆನು ನಿನಗೆ ಶುಭವಾಗಲಿ, ನಾನು ನಿನ್ನ ವರ ಪೂರೈಸಿದೆನು, ನಾನು ಸೀತೆಯನು ಹುಡುಕಲು ಹೊರಡುವೆ”; ಹನುಮನ ಜಾಣ್ಮೆ ಮೆಚ್ಚಿ ಅವನಿಗೆ ಸುರಸಾಳು “ಓ ಸೌಮ್ಯನೇ, ನಿನ್ನನಕೂಲದಂತೆ ಹೊರಡು, ರಾಮ ಸೀತೆಯರನು ಜತೆಯಾಗಿ ತಂದುಬಿಡು”ಎಂದು ಹಾರೈಸಿದಳು. (3) ಹನುಮಾನನ ಸಾಹಸ ನೋಡಿ ಜೀವರಾಶಿಗಳು ಮೆಚ್ಚುಗೆ ವ್ಯಕ್ತಪಡಿಸಿದವೂ: ಹನುಮನ ಸಮುದ್ರದಾಟುವ ಸಾಹಸ, ಮೈನಕ-ಪರ್ವತ ಸಂವಾದ ಮತ್ತು ಮಹಾಸರ್ಪ ಸುರಸಾಳಿಂದ ಬದುಕಿಬಂದ ಸಾಹಸ ಹೀಗೆ ಮೂರು ಕಠಿಣ ಸಾಹಸಗಳನ್ನು ಕಂಡು ಜೀವಿಗಳೆಲ್ಲ “ಭಲೆ, ಭಲೆ” ಎಂದು ಹೊಗಳಿದವು; (4) ವಿಮಾನ ಸಾರಿಗೆ ಸರ್ವಸಾಮಾನ್ಯವಾಗಿತ್ತು: ಹನುಮ ತಾನು ಹೊರಟ ವಾಯು ಮಾರ್ಗದಲಿ ಹಿಂಡು ಹಿಂಡಾಗಿ ವಿಮಾನಗಳ ಹಾರಾಟ ಕಂಡನು, ವಿಮಾನಗಳಲಿ ತಂಬೂರಿ ವಾದ್ಯಗಳೊಂದಿಗೆ ಗಂಧರ್ವರು ಸಿಂಹ ಹುಲಿ ಆನೆ ಸರ್ಪಗಳೊಂದಿಗೆ ಪಯಣಿಸುತಿದ್ದರು, ನಾಗ ಯಕ್ಷ ಗಂಧರ್ವ ವಿಧ್ಯಾಧರ, ಮಹಾ ಮುನಿಗಳಿದ್ದರು; ಚಂದ್ರ, ಸೂರ್ಯ ಗ್ರಹ ನಕ್ಷತ್ರಗಳ ಮಾರ್ಗಗಳಲಿ ವಿಹರಿಸುವ ಅಲಂಕೃತ ವಿಮಾನಗಳು ದೃಶ್ಯ ಸರ್ವಸಾಮಾನ್ಯವಾಗಿದ್ದನ್ನು ಆದಿಕವಿಯು ತ್ರೇತಾಯುಗದ ಫಲಿತ ಉತ್ಕೃಷ್ಟ ನಾಗರಿಕತೆಯ ಚಿತ್ರ ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
