
ಕಂಡು ಸಮುದ್ರ ಮಧ್ಯೆ ಎದ್ದನಿಂತ ಪರ್ವತI
ತನ್ನ ದಾರಿಗೆ ಅಡತಡೆಯೆಂದೇ ಭಾವಿಸಿದ ಹನುಮಾನ,II
ಮೋಡಗಳಿಗೆ ಎದೆಯೊಡ್ಡಿದಂತೆ ವಾಯುದೇವI
ಪರ್ವತಕ್ಕೆ ರಭಸದಿ ಎದೆಯೊಡ್ಡಿದ ಹನುಮಾನ, II
ಕೆಳಗೆ ಕುಸಿದು ರಭಸಕ್ಕೆ ಮಹಾಕಪಿಯI
ಹರುಷದಿ ಹೊಗಳಿತು ಮೈನಕ-ಪರ್ವತ, II
ಹರುಷದಿ ವಾತ್ಸಲ್ಯ ಮಾತುಗಳಾಡಿತುI
ಮೈನಕ-ಪರ್ವತ ಆಕಾಶದಲ್ಲಿಯ ಹನುಮನಿಗೆ, II
“ಓ ಮಹಾನ್ ವಾನರನೇ,ಸಮುದ್ರ ದಾಟುವ ಅಸಾಧ್ಯವನುI
ಸಾಧ್ಯ ಮಾಡಿತಿರುವಿ, ಕೆಲಕ್ಷಣ ವಿಶ್ರಾಮಿಸು ನನ್ನಲಿ, II
ರುಚಿಕರ ಸುವಾಸನೆ ಹಣ್ಣು ಗೆಡ್ಡೆ ಸೇವಿಸು,I
ವಿಶ್ರಾಮಿಸಿ, ಮುಂದುವರೆಸು ಉಳಿದ ಪಯಣ, II
ಧರ್ಮ ಬಲ್ಲವ, ಧರ್ಮಾರ್ಜಕ ಸಾಮಾನ್ಯನಿದ್ದರೂI
ಆತಿಥ್ಯಕ್ಕೆ ಅರ್ಹ,ನೀನು ಮಹಾನ್ ಅತಿಥಿ, II
ಓ ಮಹಾನ್ ವಾನರನೇ ಕೇಳು, I
ಕೃತ-ಯುಗದಲ್ಲಿ ಪರ್ವತಗಳಿಗೆ ರೆಕ್ಕೆಗಳಿದ್ದವು, ಗರುಡನಿಗೆ ಸಮ ಹಾರುತಿದ್ದವು, II
ತಮ್ಮ ಮೇಲೆ ಪರ್ವತಗಳು ಬೀಳಬಹುದೆಂದುI
ಹೆದರಿದವು ಜೀವಿಗಳು, ಮುನಿಗಳು, ದೇವತೆಗಳು,II
ದೇವೆಂದ್ರನು ನೂರು ಅಶ್ವಮೇಧಯಜ್ಞ ಮಾಡಿದI
ವಜೃಆಯುಧದಿ ಕತ್ತರಿಸಿದ ಪರ್ವತಗಳ ರೆಕ್ಕೆ, II
ವಜ್ರಾಯುಧದಿ ಬಳಿ ಬಂದಾಗ ನನ್ನI
ತಳ್ಳಿತು ವಾಯು ಸಮುದ್ರತಳಕೆ ನನ್ನ,II
ವಾಯುದೇವ ನಿನ್ನ ತಂದೆ, ಪ್ರತ್ಯುಪಕಾರಕ್ಕಾಗಿI
ಕೊಡು ನನಗೆ ನಿನ್ನ ಸೇವೆ ಅವಕಾಶ, II
ಓ ಮಹಾ ವಾನರನೇ,ನಮ್ಮ ಪ್ರೀತಿ ಮನ್ನಿಸುI
ನನ್ನಲಿ ವಿಶ್ರಮಿಸಿ, ನನಗೆ ಅಪಾರ ಸಂತೋಷ ನೀಡು”; II
ಪರ್ವತಕ್ಕೆ ಉತ್ತರಿಸಿದ ಹುನುಮ “ ನಿನ್ನ ಕೋರಕೆI
ನನಗೆ ಆತಿಥ್ಯ ಸಿಕ್ಕಂತೆ, ನನಗೆ ಸಂತೋಷ ತಂದಿತು,II
ದಿನ ಗತಿಸುತ್ತಿದೆ, ವಿಶ್ರಮಿಸಲಾರೆ ಕಾರ್ಯ ಮಧ್ಯೆI
ವಚನದಂತೆ ನನ್ನ ಕಾರ್ಯ ನಿರ್ವಹಿಸಬೇಕು”, II
ಬಳಿ ಬಂದು ಪರ್ವತ ಮುಟ್ಟಿI
ನಗುತ್ತ ಆಕಾಶಕ್ಕೆ ಮರಳಿದ ಹನುಮ, II
ವೇಗದಿ ಆಕಾಶದಲ್ಲಿ ಹಾರುತ ಧೈರ್ಯದಿI
ಹನುಮ ಬೆಳೆಸಿದ ತನ್ನ ಪಯಣ, II
ರೇಗಿಸಿದರು ದೇವ ಮುನಿಗಳು ಸರ್ಪಕುಲ ಮಾತೆI
ಸುರಸಾಳು ಹನುಮನ ಪರೀಕ್ಷಿಸಲು, II
ಪರ್ವತಗಾತ್ರದ, ಭಯಾನಕ ಕೋರೆಗಳI
ಕೆಂಪು-ಹುಬ್ಭಗಳ ಸುರಸಾ ಅಡ್ಡಗಟ್ಟಿದಳು ಹನುಮನ, II
ಸುರಸಾ ನುಡಿದಳು “ ಓ ವಾನರಾ, ಬಂದಿರುವೆ ನೀ ಆಹಾರವಾಗಿ ನನ್ನ,I
ಪ್ರವೇಸಿಸು ನನ್ನ ಬಾಯಿ”, ನಗುತ್ತ ಕೈಮುಗಿದು II
ಹನುಮ ಸುರಸಾಳಿಗೆ ನುಡಿದ “ ದಶರಥಪುತ್ರ ರಾಮI
ಬಂದಿಹನು ದಂಡಕಾರಣ್ಯಕೆ ಪತ್ನಿ ಸೀತೆ, ತಮ್ಮ ಲಕ್ಷ್ಮಣನೊಂದಿಗೆ, II
ರಾಕ್ಷಸರಾಜ ರಾವಣ ಕದ್ದಿಹನು ಸೀತೆI
ವೈರ ಸಾಧಿಸಲು ರಾಮ ಲಕ್ಷ್ಮಣರೊಂದಿಗೆ, II
ರಾಮ ಧೂತನಾಗಿ ಸೀತೆ ಅರಸಲು ಹೊರಟಿರುವೆ,I
ಓ ರಾಮನ ಪ್ರಜೆ, ಸಹಾಯ ಮಾಡು ನೀ ರಾಮನಿಗೆ, II
ಇಲ್ಲವೆ ಸೀತೆ ಹುಡುಕಿ, ಸುದ್ಧಿ ಮುಟ್ಟಿಸಿ ರಾಮನಿಗೆ, I
ಮರಳಿ ನಿನ್ನ ಬಾಯಿ ಸೇರುವೆ ವಚನದಂತೆ,II
ಸುಂದರಕಾಂಡ
ಸಮುದ್ರ ಮೇಲೆ ಹಾರುವಾಗ ಹನುಮಾನನು ಎದುರಿಸಿದ ಅನೇಕ ಸವಾಲುಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಗಮನಾರ್ಹ ಅಂಶಗಳು:(1)ಸುಕೃತ್ಯ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು: ಸಮುದ್ರ ಮಧ್ಯೆ ಎದ್ದನಿಂತ ಪರ್ವತ ಕಂಡು ಹನುಮಾನ ಅದು ತನ್ನ ದಾರಿಗೆ ಅಡತಡೆಯೆಂದೇ ಭಾವಿಸಿದನು ಹಾಗು ವಾಯುದೇವ/ಗಾಳಿ ಮೋಡಗಳಿಗೆ ಎದೆಯೊಡ್ಡಿದಂತೆ ಹನುಮಾನ ಮೈನಕ- ಪರ್ವತಕ್ಕೆ ರಭಸದಿಂದ ಎದೆಯೊಡ್ಡಿದನು; ಮಹಾಕಪಿ ಹನುಮಾನನ ರಭಸಕ್ಕೆ ಕೇಳಗೆ ಕುಸಿಯಿತು ಮೈನಕ-ಪರ್ವತ ಆದರೆ ಅದು ಹನುಮಾನನನ್ನು ಹರುಷದಿಂದ ಹೊಗಳಿತು ಹಾಗು ವಾತ್ಸಲ್ಯ ಮಾತುಗಳಾಡಿತು “ಓ ಮಹಾನ್ ವಾನರನೇ, ಸಮುದ್ರ ದಾಟುವ ಅಸಾಧ್ಯವನು ಸಾಧ್ಯ ಮಾಡಿತಿರುವಿ, ಕೆಲಕ್ಷಣ ವಿಶ್ರಾಮಿಸು ನನ್ನಲಿ; ರುಚಿಕರ ಸುವಾಸನೆ ಹಣ್ಣು ಗೆಡ್ಡೆ ಸೇವಿಸು, ವಿಶ್ರಾಮಿಸಿ, ಮುಂದುವರೆಸು ಉಳಿದ ಪಯಣ; ಧರ್ಮ ಬಲ್ಲವ, ಧರ್ಮಾರ್ಜಕ ಸಾಮಾನ್ಯನಿದ್ದರೂ ಆತಿಥ್ಯಕ್ಕೆ ಅರ್ಹನು, ನೀನು ಮಹಾನ್ ಅತಿಥಿ; ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಅತಿಥಿಯನ್ನು ಆದರದಿಂದ ಬರಮಾಡಿಕೊಡುವ ಮತ್ತು ಅವರಿಗೆ ಸೇವೆ ಸಲ್ಲಿಸುವ ಪರಂಪರೆಯನ್ನು ಉಲ್ಲೇಖಿಸಿರುವರು; (2)ಹಾರುವ ಪರ್ವತಗಳ ಮಹಾಊಹೆ: ಆದಿಕವಿ ವಾಲ್ಮೀಕಿ ಮೈನಕ-ಪರ್ವತ ಮೂಲಕ ಹನುಮನಿಗೆ ಪರ್ವತಗಳ ಗತ ವೈಭವವನ್ನು ಹೇಳುವನು: “ಓ ಮಹಾನ್ ವಾನರನೇ ಕೇಳು, ಕೃತ-ಯುಗದಲ್ಲಿ ಪರ್ವತಗಳಿಗೆ ರೆಕ್ಕೆಗಳಿದ್ದವು, ಗರುಡನಿಗೆ ಸಮ ಹಾರುತಿದ್ದವು, ತಮ್ಮ ಮೇಲೆ ಪರ್ವತಗಳು ಬೀಳಬಹುದೆಂದು ಹೆದರಿದವು ಜೀವಿಗಳು, ಮುನಿಗಳು, ದೇವತೆಗಳು; ದೇವೆಂದ್ರನು ನೂರು ಅಶ್ವಮೇಧಯಜ್ಞ ಮಾಡಿದ ಹಾಗು ತನ್ನ ವಜೃ ಆಯುಧದಿಂದ ಪರ್ವತಗಳ ರೆಕ್ಕೆಗಳನುಕತ್ತರಿಸಿದ.
ಅದೇ ವೇಳೆ ವಜ್ರಾಯುಧದಿಂದ ದೇವೆಂದ್ರನು ಮೈನಕನ ಪರ್ವತ ಬಳಿ ಬಂದಾಗ ವಾಯುದೇವ ತನನ್ನು ಸಮುದ್ರತಳಕೆ ತಳ್ಳಿದನು, ಅದರ ಪ್ರತ್ಯುಪಕಾರಕ್ಕಾಗಿ ತನಗೆ ಸೇವೆ ಅವಕಾಶ ಕೊಡು; ಪ್ರೀತಿ ಮನ್ನಿಸು, ವಿಶ್ರಮಿಸಿ, ತನಗೆ ಅಪಾರ ಸಂತೋಷ ನೀಡು ಎಮದು ಹನುಮಾನನಿಗೆ ಪರ್ತವಗಳ ಕಥೆ ಹೇಳುತ ತನ್ನ ಆತಿಥ್ಯ ಸ್ವೀಕರಿಸಲುಮೈನಕ ಪರ್ವತ ಕೋರಿತು. ಆದಿಕವಿ ವಾಲ್ಮೀಕಿಯುʻ ಕೃತ-ಯುಗದಲ್ಲಿ ಪರ್ವತಗಳಿಗೆ ರೆಕ್ಕೆಗಳಿದ್ದವುʼ ಎಂದು ಮಹಾ ಊಹೆಯನ್ನು ಆಲೋಚಕ ವ ವಿಜ್ಞಾನಿಗಳ ಮುಂದೆ ಇಟ್ಟಿರುವರು, ಅವರ ಆ ಮಹಾಪರಿಕಲ್ಪನೆಯು ಆ ಕಾಲದ ಭೂಗ್ರಹದ ಗುರುತ್ವಾಕರ್ಷಣೆಯ ಕರಿತು ಜಿಜ್ಞಾಸೆಯನ್ನು ಹುಟ್ಟು ಹಾಕುವದು, ಪೃವತಗಳಂತಹ ಜಡವಸ್ತುಗಳು ಭೂಗ್ರಹದ ಮೇಲೆ ತೇಲುವದು, ದೈತ ಪ್ರಾಣಿ, ಪಕ್ಷಿಗಳು ಹಾರುವದು ವ ತೇಲುವ ಘಟನೆಗಳು ಅಂದಿನ ಕಾಲದ ಭೂಮಂಡಳದ ಗುರುತ್ವಾಕರ್ಷಣೆ ಶಕ್ತಿ ಕುರಿತು ಅಧ್ಯಯನಕ್ಕಾಗಿ ಸಂಶೋಧನೆಗೆ ಬಾಗಿಲು ತಗೆದಿರುವದು; ಭೂಗ್ರಹವು ಮೂಲತಃ ನಮ್ಮ ಸೌರಮಂಡಲದಲ್ಲಿ ಅಂತರಿಕ್ಷದಿಂದ ಪ್ರವೇಶಗೊಂಡು ಶುಕ್ರ ಮತ್ತು ಮಂಗಳ ಗ್ರಹಗಳ ಮಧ್ಯೆ ಸ್ಥಿರಗೊಂಡಿದೆ ಎಂಬ ಪರಾಚೀನ ಸಿದ್ಧಾಂತವನ್ನು ಪುಷ್ಟಿಕರಿಸುವದು ಹಾಗು ಅಂದಿನಿಂದ ಭೂಗ್ರಹದ ಗುರುತ್ವಾಕರ್ಷಭ ಶಕ್ತಿಯಲ್ಲಿಯ ಬದಲಾವಣೆಗಳು ಆದ ಬಗ್ಗೆ ತಿಳಿಯುಲು ಸಂಶೋಧನೆಗಳಿಗೆ ಆಹ್ವಾನಿಸುವದು; (3)ಪ್ರತ್ಯುಪಕಾರ ಸೇವಾಭಾವನೆ: ವಜ್ರಾಯುಧದಿಂದ ಇಂದ್ರನು ಮೈನಕ-ಪರ್ವತ ಬಳಿ ಬಂದಾಗ ಹನುಮನ ತಂದೆ ವಾಯುದೇವನು ಮೈನಕ-ಪರ್ವತವನ್ನು ಸಮುದ್ರತಳಕೆ ತಳ್ಳಿದನು, ಅಂದಿನಿಂದ ಅದು ಸುರಕ್ಷಿತವಾಗಿ ಸಮುದ್ರಪಾತಳದಲ್ಲಿದೆ ಅದರ ಪ್ರತ್ಯುಪಕಾರಕ್ಕಾಗಿ ಅದು ಹನುಮನಿಗೆ ತನಗೆ ಸೇವೆ ಅವಕಾಶ ಕೊಡು ಎಂದು ಕೋರುವದು “ಓ ಮಹಾ ವಾನರನೇ, ನಮ್ಮ ಪ್ರೀತಿ ಮನ್ನಿಸು, ನನ್ನಲಿ ವಿಶ್ರಮಿಸಿ, ನನಗೆ ಅಪಾರ ಸಂತೋಷ ನೀಡು”; ಹನುಮಾನನು ಅದಕ್ಕೆ ಉತ್ತರಿಸಿದನು “ ನಿನ್ನ ಕೋರಕೆಯೇ ನನಗೆ ಆತಿಥ್ಯ ಸಿಕ್ಕಂತೆ, ನನಗೆ ಸಂತೋಷ ತಂದಿತು, ದಿನ ಗತಿಸುತ್ತಿದೆ, ಕಾರ್ಯ ಸಾಧನೆ ಮಧ್ಯೆ ವಿಶ್ರಮಿಸಲಾರೆ, ನಾನು ವಚನದಂತೆ ನನ್ನ ಕಾರ್ಯ ನಿರ್ವಹಿಸಬೇಕು” ಎನ್ನುತ ಹನುಮಾನ ಪರ್ವತ ಬಳಿ ಬಂದು ಅದನ್ನು ಮುಟ್ಟಿ ನಗುತ್ತ ಆಕಾಶಕ್ಕೆ ಮರಳಿದನು; ಹನುಮನ ಕಾರ್ಯಪ್ರಜ್ಞೆಯನು ಆದಿಕವಿ ವರ್ಣಿಸಿರುವರು; (4) ಹನುಮಾನನಿಗೆ ಸುರಸಾ ಒಡ್ಡಿದ ಪರೀಕ್ಷೆ: ವೇಗದಿಂದ ಆಕಾಶದಲ್ಲಿ ಹಾರುತ ಧೈರ್ಯದಿಂದ ಹನುಮ ತನ್ನ ಪಯಣ ಮುಂದೆವರಿಸಿದನು,ಆ ಮಧ್ಯೆ ದೇವ ಮುನಿಗಳು ಸರ್ಪಕುಲ ಮಾತೆ ಸುರಸಾಳು ಹನುಮನನ್ನು ಪರೀಕ್ಷಿಸಲು ರೇಗಿಸಿದರು ಹಾಗು ಹನುಮನನ್ನು ಪರ್ವತಗಾತ್ರದ, ಭಯಾನಕ ಕೋರೆಗಳ ಕೆಂಪು-ಹುಬ್ಭಗಳ ಸುರಸಾ ಅಡ್ಡಗಟ್ಟಿದಳು ಮತ್ತು ಸುರಸಾ ಹನುಮಾನನಿಗೆ ನುಡಿದಳು “ ಓ ವಾನರಾ, ನೀನಾಗಿಯೇ ನನ್ನ ಆಹಾರವಾಗಿ ನನ್ನ ಬಳಿ ಬಂದಿರುವೆ, ಪ್ರವೇಸಿಸು ನನ್ನ ಬಾಯಿ”; ನಗುತ್ತ ಕೈಮುಗಿದು ಹನುಮನು ಸುರಸಾಳಿಗೆ ನುಡಿದನು “ ದಶರಥಪುತ್ರ ರಾಮ ಬಂದಿಹನು ದಂಡಕಾರಣ್ಯಕೆ ಪತ್ನಿ ಸೀತೆ ಸಹೋದರ ಲಕ್ಷ್ಮಣನೊಂದಿಗೆ, ರಾಕ್ಷಸರಾಜ ರಾವಣನನು ತನ್ನ ವೈರ ಸಾಧಿಸಲು ರಾಮ ಲಕ್ಷ್ಮಣರೊಂದಿಗೆ ಸೀತೆ ಕದ್ದಿಹನು, ನಾನು ರಾಮನ ಧೂತನಾಗಿ ಸೀತೆಯನು ಅರಸಲು ಹೊರಟಿರುವೆ; ಓ ರಾಮನ ಪ್ರಜೆಯೇ, ನೀನೂ ರಾಮನಿಗೆ ಸಹಾಯ ಮಾಡು ಇಲ್ಲವೆ ನಾನು ಸೀತೆಯನು ಹುಡುಕಿ, ರಾಮನಿಗೆ ಸುದ್ಧಿ ಮುಟ್ಟಿಸಿ, ಕೊಟ್ಟ ವಚನದಂತೆ ಮರಳಿ ನಿನ್ನ ಬಾಯಿಗೆ ಆಹಾರವಾಗಿ ಸೇರುವೆ” ಎಂದು ಹನುಮಾನನು ಅವಳಲ್ಲಿ ಕೋರುವನು; ಒಂದು ಪಳ್ಳೆ ಕಾರ್ಯ ಮಾಡಲು ಹೊರಟವರಿಗೆ ನೂರೆಂಟು ವಿಘ್ನಗಳು ಎಂಬ ಲೋಕ ಗಾಧೆಯನ್ನು ಆದಿಕವಿ ವಾಲ್ಮೀಕಿಯು ಲೋಕಕ್ಕೆ ಮನವರಿಕೆ ಮಾಡಿಕೊಟ್ಟಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
