ಪ್ರೀತಿಯ ವಿಷಯವಾಗಿ ತಮ್ಮನನ್ನೇ ಕೊಲೆ ಮಾಡಿದ ಅಣ್ಣ: ಆರೋಪಿ ಪೊಲೀಸ್ ವಶಕ್ಕೆ
ಸೆಕ್ಯುಲರ್ ವಾಯ್ಸ್ ನ್ಯೂಸ್ ಗದಗ
ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಹೊಲದಲ್ಲಿ ಕುರಿಗಾಹಿ ಅಣ್ಣನಿಂದಲೇ ತಮ್ಮನ ಕೊಲೆಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಚಿಕ್ಕಮುಳಂಗಿ ನಿವಾಸಿಯಾದ ಫಕೀರಪ್ಪ ಈರಪ್ಪ ಕುರುಗಿನಕೊಪ್ಪ (19) ಕೊಲೆಯಾದ ಯುವಕ. ಕೊಲೆ ಆರೋಪಿ ಅಶೋಕನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಹಿನ್ನೆಲೆ
ರಾಮದುರ್ಗ ತಾಲೂಕಿನ ಚಿಕ್ಕಮುಳಂಗಿ ಗ್ರಾಮದವರಾದ ಫಕ್ಕೀರಪ್ಪ ಕುರುಗಿನಕೊಪ್ಪ ಮತ್ತು ಅಶೋಕ ಕುರುಗಿನಕೊಪ್ಪ ಇರ್ವರೂ ಖಾಸಾ ಸಹೋದರರಾಗಿದ್ದು, ಇಬ್ಬರ ನಡುವೆ ದ್ವೇಷ ಬೆಳೆಯಲು ಹುಡುಗಿ ವಿಚಾರವಾಗಿ ಎನ್ನಲಾಗಿದೆ. ಆರೋಪಿ ಅಶೋಕನ ತಮ್ಮ ಫಕ್ಕೀರಪ್ಪನಿಗೆ ಮನೆಯವರು ಹುಡುಗಿ ಗೊತ್ತು ಮಾಡಿದ್ದರು. ಆದರೆ, ಅಣ್ಣ ಅಶೋಕನಿಗೆ ಆ ‘ಹುಡುಗಿ ಮೇಲೆ ಮನಸ್ಸಾಗಿತ್ತು’ ಎಂದು ಹೇಳಲಾಗುತ್ತಿದೆ.
Contents
ಪ್ರೀತಿಯ ವಿಷಯವಾಗಿ ತಮ್ಮನನ್ನೇ ಕೊಲೆ ಮಾಡಿದ ಅಣ್ಣ: ಆರೋಪಿ ಪೊಲೀಸ್ ವಶಕ್ಕೆಸೆಕ್ಯುಲರ್ ವಾಯ್ಸ್ ನ್ಯೂಸ್ ಗದಗನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಹೊಲದಲ್ಲಿ ಕುರಿಗಾಹಿ ಅಣ್ಣನಿಂದಲೇ ತಮ್ಮನ ಕೊಲೆಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಚಿಕ್ಕಮುಳಂಗಿ ನಿವಾಸಿಯಾದ ಫಕೀರಪ್ಪ ಈರಪ್ಪ ಕುರುಗಿನಕೊಪ್ಪ (19) ಕೊಲೆಯಾದ ಯುವಕ. ಕೊಲೆ ಆರೋಪಿ ಅಶೋಕನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಅಶೋಕನಿಗೂ ಮನೆಯವರು ಹುಡುಗಿ ನೋಡಿದ್ದರು. ಆದರೆ, ಆ ಹುಡುಗಿ ಬಗ್ಗೆ ಅಸಮಾಧಾನ ಹೊಂದಿದ್ದ ಆರೋಪಿ ಆಶೋಕ ತಮ್ಮನ ಮೇಲೆ ಅಸೂಯೆ ಹಾಗೂ ದ್ವೇಷ ಹೆಚ್ಚಾದ ಕಾರಣ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಇದೇ ವಿಷಯವಾಗಿ ಸೋಮವಾರ ರಾತ್ರಿ ಅಶೋಕ ತನ್ನ ತಮ್ಮ ಫಕ್ಕೀರಪ್ಪನ ಮೇಲೆ ದೊಡ್ಡದಾದ ಕಲ್ಲು ಎತ್ತಿ ಹಾಕಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ನಂತರ ತಾನೇ ತನ್ನ ತಮ್ಮನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ನರಗುಂದ ಪೊಲೀಸರು ತಿಳಿಸಿದ್ದಾರೆ.

